ಭಟ್ಕಳದ ಮನೆ ಮುಂದೆ ನಿಂತುಕೊoಡಿದ್ದ ಅನಾಥ ಕಾರಿನಲ್ಲಿ ಕಾಡುಕೋಣ ಮಾಂಸ ಪತ್ತೆ; ಕಾರು ವಶಪಡಿಸಿಕೊಂಡು ತನಿಖೆ ನಡೆಸುತ್ತಿರುವ ಅರಣ್ಯ ಇಲಾಖೆ

Source: s o news | Published on 22nd February 2021, 12:14 PM | Coastal News |

ಭಟ್ಕಳ: ಇಲ್ಲಿನ ಮದೀನಾ ಕಾಲೋನಿಯ ಮುಹೀದ್ದೀನ್ ಸ್ಟಿಟ್ ಎಂಬಲ್ಲಿ ಮನೆಯೊಂದರ ಮುಂದೆ ನಿಂತುಕೊAಡಿದ್ದ ಮಹಾರಾಷ್ಟç ನೋಂದಣಿ ಇರುವ ಅನಾಥ ಕಾರಿನಿಂದ ಸುಮಾರು ೧೦೦ಕೆಜಿ ಗೂ ಹೆಚ್ಚು ಕಾಣುಕೋಣದ ಮಾಂಸ ವಶಪಡಿಸಿಕೊಳ್ಳಲಾಗಿದ್ದು ಕಾರಿನ ವಾರಿಸುದಾರರ ಕುರತಂತೆ ತನಿಖೆ ನಡಯುತ್ತಿದ್ದೆ. 

ಕಾರು ನಿಂತುಕೊAಡಿದ್ದ ಮನೆಯ 2 ಸದಸ್ಯರನ್ನು ವಿಚಾರಣೆಗೊಳಪಡಿಸಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. 
ಸೋಮವಾರ ಬೆಳಿಗ್ಗೆ ೮ ಗಂಟೆ ಸುಮಾರು ಮಹಾರಾಷ್ಟç ನಂಬರ್ ಪ್ರೇಟ್ ಉಳ್ಳ ಎಕ್ಸಿ÷್ಟçÃಮ್ ಕ್ಯಾಪ್ಟೀವಾ ಕಾರು ಮದೀನಾ ಕಾಲೋನಿಯ ಮನೆಯೊಂದರ ಮುಂದೆ ನಿಂತುಕೊAಡಿರುವ ಸ್ಥಿತಿಯಲ್ಲಿ ದೊರೆತಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ವಿಚಾರಣೆ ನಡೆಸಿದ್ದು, ಈ ಕಾರು ಬೆಳಿಗ್ಗೆ ಇರಲಿಲ್ಲ. ೭-೮ ಗಂಟೆ ಅವಧಿಯಲ್ಲಿ ಬಂದು ನಿಂತುಕೊAಡಿದೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದ್ದು ಹೆಚ್ಚಿನ ವಿಚಾರಣೆಗಾಗಿ ಕುಟುಂಬದ ಮೂವರು ಸದಸ್ಯರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. 

ನಡೆದಿದ್ದೇನು?: ಭಟ್ಕಳ ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ನೀಡಿದ ಮಾಹಿತಿಯಂತೆ, ಖಚಿತ ಮಾಹಿತಿ ಮೆರೆಗೆ ಹೊನ್ನಾವರ ಗೇರುಸೊಪ್ಪ ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಬೇಟೆ ನಡೆದಿದೆ ಎಂದು ಹೇಳಲಾಗಿದ್ದು ಬೇಟೆಯಾಡಿದ ಕೋಣದ ಮಾಂಸ ಹೊತ್ತ ಕಾರನ್ನು ಹಿಂಬಾಲಿಸಿಕೊAಡು ಬಂದಿದ್ದು ಹೊನ್ನಾವರ ಮೂಲಕ ಬ್ಯಾರಿಕೇಡ್ ಮುರಿದು, ಮುರುಡೇಶ್ವರ ಶಿರಾಲಿ ಚೆಕ್ ಪೋಸ್ಟ್ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದು ಸೋಮವಾರ ಮದೀನಾ ಕಾಲೋನಿಯ ಮನೆಯ ಮುಂದೆ ನಿಂತುಕೊAಡಿದೆ. ಅದನ್ನು ಕ್ರೇನ್ ಮೂಲಕ ಎಳೆದುಕೊಂಡು ಹೋಗಿ ಪರಿಶೀಲಿಸಿದರೆ ಅದರಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಕೆಜಿ ಕಾಡುಕೋಣದ ಮಾಂಸ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಪರಾರಿಯಾಗಿದ್ದು ಈ ಕುರಿತು ತನಿಖೆ ಚುರುಕುಗೊಳಿಸಲಾಗಿದೆ ಎಂದೂ ಹೇಳಿದ್ದಾರೆ. 

ಮನೆಯವರಿಗೆ ತೊಂದರೆ ನೀಡಬೇಡಿ: ಕಾರು ನಿಂತುಕೊAಡಿದ್ದ ಮನೆಯ ಕುಟುಂಬದ ಸದಸ್ಯರನ್ನು ಪೊಲೀಸರು ವಿಚಾರಣೆಯ ನೆಪದಲ್ಲಿ ಯಾವುದೇ ಕಿರುಕುಳ ನೀಡಕೂಡದೆಂದು ಸ್ಥಳೀಯರು ಹೇಳಿದ್ದು ಕಾರು ಚಾಲಕ ತಾನು ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಅಡ್ಡದಿಡ್ಡಿಯಾಗಿ ಕಾರು ಓಡಿಸಿಕೊಂಡು ಬಂದಿದ್ದು ಮುಂದೆ ಹೋಗಲು ಉಪಾಯ ಕಾಣದೆ ಯಾರದೋ ಮನೆಯ ಮುಂದೆ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಆದ್ದರಿಂದ ವಿನಾಕಾರಣ ಮನೆಯವರಿಗೆ ಕಿರುಕುಳ ನೀಡಕೂಡದೆಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಘಟನಾ ಸ್ಥಳದಲ್ಲಿ ನಗರಠಾಣೆಯ ಪಿ.ಎಸ್.ಐ ಭರತ್ ಉಪಸ್ಥಿತರಿದ್ದು ಘಟನೆಯ ಕುರಿತು ತನಿಖೆಯನ್ನು ಕೈಕೊಂಡಿದ್ದಾರೆ.

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...