ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷನ ಮೇಲೆ ಆರ್.ಟಿ.ಓ. ಅಧಿಕಾರಿಯಿಂದ ಹಲೆ; ದೂರು ದಾಖಲು

Source: sonews | By Staff Correspondent | Published on 26th October 2018, 5:59 PM | Coastal News | State News | Incidents | Don't Miss |

ಭಟ್ಕಳ: ನವೆಂಬರ 1 ರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಕಾರ್ಯಕ್ರಮ ಆಯೋಜನೆಯ ಬ್ಯಾನರ್ ಅಳವಡಿಸುತ್ತಿದ್ದಾಗ ಏಕಾಎಕಿ ಬಂದ ಆರ್.ಟಿ.ಒ ಅಧಿಕಾರಿ ಬೈಕ್ ಅಡ್ಡಗಟ್ಟಿ ಸಂಘದ ಅಧ್ಯಕ್ಷನ ಮೇಲೆ ಹಲ್ಲೆಗೈದ ಘಟನೆ ಗುರುವಾರ ಸಂಜೆ ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿ ನಡೆದಿದ್ದು ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈಶ್ವರ ನಾಯ್ಕ ಬೈಲುರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕಾ ಘಟಕದ ಅಧ್ಯಕ್ಷ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಗುರುವಾರದಂದು ಸಂಜೆ 6.30ರ ಸುಮಾರಿಗೆ ಸಂಘದ ತಾಲೂಕಾಧ್ಯಕ್ಷ ಹಾಗೂ ಸಂಘದ ಸದಸ್ಯರು ನವೆಂಬರ 1 ರ ಕಾರ್ಯಕ್ರಮದ ಬ್ಯಾನರ ಹಾಕಲು ಬೈಕಿನಲ್ಲಿ ಹಳೆ ಬಸ ನಿಲ್ದಾಣದ ಕಡೆಗೆ ಹೋಗುತ್ತಿದ್ದ ವೇಳೆ ರಿಕ್ಷಾ ಚಾಲಕ ಮಾಲಕರ ಸಂಘದ ಗಣೇಶೋತ್ಸವ ಸಮಿತಿ ಸಮೀಪ ಬೈಕನ್ನು ರಸ್ತೆ ಬಳಿ ಬಂದು ತಡೆದು ಆರ್.ಟಿ.ಓ.ಅಧಿಕಾರಿ ಸಿಬ್ಬಂದಿಯನ್ನು ಪ್ರಶ್ನಿಸಿದ್ದಕ್ಕೆ ಆರ್.ಟಿ.ಓ.ಅಧಿಕಾರಿಗಳು ಕರೆಯುತ್ತಿದ್ದಾರೆ ಎಂದು ತಿಳಿಸಿದ್ದಾನೆ. ನಂತರ ಅಧಿಕಾರಿ ಎಲ್.ಪಿ.ನಾಯ್ಕ ಬಳಿ ತಾಲೂಕಾಧ್ಯಕ್ಷ ಈಶ್ವರ ನಾಯ್ಕ ತೆರಳಿ ಏನೆಂದು ವಿಚಾರಿಸಿದ್ದಾರೆ. ಆದರೆ ಅಧಿಕಾರಿ ಅವಾಚ್ಯ ಶಬ್ದದಿಂದ ಬೈಯ್ದು ಏಕಾಏಕಿ ನನ್ನ ಶರ್ಟ ಹಿಡಿದು ಎದೆಯ ಮೇಲೆ ಬಲವಾಗಿ ಹೊಡೆದು ಹಲ್ಲೆ ನಡೆಸಿದ್ದಾರೆಂದು ಈಶ್ವರ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆ ನಡೆಸಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಬೈಕ್ ದಾಖಲೆ ಪತ್ರವನ್ನು ನೀಡುವಂತೆ ತಿಳಿಸಿದ್ದು ಈಶ್ವರ ನಾಯ್ಕ ತಮ್ಮ ಮೊಬೈಲನಲ್ಲಿನ ದಾಖಲೆಯನ್ನು ತೋರಿಸಿದ್ದು ಹೊಸ ಬೈಕ ಆದ ಹಿನ್ನೆಲೆ ರಿಜಿಸ್ಟರೇಶನ ಸಂಬಂದಪಟ್ಟ ಎಲ್ಲಾ ದಾಖಲೆ ಪತ್ರವನ್ನು ಏಜೆಂಟರಿಗೆ ನೀಡಿದ್ದು ಎರಡು ದಿನದ ಬಳಿಕ ವಾಹನ ರಿಜಿಸ್ಟರೇಶನ ಆಗಲಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ನನ್ನ ಬಳಿ 3000 ರೂ. ಹಣ ನೀಡು ಇಲ್ಲದಿದ್ದರೆ 2000 ರೂ.ಲಂಚ ನೀಡುವಂತೆ ಕೇಳಿದ್ದಾರೆಂದು ಆರೋಪಿಸಿದ್ದಾರೆ. ಹಾಗೂ ನಿಮ್ಮಂತಹ ಸಾಕಷ್ಟು ಸಂಘಟನೆಯನ್ನು ನಾನು ನೋಡಿದ್ದು ಕನ್ನಡ ಪರ ಸಂಘಟನೆ ಅವಶ್ಯಕತೆ ಇಲ್ಲ ಎಂದು ಸಂಘಟನೆಯ ಬಗ್ಗೆ ನಿಂದಿಸಿದ್ದಾರೆಂದು ಆರೋಪಿಸಿದ್ದಾರೆ. 

