ಸಿರಿಯದಲ್ಲಿ: ಐಸಿಸ್‌ ರಾಕೇಟ್ ದಾಳಿಯಲ್ಲಿ ರಾಸಾಯನಿಕ ಪ್ರಯೋಗ

Source: S O News service | By Staff Correspondent | Published on 27th November 2016, 8:35 PM | Global News | Don't Miss |

ಇಸ್ತಾಂಬುಲ್: ಉತ್ತರ ಸಿರಿಯದಲ್ಲಿ ಐಸಿಸ್ ಉಗ್ರರು 22ಕ್ಕೂ ಅಧಿಕ ವಿರೋಧಿ ಬಂಡುಕೋರರ ಮೇಲೆ ನಡೆಸಿದ ರಾಕೆಟ್ ದಾಳಿಗಳಲ್ಲಿ ರಾಸಾಯನಿಕ ಅನಿಲಗಳನ್ನು ಪ್ರಯೋಗಿಸಿರುವ ಕುರುಹುಗಳು ಕಂಡುಬಂದಿದೆಯೆಂದು ಟರ್ಕಿ ಸೇನೆಯ ಹೇಳಿಕೆಯನ್ನು ಉಲ್ಲೇಖಿಸಿ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

 

ತಮ್ಮ ನಿಯಂತ್ರಣದಲ್ಲಿರುವ ಅಲ್-ಬಾಬ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವ ಟರ್ಕಿ ಬೆಂಬಲಿತ ಬಂಡುಕೋರರನ್ನು ಗುರಿಯಾಗಿರಿಸಿ ಐಸಿಸ್ ಉಗ್ರರು ಈ ದಾಳಿಯನ್ನು ನಡೆಸಿದ್ದಾರೆ. ಟರ್ಕಿ ಗಡಿಗೆ ತಾಗಿಕೊಂಡಿರುವ ಸಿರಿಯದ ಪ್ರದೇಶಗಳಲ್ಲಿರುವ ಐಸಿಸ್ ಉಗ್ರರನ್ನು ಹಿಮ್ಮೆಟ್ಟಿಸಲು, ಟರ್ಕಿ ಸೇನೆಯು ಬಂಡುಕೋರರ ಬೆಂಬಲದೊಂದಿಗೆ 'ಯುಫ್ರಟಿಸ್ ಶೀಲ್ಡ್' ಹೆಸರಿನಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಐಸಿಸ್ ಹಾಲಿಲಿಯೆ ಪ್ರದೇಶದಲ್ಲಿ ರಾಕೆಟ್ ದಾಳಿಯನ್ನು ನಡೆಸಿದೆಯೆಂದು ಟರ್ಕಿ ಸರಕಾರಿ ಸ್ವಾಮ್ಯದ ಅನಾದೊಲು ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ದಾಳಿ ನಡೆದ ಸ್ಥಳದ ಬಗ್ಗೆ ಸೇನೆಯಿಂದ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಐಸಿಸ್ ನಡೆಸಿದ ರಾಕೆಟ್ ದಾಳಿಯಲ್ಲಿ 22 ಮಂದಿ ಬಂಡುಕೋರರ ಕಣ್ಣುಗಳು ಹಾಗೂ ದೇಹಗಳು ರಾಸಾಯನಿಕ ಅನಿಲದಿಂದ ಬಾಧಿತವಾಗಿವೆಯೆಂದು ಟರ್ಕಿ ಸೇನೆಯ ಹೇಳಿಕೆ ತಿಳಿಸಿದೆ.

ಶಂಕಿತ ವಿಷಾನಿಲ ದಾಳಿಗೆ ಸಿಲುಕಿದ ಬಂಡುಕೋರರಿಗೆ ಟರ್ಕಿಯ ಗಡಿಪ್ರಾಂತ್ಯವಾದ ಕಿಲಿಸ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಸಾಯನಿಕ ದಾಳಿ ನಡೆದಿರುವ ಬಗ್ಗೆ ಕುರುಹುಗಳನ್ನು ಪರಿಶೀಲಿಸಲು ಟರ್ಕಿಯ ಎಎಫ್‌ಎಡಿ ತುರ್ತು ಪರಿಹಾರ ತಂಡಗಳು ಅವರನ್ನು ತಪಾಸಣೆಗೊಳಪಡಿಸಿದೆಯೆಂದು ಮೂಲಗಳು ತಿಳಿಸಿವೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...