ಕಾರವಾರ: ಜೂ. 21 ರಿಂದ 27 ರವರೆಗೆ ವಿವಿಧ ಸ್ಥಳಗಳಲ್ಲಿ ಸ್ವ್ಯಾಬ್ ಟೆಸ್ಟ್

Source: S.O. News service | By S O News | Published on 19th June 2021, 5:53 PM | Coastal News |

ಕಾರವಾರ: ಕಾರವಾರ ನಗರ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಕೋವಿಡ್ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತಿದ್ದು, ಸದರಿ ದಿನಗಳಂದು ಹೆಚ್ಚಿನ ಸಂಖ್ಯೆಯ ಸಾರ್ವಾಜನಿಕರು ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಕಾರವಾರ ನಗರ ಸಭೆ ಪೌರಾಯುಕ್ತ ಆರ್ ಪಿ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್ 21ರಂದು ನಂದನಗದ್ದಾದ ನಾಗನಾಥ ವಾಡಾದ ನಾಗನಾಥಾ ಶಾಲೆ ಹಾಗೂ ಜಿಲ್ಲಾ ರಂಗಮಂದಿರಾ, 22 ರಂದು ಹಬ್ಬುವಾಡ ಪಂಪ್ ಹೌಸ್ ಕೆ ಎಚ್ ಬಿ ಕಾಲನಿ ಹಾಗೂ ಜಿಲ್ಲಾ ರಂಗಮಂದಿರ. 23 ರಂದು ಮಧ್ಯವಾಡಾ ಮತ್ತು ಜಿಲ್ಲಾ ರಂಗಮಂದಿರ ದಲ್ಲಿ ಸ್ವ್ಯಾಬ್ ಟೆಸ್ಟ್ ನಡೆಸಲಾಗುವುದು.

24 ರಂದು ಕೋಡಿ ಬೀರಾ ಸಭಾಭವನ ಹಾಗೂ ಜಿಲ್ಲಾ ರಂಗ ಮಂದಿರದಲ್ಲಿ, 25 ರಂದು ಬೈತಕೋಲ್‍ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ರಂಗಮಂದಿರದಲ್ಲಿ ಪರೀಕ್ಷೆ ನಡೆಸಲಾಗುವುದು. 26 ರಂದು ಕನ್ನಡ ಸಭಾ ಭವನ, ಕುಂಠಿ ಮಹಾಮಾಯಾ ದೇವಸ್ಥಾನದ ಹತ್ತಿರ ಮತ್ತು ಜಿಲ್ಲಾ ರಂಗಮಂದಿರ 27 ರಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬೈತಕೋಲ್ ನಲ್ಲಿ ನಡೆಸಲಾಗುವುದು ಎಂದು ಪೌರಾಯುಕ್ತ ಹೇಳಿದ್ದಾರೆ.

Read These Next