ಹೊಸದಿಲ್ಲಿ: ಕೊರೋನ: ಸರಕಾರದ ವೈಫಲ್ಯಗಳ ವಿಚಾರಣೆ ಮೂಕಪ್ರೇಕಕನಾಗಲು ಸಾಧ್ಯವಿಲ್ಲ; ಸುಪ್ರೀಂ, ಹೈಕೋರ್ಟ್‌ಗಳನ್ನು ತಡೆಯುವುದಿಲ್ಲ

Source: VB | By S O News | Published on 28th April 2021, 2:14 PM | National News |

ಹೊಸದಿಲ್ಲಿ: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಆಮ್ಲಜನಕ ಕೊರತೆ, ಔಷಧ, ಲಸಿಕೆ ಮತ್ತು ಇತರ ಅಗತ್ಯವಸ್ತುಗಳ ಪೂರೈಕೆಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಾಗ ಇದೇ ರೀತಿಯ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ಗಳನ್ನು ತಡೆಯುವ ಉದ್ದೇಶವಿಲ್ಲ. ಆದರೆ ಈ ಸಂದರ್ಭದಲ್ಲಿ ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.

ಸುಪ್ರೀಂಕೋರ್ಟ್ ನಿರ್ವಹಿಸಬೇಕಿರುವ ಕೆಲವು ರಾಷ್ಟ್ರೀಯ ಸಮಸ್ಯೆಗಳಿವೆ. ರಾಷ್ಟ್ರೀಯ

ಖಾಸಗಿ ವ್ಯಕ್ತಿಗಳಿಂದ ರೆಮ್ ಡೆಸಿವಿರ್ ಖರೀದಿ ಹೇಗೆ ಸಾಧ್ಯ? ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ

ಮುಂಬೈ: ಔಷಧ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಕೇಂದ್ರ ಸರಕಾರಕ್ಕೆ ಪೂರೈಸಬೇಕಿದ್ದು ಅಲ್ಲಿಂದ ರಾಜ್ಯ ಸರಕಾರಕ್ಕೆ ಹಂಚಿಕೆಯಾಗಬೇಕು. ಹೀಗಿರುವಾಗ ರೆಮ್‌ಡೆಸಿವಿರ್‌ ಮತ್ತಿತರ  ಕೋವಿಡ್-19 ಔಷಧಗಳನ್ನು ಖಾಸಗಿ ವ್ಯಕ್ತಿಗಳು ಔಷಧ ಉತ್ಪಾದಕರಿಂದ ನೇರವಾಗಿ ಖರೀದಿಸಿ ವಿತರಿಸಲು ಹೇಗೆ ಸಾಧ್ಯ ಎಂದು ಬಾಂಬೆ ಹೈಕೋರ್ಟ್ ಕೇಂದ್ರ ಸರಕಾರವನ್ನು ಮಂಗಳವಾರ ಪ್ರಶ್ನಿಸಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಅಸಮರ್ಪಕವಾಗಿ  ನಿರ್ವಹಿಸಲಾಗುತ್ತಿದೆ ಎಂದು ದೂರಿ ಮತ್ತು ರಮ್‌ಡೆಸಿರ್ ಹಾಗೂ ಆಮ್ಲಜನಕದ ಕೊರತೆಗೆ ಸಂಬಂಧಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ನ್ಯಾಯವಾದಿ ಸ್ನೇಹಾ ಮರ್ಜಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭ ಮುಖ್ಯ ನ್ಯಾಯಾಧೀಶ ದೀಪಂಕರ್‌ ದತ್ತಾ ಮತ್ತು ನ್ಯಾಯಾಧೀಶ ಗಿರೀಶ್ ಎಸ್.ಕುಲಕರ್ಣಿ ಅವರಿದ್ದ ನ್ಯಾಯಪೀಠ ಈ ಪ್ರಶ್ನೆ ಎತ್ತಿದೆ.

ಮಹಾರಾಷ್ಟ್ರದ ಅಹ್ಮದ್‌ನಗರ ಸಂಸದ ಡಾ.ಸುಜಯ್ ವಿಖೆ ಪಾಟೀಲ್ ಕಳೆದ ವಾರ ರೆಮಡೆಸಿವಿರ್ ಲಸಿಕೆಯ 10,000 ಶೀಷೆಗಳನ್ನು ದಿಲ್ಲಿಯಿಂದ ಖರೀದಿಸಿ ಹಂಚಿದ್ದಾರೆ ಎಂಬ ದೂರಿನ ಕುರಿತೂ ಇದೇ ವೇಳೆ ಹೈಕೋರ್ಟ್ ಗಮನ ಹರಿಸಿತು. ಇದೇ ವಿಷಯದ ಬಗ್ಗೆ ಬಾಂಬೆಹೈಕೋರ್ಟ್‌ ಔರಂಗಾಬಾದ್ ಪೀಠ ಸೋಮವಾರ ವಿಚಾರಣೆ ನಡೆಸಿದೆ.

