ವಾರಾಂತ್ಯ ಕರ್ಫ್ಯೂಗೆ ಭಟ್ಕಳ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ

Source: SO NEWS | By MV Bhatkal | Published on 8th January 2022, 11:40 PM | Coastal News | Don't Miss |

ಭಟ್ಕಳ: ರಾಜ್ಯ ಸರಕಾರ ವಿಧಿಸಿದ ವಾರಾಂತ್ಯ ಕರ್ಫ್ಯೂಗೆ ಭಟ್ಕಳ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಬೆಳಿಗ್ಗೆಯಿಂದಲೇ ಅಗತ್ಯ ವಸ್ತುಗಳ ಮಳಿಗೆಗಳನ್ನು ಬಿಟ್ಟು ಉಳಿದ ಎಲ್ಲಾ ಅಂಗಡಿಗಳೂ ಬಂದ್ ಇದ್ದು ಜನ ಸಂಚಾರ ಅತ್ಯಂತ ವಿರಳವಾಗಿತ್ತು. 
ನಗರದಲ್ಲಿಯ ಹೆಚ್ಚಿನ ಅಂಗಡಿಗಳು ಬಂದ್ ಇದ್ದು ಜನರ ಓಡಾಟ ಕೂಡಾ ತೀರಾ ವಿರಳವಾಗಿದ್ದು ಅಗತ್ಯ ವಸ್ತುಗಳ ಮಳಿಗೆಗಳನ್ನು ಬಿಟ್ಟರೆ ಇತರೆ ಎಲ್ಲಾ ಅಂಗಡಿಗಳೂ ಕೂಡಾ ಬಂದ್ ಇದ್ದುದರಿಂದ ಜನ ಪೇಟೆಗೆ ಬರುವ ಗೋಜಿಗೇ ಹೋಗಿಲ್ಲ. ಕೆಲವೊಂದು ಹೋಟೆಲ್‌ಗಳು ಪಾರ್ಸೆಸ್ ಸರ್ವಿಸ್ ನೀಡಿದ್ದರೆ ಇನ್ನೂ ಕೆಲವು ಹೋಟೇಲ್‌ಗಳು ಬಾಗಿಲೇ ತೆರೆಯದೇ ಬಂದ್ ಮಾಡಿದ್ದು ಕಂಡು ಬಂದಿದೆ. ಕೆಲವು ಕಡೆಗಳಲ್ಲಿ ಹಣ್ಣು, ತರಕಾರಿ ಅಂಗಡಿಗಳು ತೆರೆದಿದ್ದರೂ ಕೂಡಾ ಗಿರಾಕಿಗಳೇ ಇಲ್ಲದೇ ಕಾಯುವಂತಾಗಿತ್ತು. ಜನರು ರಸ್ತೆಗಿಳಿಯದೇ ಇರುವುದರಿಂದ ಪೊಲೀಸ್ ಇಲಾಖೆಯ ಕೆಲಸ ಸುಗಮವಾಗಿತ್ತು. ಆದರೂ ಅಲ್ಲಲ್ಲಿ ನಿಂತು ಓಡಾಡುವವರನ್ನು ವಿಚಾರಿಸುತ್ತಿರುವುದು ಕಂಡು ಬಂದಿದೆ. 
ಎರಡನೇ ಶನಿವಾರವಾದ್ದರಿಂದ ಸರಕಾರಿ ಕಚೇರಿಗಳು, ಬ್ಯಾಂಕುಗಳಿಗೆ ರಜೆ ಇದ್ದುದರಿಂದ ಜನರ ಓಡಾಟ ಇನ್ನಷ್ಟು ವಿರಳವಾಗಲು ಕಾರಣವಾಗಿತ್ತು. ಕೆಲವೊಂದು ಸೇವೆಗಳಿಗೆ ಹಾಗೂ ಆಸ್ಪತ್ರೆಗೆ ಹೋಗುವವರಿಗೆ, ವ್ಯಾಕ್ಸಿನೇಶನ್ ತೆಗೆದುಕೊಳ್ಳಲು ಹೋಗುವವರಿಗೆ ವಿನಾಯಿತಿ ಇದ್ದರೂ ಸಹ ಜನ ಹೆಚ್ಚಾಗಿ ಹೊರಗೆ ಬರದೇ ಇರುವುದರಿಂದ ರಸ್ತೆ ಖಾಲಿ ಖಾಲಿಯಾಗಿತ್ತು. ಒಟ್ಟಾರೆ ಬೆಳಿಗ್ಗೆಯಿಂದಲೇ ಜನ ಸಂಚಾರ ಇಲ್ಲದೇ ಬಂದ್ ಸಂಪೂರ್ಣ ಯಶಸ್ವೀಯಾಗಿತ್ತು

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...