ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ತಾಲ್ಲೂಕು ಆಡಳಿತ

Source: so news | By MV Bhatkal | Published on 7th May 2021, 11:48 PM | Coastal News | Don't Miss |

ಭಟ್ಕಳ : ತಾಲ್ಲೂಕಿನ ಮಾರುಕೇರಿಯ ಕಿತ್ರೆಯಲ್ಲಿ ಶುಕ್ರವಾರ ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು  ತಾಲ್ಲೂಕು ಆಡಳಿತವೇ ನೆರವೇರಿಸಿತು.  
ಶುಕ್ರವಾರ ಬೆಳಗಿನ ಜಾವ ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ  ಕಿತ್ರೆಯಲ್ಲಿ ಕೋವಿಡ್ ಸೋಂಕಿತರೊಬ್ಬರು (60) ಮನೆಯಲ್ಲೇ ತೀವ್ರತರದ ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದರು. ಇವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುರುವಾರ ಸಂಜೆಯಷ್ಟೇ ಮನೆಗೆ ಬಂದಿದ್ದರು. ಇವರ ಅಂತ್ಯ ಸಂಸ್ಕಾರವನ್ನು ನಡೆಸಲು ಕೋವಿಡ್ ಭಯದಿಂದ ಅಂತ್ಯಸಂಸ್ಕಾರಕ್ಕೆ ಯಾರು ಮುಂದೆ ಬಂದಿರಲಿಲ್ಲ.ಮಕ್ಕಳು ಚಿಕ್ಕವರಿರುವ ಕಾರಣ ಮನೆಯವರು ಶವಸಂಸ್ಕಾರಕ್ಕಾಗಿ ತಾಲೂಕಾಡಳಿತದ ಸಹಾಯ ಯಾಚಿಸಿದ್ದರು.ತಾಲ್ಲೂಕು ಆಡಳಿತವೇ ನಡೆಸಲು ಮುಂದಾಯಿತು. ಸ್ಥಳಕ್ಕೆ ತಹಸೀಲ್ದಾರ ರವಿಚಂದ್ರ, ಸಿಪಿಐ ದಿವಾಕರ್, ಜಾಲಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಅಜಯ ಭಂಡಾರಕರ್, ಪಿಡಿಓ ಮಹೇಶ ನಾಯ್ಕ, ವೈದ್ಯರು  ಮತ್ತಿತರ ಅಧಿಕಾರಿಗಳ ತಂಡ  ಭೇಟಿ ನೀಡಿ ಮೃತನ ಅಂತ್ಯಸಂಸ್ಕಾರಕ್ಕೆ ಬೇಕಾಗುವ ಎಲ್ಲಾ ಏರ್ಪಾಟು ಮಾಡಿದರ. ಶುಕ್ರವಾರ ಮಧ್ಯಾಹ್ನ ಕೋವಿಡ್ ಮುಂಜಾಗ್ರತಾಕ್ರಮದೊಂದಿಗೆ  ಮೃತನ ಪುತ್ರನ ಜೊತೆಗೆ ಪಿಪಿಇ ಕಿಟ್ ಧರಿಸಿದ ಜಾಲಿ ಪಟ್ಟಣ ಪಂಚಾಯತ್‍ನ ಪೌರಕಾರ್ಮಿಕರಾದ ಕೃಷ್ಣಾ ಅಣ್ಣಾಮಲೈ, ಶಿವಬಸವ ಕೊರಗಾರ, ರಾಮಾ ಗೊಂಡ, ನಾಗರಾಜ ಮಾಣಿಕ ಅವರು ಮೃತದೇಹವನ್ನು ಹೊತ್ತೊಯ್ದು ಅಂತ್ಯಸಂಸ್ಕಾರಕ್ಕೆ ನೆರವಾದರು. ಮಳೆಯಿಂದಾಗಿ ಅಂತ್ಯಸಂಸ್ಕಾರ ಸ್ವಲ್ಪ ವಿಳಂಬವಾದರೂ ತಹಸೀಲ್ದಾರ, ಸಿಪಿಐ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು, ಮಾರುಕೇರಿ ಗ್ರಾ,ಪಂ. ಸದಸ್ಯ ಎಂ ಡಿ ನಾಯ್ಕ, ಸಾಲಗಾರರ ಸಂಘದ ಅಧ್ಯಕ್ಷ ಗಣಪತಿ ನಾಯ್ಕ ಜಾಲಿ, ಹೊನ್ನಾವರದ ಶಂಕರ ಹೆಗಡೆ ಮತ್ತಿತರರು ಅಂತ್ಯ ಸಂಸ್ಕಾರ ಪೂರ್ಣಗೊಳ್ಳುವ ವರೆಗೂ ಇದ್ದರು. ತಾಲ್ಲೂಕು ಆಡಳಿತದ ಕಾರ್ಯ ಜನಮೆಚ್ಚುಗೆಗೆ ಮೆಚ್ಚುಗೆಗೆ ಪಾತ್ರವಾಗಿದೆ. ಶವಸಂಸ್ಕಾರ ಮಾಡಿದ ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯರವರು ಮಾತನಾಡಿ ಹಿಂದೂಗಳ ಸಂಪ್ರದಾಯದಂತೆ ನಮಗೆ ಶವಸಂಸ್ಕಾರ ಮಾಡುವುದು ಕಷ್ಟವಾಗುತ್ತದೆ. ಚಟ್ಟ ಕಟ್ಟುವುದು. ಮಡಿಕೆ ಓಡೆಯುವುದು ಇನ್ನೀತರ ಸಂಪ್ರದಾಯ ಪಾಲಿಸಿವುದು ನಮಗೆ ಬರದಿದ್ದರೂ ತಿಳಿದ ಮಟ್ಟಿಗೆ ಮಾಡಿ ಮುಗಿಸಿದ್ದೇವೆ.ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಇಂತಹ ಕೆಲಸಗಳನ್ನು ಮಾಡಿದರೆ ಉತ್ತಮ ಎಂದು ತಿಳಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...