ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಸೇವೆಯಿಂದ ಅಮಾನತ್.

Source: sonews | By Staff Correspondent | Published on 25th February 2020, 11:50 PM | State News |

ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕು ಪಂಚಾಯ್ತಿಯ ಪ್ರಥಮ ದರ್ಜೆ ಸಹಾಯಕ ಎಸ್. ಮಂಜುನಾಥ್ ರವರನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಕ್ಷಣ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ ಪಡಿಸಿ ಆದೇಶಿಸಲಾಗಿದೆ. ಮೂಲತಃ ಖಜಾನೆ ಇಲಾಖೆಯ ಮಂಜು ನಾಥ್ ನಿಯೋಜನೆಯ ಮೇಲೆ ತಾಲ್ಲೂಕು ಪಂಚಾಯ್ತಿಯ ಲೆಕ್ಕ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರಿಗೆ ಸುಮಾರು ನೋಟೀಸುಗಳನ್ನು ಜಾರಿ ಮಾಡಿ ಸದರಿಯವರು ನಿರ್ವಹಿಸುತ್ತಿರುವ ಲೆಕ್ಕ ಶಾಖೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲು ಸೂಚಿಸಿದ್ದರೂ ಸಹ ಇವರು ಬೇಜ ವಾಬ್ದಾರಿತನದಿಂದ ಯಾವುದೇ ಮಾಹಿತಿಯನ್ನು ಒದಗಿಸಿರುವುದಿಲ್ಲ, ಇದರಿಂದ ಕಛೇರಿಯ ಕೆಲಸಗಳಿಗೆ ಹಾಗೂ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಉಂಟಾಗಿರುತ್ತ ದೆಂ ದು ವೆಂಕಟಸ್ವಾಮಿ ಬಿನ್ ವೆಂಕಟೇಶಪ್ಪ , ಕೋನೇಟಿ ತಿಮ್ಮನಹಳ್ಳಿ ಗ್ರಾಮ ಇವರ ದೂರಿಗೆ ಸಂಬಂಧಿಸಿದಂತೆ ನಾಗರೀಕ ಹಕ್ಕು ನಿರ್ದೇಶ ನಾಲಯ ಘಟಕ, ಕೋಲಾರ ಇಲ್ಲಿ ಹಾಜರಾಗಿ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಂಡು ಬರಲು ತಿಳಿಸಿದರೂ ಸಹ ಯಾವುದೇ ವರದಿ ಸಲ್ಲಿಸಿರುವುದಿಲ್ಲ,

ಲೆಕ್ಕ ಶಾಖೆಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳ ಬ್ಯಾಂಕ್ ಖಾತೆ ವಿವರಗಳು, ಹಿಂದಿನ ಸಾಲಿನ ಅನುಮೋದಿತ ಕ್ರಿಯಾ ಯೋಜನೆ ಹಣ ಬಳಕೆ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ನೀಡುವಂತೆ ಸೂಚಿಸಿದ್ದರೂ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲವೆಂದು ತಿಳಿಸಿರುತ್ತಾರೆ. ಮುಂದು ವರೆದು ಮಾಹಿತಿ ಹಕ್ಕು ಅಧಿನಿಯಮಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡದೇ ಇರುವುದ ರಿಂದ ಸುಮಾರು ಪ್ರಕರಣಗಳು ಮಾಹಿತಿ ಆಯೋಗದಲ್ಲಿ ದಾಖಲಾಗಿದ್ದು ಪ್ರಕರಣ ಸಂಖ್ಯೆ : ಕಮಾಆ/8504/ಎಪಿಎಲ್ 2016 ಕ್ಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸದ ಕಾರಣ ಮಾಹಿತಿ ಆಯೋಗವು ರೂ.10.000 /- ಗಳ ದಂಡವನ್ನು ವಿಧಿಸಿದ್ದು ಸದರಿಯವರ ಮೇಲೆ ಎಫ್.ಐ.ಆರ್. ದಾಖಲು ಮಾಡಲು ತಿಳಿಸಿದ್ದು, ಅದರಂತೆ ಎಫ್.ಐ.ಅರ್. ದಾಖಲಿಸಿರುವುದಾಗಿ ತಿಳಿಸಿರುತ್ತಾರೆ, ಮುಂದುವರೆದು ನಂತರ ಹಾಗೂ ಸದರಿ ನೌಕರರು ಡಿಸೆಂಬರ್ -2019 ರ ಮಾಹೆಯಿಂದ ತಹಲ್ ವರೆಗೆ ಕಛೇರಿಗೆ ಗೈರು ಹಾಜರಾಗಿರುತ್ತಾರೆಂದು ಈ ರೀತಿ ಕರ್ತವ್ಯ ನಿರ್ಲಕ್ಷತೆ ಹೊಂದಿರುವ ಎಸ್. ಮಂಜುನಾಥ್, ಪ್ರ.ದ.ಸ, ಲೆಕ್ಕ ಶಾಖೆ, ತಾಲ್ಲುಕು ಪಂಚಾಯಿತಿ, ಶ್ರೀನಿವಾಸಪುರ ಇವರ ಸೇವೆಯು ತಾಲ್ಲೂಕು ಪಂಚಾಯಿತಿ ಕಛೇರಿಗೆ ಅವಶ್ಯಕತೆ ಇರುವುದಿಲ್ಲ ವಾದ್ದರಿಂದ, ಸದರಿ ನೌಕರರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲು ಕೋರಿರುತ್ತಾರೆ. ಸದರಿ ಅಂಶಗಳನ್ನು ಗಮನಿ ಸಲಾಗಿ ಈ ನೌಕರರು ಸರ್ಕಾರಿ ಕೆಲಸದಲ್ಲಿ ಕರ್ತವ್ಯ ನಿರ್ಲಕ್ಷತೆ, ಬೇಜವಾಬ್ದಾರಿತನ ಹಾಗೂ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಇವರ ವಿರು ದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಇವರನ್ನು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ವಿ. ದರ್ಶನ್ ರವರು ಆದೇಶಿಸಿದ್ದಾರೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...