ಕಾರವಾರದಲ್ಲಿ ನಡೆದ ಶಿಕ್ಷಕ ದಿನಾಚರಣೆ. ಕ್ಷಣದಲ್ಲಿ ಪ್ರೆರೇಪಿಸಿ ಆತ್ಮವಿಶ್ವಾಸ ತುಂಬುವವನೆ ಗುರು : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್.

Source: SO News | By Laxmi Tanaya | Published on 5th September 2021, 9:23 PM | Coastal News |

ಕಾರವಾರ : ವ್ಯಕ್ತಿಗೆ ಒಂದು ಕ್ಷಣದಲ್ಲಿ ಪ್ರೆರೇಪಿಸಿ‌ ಆತ್ಮವಿಶ್ವಾಸ ತುಂಬುವವನೆ ನಿಜವಾದ  ಗುರು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಕಾರವಾರದ ಹಿಂದು ಹೈಸ್ಕೂಲ್ ಸಭಾಭವನದಲ್ಲಿ ಭಾನುವಾರ ಜರುಗಿದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರೆಂದರೆ ಕೇವಲ ಓದಿ, ಮನನ ಮಾಡಿಕೊಳ್ಳುವುದಲ್ಲ. ಡಾ  ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳಿದ ಹಾಗೆ ಚಿಂತನೆ ಮಾಡುವ ಶಕ್ತಿಯನ್ನ ಕೊಡುವವರೆ ನಿಜವಾದ ಶಿಕ್ಷಕರು. ಹಿಂದಿನ ಶಿಕ್ಷಕ ವೃತ್ತಿ ಇಂದಿನ ವೃತ್ತಿ ಬದಲಾಗಿದೆ.
ಚಿಕ್ಕಮಕ್ಕಳಿಗೆ ತಂದೆತಾಯಿ ಹೇಳಬೇಕಾಗಿಲ್ಲ. ಈಗ ಮಗು ಎಲ್ಲದಕ್ಕೂ ಇಂಟರ್ನೆಟ್‌ ಉಪಯೋಗಿಸುತ್ತೆ.
ಹಿಂದಿನ ವಿಚಾರ ಬದಲಾಗಿದೆ ಎಂದರು.

ಕೋವಿಡ್ ಪರಿಸ್ಥಿತಿಯಲ್ಲಿ ಶಿಕ್ಷಕ ಸಮುಹ ತೊಡಗಿಕೊಂಡಿರುವುದು ಪ್ರಶಂಸನೀಯವಾಗಿದೆ. ಕೋವಿಡ್ ನಂತರ ಪಾಲಕರು ಕೂಡ ಬದಲಾಗಿದ್ದಾರೆ. ಸಮಾಜ  ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಿಸಲಾಯಿತು. ಈ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ಡಿಡಿಪಿಐ ಹರೀಶ್ ಗಾಂವಕರ, ಬಿಇಓ ಶಾಂತೇಶ ನಾಯಕ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...