ರಾಜ್ಯಾದ್ಯಂತ ಮಳೆ, ಮುಂಜಾಗ್ರತಾ ಕ್ರಮ ಕೈಗೊಳ್ಳಿ; 50 ಕೋಟಿ ರೂ. ಬಿಡುಗಡೆಗೆ ಬಿಎಸ್‌ವೈ ಸೂಚನೆ

Source: uni | Published on 6th August 2020, 12:23 AM | State News | Don't Miss |

 

ಬೆಂಗಳೂರು: ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು‌ ವಹಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸೂಚನೆ ನೀಡಿದರು.
ಮಳೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ತೆಗೆದುಕೊಳ್ಳುವುದು ಸೇರಿದಂತೆ ಎಲ್ಲಾ ಜಿಲ್ಲಾಧಿಕಾರಿ ಗಳ ಜೊತೆ ನಿರಂತರ ಸಂಪರ್ಕ ದಲ್ಲಿರುವಂತೆ ಸೂಚನೆ ನೀಡಿದ್ದಾರೆ.
ತುರ್ತು ಸಂದರ್ಭಕ್ಕಾಗಿ ಕೂಡಲೇ 50 ಕೋಟಿ‌ ಹಣವನ್ನು ಬಿಡುಗಡೆ ಮಾಡುವಂತೆ ಸೂಚನೆ‌ ನೀಡಿದರು. ಕೆಲ‌ ಜಿಲ್ಲಾಧಿಕಾರಿಗಳ ಜತೆ ಪೋನ್ ಮುಖಾಂತರ ಸಂಪರ್ಕ ಮಾಡಿದ‌‌ ಮುಖ್ಯಮಂತ್ರಿ ಯಡಿಯೂರಪ್ಪ, ಮಳೆಯ ಬಗ್ಗೆ ಮಾಹಿತಿಯನ್ನು ‌ಪಡೆದುಕೊಂಡರು.
ದರ್ಶನ್‌ ಸಾಧನೆಗೆ ಬಿಎಸ್‌ವೈ ಮೆಚ್ಚುಗೆ: ಇದರ ಜೊತೆಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ದರ್ಶನ್ ಅವರಿಗೆ ಕರೆ ಮಾಡಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಎಸ್‌ವೈ ಆರೋಗ್ಯ ಸ್ಥಿರ
ಈ ನಡುವೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಆರೋಗ್ಯ ಸ್ಥಿತಿ ಸುಧಾರಣೆಯಾಗಿದೆ. ಈಗಾಗಲೇ ಎಲ್ಲ ಚಿಕಿತ್ಸೆ ನಡೆಸಲಾಗಿದ್ದು, ನಾರ್ಮಲ್‌ ಆಗಿದ್ದಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ

Read These Next

ಸಪ್ಟೆಂಬರ್ 28 ರಂದು ಕರ್ನಾಟಕ ಬಂದ್ ಹಿನ್ನೆಲೆ. ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 29 ಕ್ಕೆ.

ಬೆಂಗಳೂರು : ಸಪ್ಟೆಂಬರ್ 28 ರಂದು ನಡೆಯುವ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದೂಡಿದೆ.

ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಂದ ಭಾರತವನ್ನು ಎಷ್ಟು ಸಮಯ ಹೊರಗಿಡುತ್ತೀರಿ: ಪ್ರಧಾನಿ ಮೋದಿ

ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಂದ ಭಾರತವನ್ನು ಎಷ್ಟು ಸಮಯ ಹೊರಗಿಡುತ್ತೀರಿ: ಪ್ರಧಾನಿ ಮೋದಿ