'ರೆಮ್ಡೆಸಿವಿರ್ ಲಸಿಕೆಯ 10,000 ಬಾಟಲಿಗಳನ್ನು ಬಾಡಿಗೆ ವಿಮಾನದ ಮೂಲಕ ದಿಲ್ಲಿಯಿಂದ ಸಾಗಿಸಲು ಹೇಗೆ ಸಾಧ್ಯವಾಗಿದೆ? ಇದು ವ್ಯಕ್ತಿಯೊಬ್ಬ ಖಾಸಗಿ ವಿತರಣೆ ಮಾಡಿದಂತೆ ಆಗಿಲ್ಲವೇ? ದಿಲ್ಲಿಯಲ್ಲೇ ತೀವ್ರ ಬಿಕ್ಕಟ್ಟು ಇದೆ. ಯಾರಿಗೆ ತುರ್ತು ಅಗತ್ಯವಿದೆಯೋ ಅವರಿಗೆ ಔಷಧಗಳು ಲಭಿಸಬೇಕೆಂದು ನಾವು ಬಯಸುತ್ತೇವೆ, ಕೆಲವರ ಕೈಗೆ ಮಾತ್ರ ಸಿಗುವುದಲ್ಲ ಎಂದು ನ್ಯಾ.ಗಿರೀಶ್ ಕುಲಕರ್ಣಿ ಹೇಳಿದರು. ಇಂತಹ ಪ್ರಕರಣಗಳು ಹಲವು ನಡೆದಿವೆ. ಇನ್ನು ಮುಂದೆ ಔಷಧ ಸಂಸ್ಥೆಗಳು ಖಾಸಗಿ ವ್ಯಕ್ತಿಗಳಿಗೆ ನೇರವಾಗಿ ಔಷಧ ಒದಗಿಸುವ ಪ್ರಕರಣ ಗಮನಕ್ಕೆ ಬಂದರೆ ಅಂತಹ ಸಂಸ್ಥೆಗಳ ವಿರುದ್ಧ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಹಾಸಿಗೆ ನಿರ್ವಹಣೆ ಕುರಿತ ಹೆಲ್ಟ್ ಲೈನ್ ನಂಬರ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ನೀಡುವಂತೆ ನ್ಯಾಯಪೀಠ ಬೃಹನ್ಮುಂಬೈ ನಗರಪಾಲಿಕೆಗೆ ನಿರ್ದೇಶಿಸಿತು.

ಬಿಕ್ಕಟ್ಟಿನ ಸಂದರ್ಭ ಸುಪ್ರೀಂಕೋರ್ಟ್ ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ ಎಂದು ಅದು ಹೇಳಿದೆ. ಪ್ರಕರಣಗಳ ವಿಚಾರಣೆ ನಡೆಸದಂತೆ ಹೈಕೋರ್ಟ್‌ಗಳನ್ನು ತಡೆಯುತ್ತಿಲ್ಲ. ನಾವು ಪೂರಕ ಪಾತ್ರ ನಿರ್ವಹಿಸುತ್ತಿದ್ದೇವೆ. ಪ್ರಾದೇಶಿಕ ಇತಿಮಿತಿಯ ಕಾರಣ ಹೈಕೋರ್ಟ್‌ಗಳಿಗೆ ಸಮಸ್ಯೆಯಾದರೆ ನಾವು ನೆರವಾಗುತ್ತೇವೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಎಲ್.ಎನ್. ರಾವ್ ಮತ್ತು ರವೀಂದ್ರ ಎಸ್. ಭಟ್ ಅವರಿದ್ದ ನ್ಯಾಯಪೀಠ ಹೇಳಿದೆ.

ಕೊರೋನ ಸೋಂಕು ಪ್ರಕರಣ ಹೆಚ್ಚುತ್ತಿರುವ ಮಧ್ಯೆಯೇ, ದೇಶದಾದ್ಯಂತ ಆಮ್ಲಜನಕ, ಲಸಿಕೆ ಮತ್ತು ಔಷಧ ಹಂಚಿಕೆಯಲ್ಲಿ ಉಂಟಾಗಿರುವ ಸಮಸ್ಯೆಯ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವುದಾಗಿ ಕಳೆದ ವಾರ ಸುಪ್ರೀಂಕೋರ್ಟ್ ಹೇಳಿತ್ತು. ಅಲ್ಲದೆ ರಾಷ್ಟ್ರೀಯ ಯೋಜನೆಯ ವಿವರ ಒದಗಿಸುವಂತೆ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಹಲವು ರಾಜ್ಯಗಳ ಹೈಕೋರ್ಟ್‌ನಲ್ಲಿ ನಡೆಯುತ್ತಿರುವಾಗ, ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗುತ್ತದೆ ಎಂದು ಹಲವು ಹಿರಿಯ ನ್ಯಾಯವಾದಿಗಳು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್, ನೋಟಿಸ್ ಜಾರಿಗೊಳಿಸುವ ಉದ್ದೇಶದ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವಿದೆ.

