ತಾಲೂಕು ಮಟ್ಟದ ಹಿ.ಪ್ರಾ.ಶಾಲಾ ಕ್ರೀಡಾಕೂಟ; ತಟ್ಟಿಹಕ್ಕಲ್ ವಿದ್ಯಾರ್ಥಿಗಳ ಸಾಧನೆ

Source: sonews | By Staff Correspondent | Published on 17th September 2019, 6:44 PM | Coastal News |


ಭಟ್ಕಳ: ತಾಲೂಕಾ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಟ್ಟದ ಇಲಾಖಾ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಟ್ಟಿಹಕ್ಕಲ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 

ಭಾರತಿ ವೆಂಕಟರಮಣ ದೇವಡಿಗ ಈಕೆಯು 600 ಮೀ., 400 ಮೀ., ಓಟದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾಳೆ. 

ಕುಮಾರ ನಾರಾಯಣ ನಾಯ್ಕ ಎತ್ತರ ಜಿಗಿತದಲ್ಲಿ ಪ್ರಥಮ, ರಾಧಿಕಾ ರಾಮಚಂದ್ರ ದೇವಡಿಗ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. 

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ಮೊಗೇರ, ದೈಹಿಕ ಶಿಕ್ಷಣ ಶಿಕ್ಷಕ ಅರುಣ ನಾಯಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗರಾಜ ಕೋಡಿಯಾ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

Read These Next

ಮಾಜಿ ಶಾಸಕ ಮಾಂಕಾಳರ ನೆರವಿನಿಂದ ಭಟ್ಕಳದಿಂದ ಓಡಿಸ್ಸಾ ಕ್ಕೆ ಪ್ರಯಾಣ ಬೆಳೆಸಿದ 70 ಮೀನುಗಾರರು

ಭಟ್ಕಳ: ಸೇವಾ ಸಿಂಧು ಆ್ಯಫ್‍ನಲ್ಲಿ ಹೆಸರು ನೊಂದಾಯಿಸಿ ತಮ್ಮ ರಾಜ್ಯಕ್ಕೆ ಮರಳು  ಕಾಯುತ್ತಿದ್ದ ಒಡಿಸ್ಸಾದ 70 ಮೀನುಗಾರರು ಸೋಮವಾರದಂದು ...