ಟಿಟಿ: ಥೈಲ್ಯಾಂಡ್ ಓಪನ್‍ನಲ್ಲಿ ಸಂಜೀವ ಗೆ ಬೆಳ್ಳಿ ಪದಕ

Source: S O News Service | By I.G. Bhatkali | Published on 19th August 2019, 2:37 PM | State News | Sports News |

ಬೆಳಗಾವಿ: ಪ್ರಚಲಿತ ರಾಷ್ಟ್ರೀಯ ಪ್ಯರಾ ಟೇಬಲ್ ಟೆನ್ನಿಸ್ ಚಾಂಪಿಯನ್, ಬೆಳಗಾವಿಯ ಸಂಜೀವ ಹಮ್ಮಣ್ಣವರ ಇವರು ಥೈಲ್ಯಾಂಡ್‍ನ, ಬ್ಯಾಂಕಾಕ್ ನಲ್ಲಿ ದಿನಾಂಕ 8 ರಿಂದ 10 ಅಗಷ್ಟ – 2019 ರ ವರೆಗೆ ಜರುಗಿದ 2019 ಐಟಿಟಿಫ್ ಪ್ಯಾರಾ ಬ್ಯಾಂಕಾಕ್ ಓಪನ್‍ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಟೀಮ್ ವಿಭಾಗದಲ್ಲಿ ಬೆಳ್ಳಿ ಪದಕ ಪಡಿದ್ದಾರೆ.

ಸಂಜೀವ, ಥೈಲ್ಯಾಂಡ್‍ನ ರುಂಗರಾಜ್ ಮತ್ತು ಪುನ್‍ಪು ಸೇರಿದ ತಂಡ ಲೀಗ್ ಹಂತದಲ್ಲಿ ಗ್ರೇಟ್ ಬ್ರಿಟಿನ್ ತಂಡಕ್ಕೆ 2:0, ಗ್ರೀಸ್ ತಂಡಕ್ಕೆ 2:0, ಸೆಟ್‍ನಿಂದ ಗೆಲುವು ಪಡೆದು ಅವರ ಗ್ರೂಪ್‍ನಲ್ಲಿ ಮೊದಲ ಸ್ಥಾನ ಪಡೆದಿದ್ದರಿಂದ ಅಂತಿಮ ಹಂತಕ್ಕೆ ತಲುಪಿದರು ಅಂತಿಮ ಪಂದ್ಯ ಪೀಪಲ್ಸ್ ರಿಪಬ್ಲಿಕ್ ಆಪ್ ಕೋರಿಯಾ ತಂಡದೊಂದಿಗೆ 2:0, ದಿಂದ ಪರಾಭವಗೊಂಡು ಬೆಳ್ಳಿ ಪದಕ ಪಡೆದರು.

ಸಂಜೀವ ಹಮ್ಮಣ್ಣವರ ಇವರು ಕೆಪಿಟಿಸಿಎಲ್ ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದು. ಇತ್ತೀಚಿಗೆ ಚೀನಾದ ಥೈಪೆದಲ್ಲಿ ಜುಲೈ 23 ರಿಂದ 27 ರ ವರೆಗೆ ಜರುಗಿದ ಏಶಿಯನ್ ಚಾಂಪಿಯನ್‍ಲ್ಲೂ ಭಾರತ ದೇಶವನ್ನು ಪ್ರತಿನಿಧಿಸಿದ್ದರು. 

Read These Next

ಹೆಚ್ಚಿನ ಪ್ರಮಾಣದ ಆಕ್ಸಿಜನ್ ಉತ್ಪಾದನೆಗೆ ಜಿಂದಾಲ್‍ಗೆ ಸೂಚನೆ. ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಪರಿಶೀಲಿಸಿದ ಸಚಿವ ಜಗದೀಶ್ ಶೆಟ್ಟರ್.

ಬಳ್ಳಾರಿ : ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್, ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ...

ಶ್ರೀನಿವಾಸಪುರ: ಕೋವಿಡ್ ತಡೆ ನಿಯಮಾನುಸಾರ ಫಲಾನುಭವಿಗಳಿಗೆ ಚೆಕ್‍ ಅನುದಾನ ವ್ಯವಸ್ಥೆ ಮಾಡಲಾಗಿದೆ; ಎನ್.ಹನುಮೇಶ್

ರಾಸು ವಿಮಾ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಅನುದಾನದ ಚೆಕ್‍ಗಳನ್ನು ಕೋವಿಡ್ ತಡೆ ನಿಯಮಾನುಸಾರ ಫಲಾನುಭವಿಗಳಿಗೆ ನೇರವಾಗಿ ...

ಶ್ರೀನಿವಾಸಪುರ: ನಿಯಮ ಬಾಹಿರವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 6 ಅಂಗಡಿಗಳ ಮೇಲೆ ದಾಳಿ

ನಿಯಮ ಬಾಹಿರವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 6 ಅಂಗಡಿಗಳ ಮೇಲೆ ಕಂದಾಯ ಹಾಗೂ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಮುದ್ರೆ ...

ಕಲಬುರಗಿ: ಕಲಬುರಗಿಯಲ್ಲಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ

ವಿಭಾಗೀಯ ಕೇಂದ್ರವಾದ ಕಲಬುರಗಿ ಜಿಲ್ಲೆ ರಸ್ತೆ ಮತ್ತು ವಾಯು ಸಾರಿಗೆ, ವಸತಿ ಸೇರಿದಂತೆ ಸಕಲ ಮೂಲಸೌಕರ್ಯಗಳಿದ್ದು, ಅನೇಕ ರಾಜ್ಯ ಮತ್ತು ...

ಗ್ರೀನ್ ಎಂಡ್ ಕ್ಲೀನ್ ಎನರ್ಜಿ ಘೋಷಣೆಯಡಿ ಕ್ಷಮತಾ ಮಹೋತ್ಸವ. ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಿಂದ ಸೈಕ್ಲಾಥಾನ್

ಕಾರವಾರ: ನಗರದ ಬೈತಖೋಲ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನ ಟರ್ಮಿನಲ್ ಆಶ್ರಯದಲ್ಲಿ ಸಂರಕ್ಷಣಾ ಕ್ಷಮತಾ ಮಹೋತ್ಸವದ ...