ತಾಲೂಕು ಮಟ್ಟದ ಕ್ರೀಡಾ ಕೂಟ; ನ್ಯೂ ಇಂಗ್ಲಿಷ್ ಪಿಯು ಕಾಲೇಜ್ ಸಾಧನೆ

Source: sonews | By Staff Correspondent | Published on 22nd September 2019, 3:34 PM | Coastal News | Sports News |

ಭಟ್ಕಳ: ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಕಾರವಾರ ಹಾಗೂ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜು ಶಿರಾಲಿ ಸಂಯುಕ್ತ ಆಶ್ರಯದಲ್ಲಿ ನಡೆದ ಭಟ್ಕಳ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆಯೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಲೋಕೇಶ ವಿ.ನಾಯ್ಕ 100 ಮೀ ಓಟದಲ್ಲಿ, ಉದ್ದ ಜಿಗಿತ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ, ಮತ್ತು ಬಾಲಕರ ವೈಯಕ್ತಿಕ ಚಾಂಪಿಯನ್ ಟ್ರೋಪಿಯನ್ನು ಗಳಿಸಿರುತ್ತಾರೆ. ಜಾನಕಿ ಕೆ. ಗೊಂಡ ಎತ್ತರ ಜಿಗಿತದಲ್ಲಿ ಪ್ರಥಮ ಮತ್ತು ತ್ರಿವಿಧ ಜಿಗಿತದಲ್ಲಿ ದ್ವಿತೀಯ, ರಕ್ಷಿತಾ ಡಿ. ನಾಯ್ಕ ಗುಡ್ಡಗಾಡು ಓಟದಲ್ಲಿ ಪ್ರಥಮ, ಶಾರದಾ ಮೋಗೇರ ಗುಡ್ಡಗಾಡು ಓಟದಲ್ಲಿ ಪ್ರಥಮ, ಅನನ್ಯಾ ಭಟ್ ಭರ್ಚಿ ಎಸೆತದಲ್ಲಿ  ಪ್ರಥಮ, ಮಂಗಳಗೌರಿ 100 ಮೀ ಓಟದಲ್ಲಿ ಪ್ರಥಮ, ಛಾಯಾ ವಿ ನಾಯ್ಕ 100 ಮೀ ಮತ್ತು 200 ಮೀ ಓಟದಲ್ಲಿ ದ್ವಿತೀಯ, ಪ್ರಿಯಾ ವಿ. ದೇವಾಡಿಗ ಗುಂಡು ಎಸೆತದಲ್ಲಿ ದ್ವಿತೀಯ, ಜೆಸ್ಸಿಕಾ ಲೂಯಿಸ್ ಮತ್ತು ಲಕ್ಷ್ಮಿಕಾಂತ ಜೆ. ನಾಯ್ಕ  5000 ಮೀ ನಡಿಗೆಯಲ್ಲಿ ದ್ವಿತೀಯ, ಲತಾ ಜಿ. ದೇವಾಡಿಗ 400 ಮೀ ಓಟದಲ್ಲಿ ದ್ವಿತೀಯ, ಸಿಂಧೂ ನಾಯ್ಕ ಹ್ಯಾಮ್ಮರ್ ಎಸೆತ ಮತ್ತು ಚಕ್ರ ಎಸೆತದಲ್ಲಿ ತೃತೀಯ, ನಿಖಿತಾ ನಾಯ್ಕ 800 ಮೀ ಓಟದಲ್ಲಿ ತೃತೀಯ ಹಾಗೂ 4*100 ಮೀ ಬಾಲಕಿಯರ ರಿಲೇಯಲ್ಲಿ ಛಾಯಾ ನಾಯ್ಕ, ಪೂಜಾ ನಾಯ್ಕ, ದೀಪಿಕಾ ಮೊಗೇರ, ಮಂಗಳಗೌರಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
 
ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ ಟ್ರಸ್ಟನ ಅಧ್ಯಕ್ಷ ಡಾ. ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಆರ್.ಜಿ.ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಪ್ರಾಂಶುಪಾಲ ವೀರೇಂದ್ರ ಶಾನಭಾಗ್, ಕ್ರೀಡಾ ಸಂಯೋಜಕರಾದ ಜಯಂತ ನಾಯ್ಕ, ಗುರುರಾಜ ಬಾಳ್ಗಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.
 

Read These Next

ಭಟ್ಕಳ ಜಾಲಿ ಪಟ್ಟಣ ಪಂಚಾಯತನಲ್ಲಿ ಅಂಧಾ ದರ್ಬಾರ್; ಹಾಸನದ ವ್ಯಕ್ತಿಯ ಹೆಸರಿನಲ್ಲಿ ಸುಳ್ಳು ಮರಣ ದಾಖಲೆ; ಕೋಟ್ಯಾಂತರ ರುಪಾಯಿ ವಿಮೆ ಲಪಟಾಯಿಸಲು ಯತ್ನ

ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಆಡಳಿತದ ಅಂಧಾ ದರ್ಬಾರ್‍ಗೆ ಕೊನೆಯೇ ಇಲ್ಲದಂತಾಗಿದೆ. ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ...

ಕಾರವಾರ: ಶಾಲಾ-ಕಾಲೇಜುಗಳಲ್ಲಿ ಮೀತಿಮೀರಿದ ಕೋವಿಡ್ ಪ್ರಕರಣ. ಹೆಚ್ಚಿನ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ.

ಜಿಲ್ಲೆಯಲ್ಲಿ ಶಾಲಾ ಕಾಲೇಜು ಮಟ್ಟದಲ್ಲಿ  ಕೋವಿಡ್ ಸೋಂಕಿನ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ  ಪ್ರಚಲಿತದಲ್ಲಿರುವ ಸರ್ಕಾದ ...

ಕಾರವಾರ: ಜಿಲ್ಲೆಯ ಐದು ತಾಲೂಕಿನ ಶಾಲಾ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು; ಜನವರಿ 26ರವರೆಗೆ ರಜೆ ಘೋಷಣೆ

ಜಿಲ್ಲೆಯ ಯಲ್ಲಾಪುರ, ದಾಂಡೇಲಿ, ಶಿರಸಿ, ಹೊನ್ನಾವರ, ಕುಮಟಾ ತಾಲೂಕಿನ 9 ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಜ. 19 ರಂದು ಕೋವಿಡ್ ಸೋಂಕು ...

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...