ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಟಿ.ಬಿ.ಹರಿಕಾಂತ್ ಮರು ಆಯ್ಕೆ

Source: sonews | By Staff Correspondent | Published on 1st August 2020, 6:48 PM | Coastal News |

ಕಾರವಾರ: ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ ಒಂದು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ಶನಿವಾರ ಜರಗಿದ್ದು ಹಿರಿಯ ಪತ್ರಕರ್ತ ಟಿ.ಬಿ.ಹರಿಕಾಂತ್ ಜಿಲ್ಲಾಧ್ಯಕ್ಷರಾಗಿ ಮರು ಆಯ್ಕಯಾಗಿದ್ದಾರೆ.   

ಜಿಲ್ಲಾ ಪತ್ರಿಕಾ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

2020- 21ನೇ ಸಾಲಿಗೆ ಅಧ್ಯಕ್ಷರಾಗಿ ಕರಾವಳಿ ಮುಂಜಾವು ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಟಿ.ಬಿ.ಹರಿಕಾಂತ್ ಅವರು ಪುನರಾಯ್ಕೆ ಆಗಿದ್ದಾರೆ. ನ್ಯೂಸ್ 18 ಕನ್ನಡ ವಾಹಿನಿಯ ವರದಿಗಾರ ದರ್ಶನ್ ನಾಯ್ಕ ಅವರ್ಸಾ ಹಾಗೂ ಕಡಲವಾಣಿ ಪತ್ರಿಕೆಯ ವರದಿಗಾರ ಅರವಿಂದ್ ಗುನಗಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ದಿಗ್ವಿಜಯ ವಾಹಿನಿಯ ವರದಿಗಾರ ಶೇಷಗಿರಿ ಮುಂಡಳ್ಳಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಈಟಿವಿ ಭಾರತ್ ಕನ್ನಡದ ಜಿಲ್ಲಾ ವರದಿಗಾರ ವಾಸುದೇವ ಗೌಡ ಉಡಳ್ಳಿ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಹಾಗೂ ಖಜಾಂಚಿಯನ್ನಾಗಿ ಸುಭಾಷ್ ಧೂಪದಹೊಂಡ ಅವರನ್ನು ಆಯ್ಕೆ ಮಾಡಲಾಗಿದೆ.

ಹಿರಿಯ ಪತ್ರಕರ್ತರಾದ ರಾಮಾ ನಾಯ್ಕ ಹಾಗೂ ಪಿ.ಕೆ.ಚಾಪಗಾಂವ್ಕರ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ನೇತೃತ್ವ ವಹಿಸಿಕೊಂಡಿದ್ದರು. ಪತ್ರಕರ್ತರಾದ ವಸಂತಕುಮಾರ್ ಕತಗಾಲ್, ಸಂದೀಪ್ ಸಾಗರ್, ಎಸ್.ಎಸ್.ಸಂದೀಪ್, ಗುರುಪ್ರಸಾದ್ ಹೆಗಡೆ, ಅಚ್ಯುತ್ ಕುಮಾರ್, ರವಿ ಗೌಡ, ಸುನೀಲ್ ನಾಯ್ಕ ಹಣಕೋಣ, ದೇವರಾಜ ನಾಯ್ಕ, ಗಣೇಶ್ ಹೆಗಡೆ, ದಿನೇಶ್ ಹಿತ್ತಲದವರ್, ಪ್ರಶಾಂತ್ ಮಹಾಲೆ, ಕಿಶನ್ ಗುರವ್, ದಿಲೀಪ್ ರೇವಣಕರ್ ಹಾಜರಿದ್ದರು.

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...