ಸೆನ್ಸಸ್ ಹೆಸರಿನಲ್ಲಿ ಮಾಹಿತಿ ಕಲೆ ಹಾಕುತ್ತಿರುವ ಅನುಮಾನಸ್ಪದ ಮಹಿಳೆಯರು

Source: sonews | By Staff Correspondent | Published on 23rd January 2020, 11:56 PM | Coastal News |

ಭಟ್ಕಳ:  ಕೇಂದ್ರ ಗೃಹ ಇಲಾಖೆಯ ಡೈರೆಕ್ಟರ್ ಆಫ್ ಸೆನ್ಸಸ್ ಆಪರೇಶನ್ ಎಂಬ ಸಂಸ್ಥೆಯವರು ಎಂದು ಹೇಳಿಕೊಂಡು ಅನುಮಾನಸ್ಪದವಾಗಿ ಕುಟುಂಬದ ಮಾಹಿತಿಯನ್ನು ಕಲೆ ಹಾಕುತ್ತಿದ್ದ ಮೂವರು ಮಹಿಳೆಯರನ್ನು ಇಲ್ಲಿನ  ಆಝಾದ್ ನಗರದ ನಿವಾಸಿಗಳು ಜನರು ವಾಪಸ್ ಕಳುಹಿಸಿದ ಪ್ರಸಂಗ ಗುರುವಾರದಂದು ನಡೆದಿದೆ. 

ಮನೆ ಮನೆಗೆ ತೆರಳಿ ಕುಟುಂಬದವರ ಮಾಹಿತಿಗೆ ಮುಂದಾಗಿರುವ ಅಪರಿಚತ ಮೂವರು ಮಹಿಳೆಯರು ತಾವು ಬೆಂಗಳೂರಿನಿಂದ ಬಂದಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಪ್ರತ್ಯಕ್ಷಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ತಂಝೀಮ್ ಅಧ್ಯಕ್ಷ ಸೈಯ್ಯದ ಎಸ್.ಎಂ.ಪರ್ವಾಝ್ ಅಪರಿಚಿತ ಮಹಿಳೆಯರೊಂದಿಗೆ ಮಾತನಾಡಿ ತಾವು ಯಾವ ಇಲಾಖೆಯವರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸ್ಥಳಿಯ ಯಾವುದೇ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡದೆ ಅನುಮಾನಸ್ಪದವಾಗಿ ವರ್ತಿಸುತ್ತಿದ್ದು ನೀವು ಸ್ಥಳಿಯ ಅಧಿಕಾರಿಗಳ ಅನುಮತಿಯೊಂದಿಗೆ ಬನ್ನಿ ಎಂದು ಮರಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. 

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಎಂ.ಪರ್ವೇಝ್, ಇಂದು ಮೂವರು ಮಹಿಳೆಯರು ಸೆನ್ಸನ್ ಮಾಡಲು ಮುಂದಾಗಿದ್ದು ಇದು ಸ್ಥಳಿಯ ಆಡಳಿತಕ್ಕೆ ಯಾವುದೇ ಮಾಹಿತಿ ಇರುವುದಿಲ್ಲ. ಇಂತಹ ಅನುಮಾಸ್ಪದ ವ್ಯಕ್ತಿಗಳು ಮನೆಗೆ ಬಂದಲ್ಲಿ ಅವರನ್ನು ಕೂಡಲೆ ವಾಪಸ್ ಕಳಿಸಿ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಇಲ್ಲವೆ ತಂಝೀಮ್ ಸಂಸ್ಥೆಗೆ ತಿಳಿಸಿದ್ದಲ್ಲಿ ನಾವು ಅವರ ವಿರುದ್ಧ ಸೂಕ್ತ ಕ್ರಮ ಜರಗಿಸುವುದಾಗಿ ಅವರು ತಿಳಿಸಿದ್ದಾರೆ. 
 

Read These Next