ತಂದೆ ತಾಯಿಗಳ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

Source: so news | By MV Bhatkal | Published on 19th June 2019, 9:09 PM | Coastal News | Don't Miss |

ಭಟ್ಕಳ :ತಾಲೂಕಿನ ಹುರುಳಿಸಾಲಿನ ನಿವಾಸಿಗಳಾದ ವೃತ್ತಿಯಲ್ಲಿ ಶಿಕ್ಷಕರಾದ ವೆಂಕಟೇಶ ನಾರಾಯಣ ನಾಯ್ಕ  ಪಟೇಲರಮನೆ ಇವರ ತಂದೆ ತಾಯಿಗಳ ಅಕಾಲಿಕ ಮರಣದಿಂದ ಅವರ ಮರಣ ದಿನದ ಸವಿನೆನಪಿಗಾಗಿ ಕಳೆದ 9 ವರ್ಷದಿಂದ ಇಲ್ಲಿನ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುತ್ತಾ ಬಂದಿದ್ದು, ಮಂಗಳವಾರದಂದು ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಟ್ಟಳ್ಳಿಗೆ ತೆರಳಿ ವಿದ್ಯಾರ್ಥಿಗಳಿಗೆ ನೋಟ್ ವಿತರಿಸಿದರು. 

ನೋಟಬುಕ್ ವಿತರಣೆ ಮಾಡಿ ಮಾತನಾಡಿದ ಶಿಕ್ಷಕ ವೆಂಕಟೇಶ  ನಾಯ್ಕ `ವಿದ್ಯಾರ್ಥಿಗಳ ಭವಿಷ್ಯದ ದಿಸೆಯಿಂದ ಹಾಗೂ ತಂದೆ-ತಾಯಿಗಳ ಸವಿನೆನಪಿಗಾಗಿ ಉಚಿತ ನೋಟ್ ಬುಕ್ ವಿತರಿಸಲಾಗುತ್ತಿದೆ. ದುಡಿಮೆಯ ಒಂದು ಭಾಗವನ್ನು ಸಮಾಜಮುಖಿ ಕೆಲಕ್ಕೆ ಪ್ರತಿ ವರ್ಷ,ನನ್ನ ಮಡದಿ ಜಯಲಕ್ಷ್ಮೀ ನಾಯ್ಕ ಅವರ ಸಹಕಾರದಿಂದ ಕುಟುಂಬದವರ ಸಹಕಾರದಿಂದ ಈ ಕಾರ್ಯ ಮಾಡುತ್ತಿದ್ದೇನೆ.ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರು ತಂದೆತಾಯಿಗಳ ಹಾಗೂ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ನಾನು ಮಾಡಿದ ಕಾರ್ಯವನ್ನು ಮುಂದಿನ ದಿನದಲ್ಲಿ ದುಡಿಯುವ ವೇಳೆ
ನಿಮ್ಮದಿಂದಾಗುವಷ್ಟು ಸಹಾಯ ಸೇವೆ ಮಾಡಿ ಎಂದು ಕರೆ ನೀಡಿದರು.
ನಂತರ ದಂತ ವೈದ್ಯರಾದ ಡಾ. ರವಿ ಮಾತನಾಡಿ ನಮ್ಮ ಸಮಾಜದಲ್ಲಿ ಇಂತಹ ವ್ಯಕ್ತಿಗಳಿರುವದರಿಂದ ನಮ್ಮ ಸಮಾಜವು ಏಳಿಗೆಯತ್ತ ಮುಖ ಮಾಡುತ್ತದೆ. ಮಕ್ಕಳಾದ  ನಾವು ಎಲ್ಲೇ ಇರಿಬಹುದು ಹೇಗೆ ಇರಿಬಹುದ ಆದರೆ ತಂದೆ ತಾಯಿಗಳು ನಮಗೆ ಮಾಡಿರುವ ತ್ಯಾಗಕ್ಕೆ ನಾವು ಋಣ ತೀರಿಸಲು ಸಾಧ್ಯವಾಗದಿದ್ದರು ಇಂತಹ ಕೆಲಸ ಮಾಡಿ ಅವರ ತ್ಯಾಗಕ್ಕೆ ಪ್ರತಿಫಲ ಕೊಟ್ಟಂತೆ ಆಗುತ್ತದೆ ಅಂದು ಕಿವಿ ಮಾತನ್ನು ಮಕ್ಕಳಿಗೆ ಹೇಳಿದರು.
ಈ ಸಂಧರ್ಭದಲ್ಲಿ ಮುಟ್ಟಳ್ಳಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿದರು. 
ಈಗಿನ ಇಲೆಕ್ಟ್ರಾನಿಕ ಜೀವನ ಶೈಲಿಯಲ್ಲಿ ಸಾಕಿದ ತಂದೆ ತಾಯಿಗಳನ್ನು ಅನಾಥಾಶ್ರಾಮಕ್ಕೊ ಅಥವಾ ದಾರಿಯ ಮೇಲೋ ಮನೆಯಿಂದ ಹೊರಗೆ ಹಾಕುವ ಮಕ್ಕಳ ನಡುವೆ ಅವರ ಅಕಾಲಿಕ ಮರಣದಿಂದ ನೊಂದು ಅವರ ಸವಿನೆನಪನ್ನು ಉತ್ತಮ ಕಾರ್ಯ ಮಾಡುವುದರೊಂದಿಗೆ ಸಾರ್ಥಕತೆಯನ್ನು ಮೆರೆದಿದ್ದಾರೆ.ಈ ಸಂಧರ್ಭದಲ್ಲಿ ಶಾಲೆಯ ಎಸ್.ಡಿ. ಎಂ ಅಧ್ಯಕ್ಷರಾದ ವೆಂಕಟೇಶ ನಾಯ್ಕ, ರಾಜ್ಯ ಸರಕಾರಿ ನೌಕರರ ಸಂಘ ಸದಸ್ಯ ಬಿ.ಕೆ.ನಾಯ್ಕ, ಶಿಕ್ಷಕ ಸಿ.ಡಿ.ಪಡುವಣಿ, ಗಜಾನನ ನಾಯ್ಕ ಮುಖ್ಯ ಶಿಕ್ಷಕರು ವೆಂಕಟೇಶ್ ದೇವಡಿಗ್ ಶಿಕ್ಷಕರು ಉಪಸ್ಥಿತರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...