ಹೈಕೋರ್ಟ್ ಮೇಲ್ವಿಚಾರಣೆ ವಹಿಸಿರುವ ಪ್ರಕರಣಗಳನ್ನು ವಶಕ್ಕೆ ಪಡೆದುಕೊಳ್ಳುವುದು ಈ ಕಾರ್ಯಕಲಾಪಗಳ ಉದ್ದೇಶವಲ್ಲ. ಹೈಕೋರ್ಟ್‌ಗಳ ಪಾತ್ರ ಅಮೂಲ್ಯವಾಗಿದ್ದು ಈ ಪ್ರಕರಣಗಳ ಮೇಲ್ವಿಚಾರಣೆ ನಡೆಸಲು ಉತ್ತಮ ಸ್ಥಿತಿಯಲ್ಲಿವೆ' ಎಂದು ಹೇಳಿದೆ. ಅಲ್ಲದೆ, ಆಮ್ಲಜನಕ ಹಂಚಿಕೆಯ ಮಾಹಿತಿ, ಲಸಿಕೆ ಪೂರೈಕೆ ಮತ್ತು ಲಸಿಕೆಯ ದರದ ಮಾಹಿತಿ, ರಾಜ್ಯಗಳ ಯೋಜಿತ ಅಗತ್ಯ, ಹಾಸಿಗೆ, ಅಗತ್ಯದ ಔಷಧಗಳ ಪೂರೈಕೆಯ ಮಾಹಿತಿ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಶುಕ್ರವಾರ ಪ್ರಕರಣವನ್ನು ವಿಚಾರಣೆಗೆ ಮತ್ತೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ಕೋವಿಡ್ ಲಸಿಕೆಯ ದರನಿಗದಿಯ ಹಿಂದಿನ ತರ್ಕಬದ್ಧತೆ ಸ್ಪಷ್ಟಪಡಿಸಿ : ಕೇಂದ್ರಕ್ಕೆ ಸುಪ್ರೀಂ ಸೂಚನೆ

ಕೊರೋನ ವೈರಸ್ ಲಸಿಕೆಗಳು ಮತ್ತು ಇತರ ಅಗತ್ಯ ವಸ್ತುಗಳ ದರಗಳನ್ನು ಯಾವ ಆಧಾರದಲ್ಲಿ ನಿಗದಿಗೊಳಿಸಲಾಗಿದೆ ಮತ್ತು ಅದರ ಹಿಂದಿನ ತರ್ಕಬದ್ದತೆ ಏನು ಎನ್ನುವುದನ್ನು ಅಫಿಡವಿಟ್ ವೊಂದರಲ್ಲಿ ಸ್ಪಷ್ಟಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು  ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ. ಅದು ಪೂರಕ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ ಎಂದು ನ್ಯಾ.ಡಿ.ವೈ.ಚಂದ್ರಚೂಡ ನೇತೃತ್ವದ ಪೀಠವು ಹೇಳಿತು. ಆಮ್ಲಜನಕ ಕೊರತೆ ಸೇರಿದಂತೆ ರಾಜ್ಯಗಳಲ್ಲಿಯ ಆರೋಗ್ಯ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರಕಾರಗಳು ಗುರುವಾರ ಸಂಜೆ ಆರು ಗಂಟೆಯೊಳಗೆ ತಮ್ಮ ಉತ್ತರಗಳನ್ನು ಸಲ್ಲಿಸಬೇಕು ಎಂದು ನಿರ್ದೇಶ ನೀಡಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಶುಕ್ರವಾರ ಅಪರಾಹ್ನಕ್ಕೆ ನಿಗದಿಗೊಳಿಸಿತು.

ಆಯಾ ರಾಜ್ಯಗಳಲ್ಲಿ ಉಚ್ಚ ನ್ಯಾಯಾಲಯಗಳು ಪ್ರಕರಣಗಳ ವಿಚಾರಣೆ  ನಡೆಸುತ್ತಿರುವುದರಿಂದ ಮತ್ತು ತಳಮಟ್ಟದ ಸ್ಥಿತಿ ಅವುಗಳಿಗೆ ಚೆನ್ನಾಗಿ ಗೊತ್ತಿರುವುದರಿಂದ ಯಾವುದೇ ನಿರ್ದೇಶಗಳನ್ನು ಹೊರಡಿಸಲು ಅವುಗಳನ್ನು ನಿರ್ಬಂಧಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.

ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಲಸಿಕೆಯ ಪ್ರತಿ ಡೋಸ್ ಗೆ ರಾಜ್ಯ ಸರಕಾರಗಳಿಗೆ 600 ರೂ.ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗಳ ದರವನ್ನು ನಿಗದಿಗೊಳಿಸಿದ್ದರೆ, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್‌ಗೆ ರಾಜ್ಯ ಸರಕಾರಗಳಿಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ದರವನ್ನು ನಿಗದಿಗೊಳಿಸಿದೆ. ಇವೆರಡೂ ಲಸಿಕೆಗಳು ಕೇಂದ್ರ ಸರಕಾರಕ್ಕೆ ಪ್ರತಿ ಡೋಸ್‌ಗೆ 150 ರೂ.ದರದಲ್ಲಿ ಲಭ್ಯವಾಗುತ್ತಿವೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...