ರಭಸದಿಂದ ಅಧಿಕಾರಿ ಎದೆಗೆ ಹೊಡೆದ ಹಿನ್ನೆಲೆ ತಲೆಸುತ್ತು ಬಂದಿದ್ದು ಸಂಘಟನೆ ಸದಸ್ಯರು ಇಲ್ಲಿನ ತಾಲೂಕಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಹಲ್ಲೆಗೊಳಗಾದ ಈಶ್ವರ ನಾಯ್ಕ ದೂರು ಸಲ್ಲಿಸಿದ್ದು, ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆಗೊಳಗಾದ ಈಶ್ವರ ನಾಯ್ಕ ದ್ವಿಚಕ್ರ ವಾಹನವನ್ನು ಆರ.ಟಿ.ಓ. ಅಧಿಕಾರಿಯೂ ಜಪ್ತಿ ಮಾಡಿ ಪೊಲೀಸ ವಶಕ್ಕೆ ನೀಡಿದ್ದಾರೆ. 

ಈ ಕುರಿತು ಮಾತನಾಡಿದ ಈಶ್ವರ ನಾಯ್ಕ 'ಓರ್ವ ಸರಕಾರಿ ಅಧಿಕಾರಿಯಾಗಿ ಸರಕಾರದಡಿಯಲ್ಲಿ ಕೆಲಸ ಮಾಡುವ ಇಂತಹ ವರ್ತನೆ ಖಂಡನೀಯ. ಅಧಿಕಾರÀ ದರ್ಪದಿಂದ ರೋಸಿಹೋಗಿದ್ದು, ಅಮಾಯಕ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಅನಾವಶ್ಯಕ ಹಲ್ಲೆ ಮಾಡಿರುವ ಅಧಿಕಾರಿಯ ಮೇಲೆಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ’, ಎಂದರು.

Read These Next

ಉತ್ತರಕನ್ನಡಕ್ಕೆ ಉಡಾನ್ ವಿಮಾನ ನಿಲ್ದಾಣ ಅಂಕೋಲಾಕ್ಕೆ ಹೆಚ್ಚಿನ ಒಲವು ; ಭಟ್ಕಳಿಗರ ಬತ್ತದ ಕನಸು

ಭಟ್ಕಳದಲ್ಲಿ ಪರಿಸರ ಸ್ನೇಹಿ ಉಡಾನ್ ನಾಗರಿಕ ಸೇವಾ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯ ತೀರ್ಮಾನವನ್ನು ನ್ಯಾಯಾಲಯ ಸರಕಾರದ ...

ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು -ಶಾಸಕ ಕೆ.ಆರ್‌.ರಮೇಶ್

ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ...

ಕೋಲಾರದಲ್ಲಿ ನೀರಿಗೆ ಅಭಾವ ಇದ್ದರೂ, ಸರ್ಕಾರದಿಂದ ಬರುವ ಅನುದಾನದಲ್ಲಿ ಕೊರತೆ ಇಲ್ಲ – ಎ.ಸಿ.ಬಿ ಪುರುಷೋತ್ತಮ್

ಕೋಲಾರ: ಕೋಲಾರದಲ್ಲಿ ನೀರಿಗೆ ಅಭಾವ ಇದ್ದರೂ, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗುತ್ತಿರುವ ಅನುದಾನದಲ್ಲಿ ಕೊರತೆ ಇಲ್ಲ, ಆದರೂ ಹಣದ ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...