ಕೊಲೆ ಪ್ರಕರಣ ನಾಲ್ವರ ಬಂಧನ: ಪೊಲೀಸ್ ಅಧೀಕ್ಷಕ ಪಿ.ಕೃಷ್ಣಕಾಂತ

Source: SO News | By Laxmi Tanaya | Published on 20th April 2021, 9:49 AM | State News |

ಹುಬ್ಬಳ್ಳಿ : ದೇವರಗುಡಿಹಾಳ  ಸರಕಾರಿ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವನ ಕೊಲೆಗೆ ಸಂಬಂಧಿಸಿ ನಾಲ್ವರನ್ನ ಪೊಲೀಸರು ಬಂಧದಿಸಿದ್ದಾರೆ.

 20 ರಿಂದ 25 ವರ್ಷದ ಅನಾಮಧೇಯ ವ್ಯಕ್ತಿಯನ್ನ ಎಲ್ಲಿಯೋ ಕೊಲೆ ಮಾಡಿ ರುಂಡವನ್ನು ಮಾತ್ರ ತಂದು ಅರ್ಧಮರ್ಧ ಸುಟ್ಟಿದ್ದಾರೆ.   ತಲೆ ಕೆಳಗಿನ ಶರೀರವನ್ನು ಎಲ್ಲಿಯೋ ಒಗೆದು ಸಾಕ್ಷಿ ಪುರಾವೆ ನಾಶಪಡಿಸಿದ್ದರು.

ತನಿಖೆ ನಡೆಸಿದ ಪೊಲೀಸರು ಪ್ರಕರಣದ ಆರೋಪಿತರಾದ ನಿಯಾಜಅಹ್ಮದ ಸೈಪುದ್ದೀನ ಕಟಿಗಾರ 21ವರ್ಷ, ತೌಸೀಪ ಅಬ್ದುಲರೆಹಮಾನ ಚನ್ನಾಪೂರ 21 ವರ್ಷ, 
 ಅಲ್ತಾಫ ತಾಜುದ್ದೀನ ಮುಲ್ಲಾ  24 ವರ್ಷ,
 ಅಮನ   ಉರ್ಫ ಮಹ್ಮದಉಮರ ತಂದೆ ನೂರಅಹ್ಮದ ಗಿರಣಿವಾಲೆ  19 ವರ್ಷ ಎಂಬುವವರನ್ನ ಬಂಧಿಸಿದ್ದಾರೆ. ಬಂಧಿತರೆಲ್ಲರೂ   ಹುಬ್ಬಳ್ಳಿಯವರಾಗಿದ್ದಾರೆ.

ಬೆಳಗಾವಿಯ ಉತ್ತರವಲಯ ಐಜಿಪಿ ರಾಘವೇಂದ್ರ ಸುಹಾಸ,  ಧಾರವಾಡ ಎಸ್ಪಿ ಪಿ.ಕೃಷ್ಣಕಾಂತ ಮಾರ್ಗದರ್ಶನದಲ್ಲಿ  ಶ್ರೀ ಎಮ್.ಬಿ.ಸಂಕದ ಡಿ.ಎಸ್.ಪಿ ಧಾರವಾಡ ಗ್ರಾಮೀಣ ರವರ ನೇತೃತ್ವದಲ್ಲಿ ತನಿಖೆ ಕೈಗೊಂಡು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ ಶ್ರೀ ರಮೇಶ ಬಿ ಗೋಕಾಕ, ಕಲಘಟಗಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಪ್ರಭು ಸೂರಿನ, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಮಹೇಂದ್ರ ನಾಯಕ, ಗರಗ ಪೊಲೀಸ್ ಠಾಣೆಯ ಪಿ.ಎಸ್.ಐ ಕಿರಣ ಮೋಹಿತೆ, ಆಳ್ನಾವರ ಠಾಣೆಯ ಪಿ.ಎಸ್.ಐ ಎಸ್.ಆರ್.ಕಣವಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಡಿ.ಚಾಮುಂಡೇಶ್ವರಿ, ಅಣ್ಣಿಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ ಬಸವರಾಜ ಹೂಗಾರ, ಪ್ರೋಬೇಶನರಿ ಪಿ.ಎಸ್.ಐ ಮಧು.ಎಲ್, ರೂಪಾಲಿ ಗುಡೋಡಗಿ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಆರ್.ಎಮ್.ಭದ್ರಾಪೂರ ಎ.ಎಸ್.ಐ, ಡಿ.ಎನ್.ನೀಲಮ್ಮನವರ ಎ.ಎಸ್.ಐ, ಬಿ.ಎಸ್.ಹುಬ್ಬಳ್ಳಿ, ಸಿಬ್ಬಂದಿ ಜನರಾದ ಶ್ರೀ ಎನ್.ಐ.ಹಿರೆಹೊಳಿ, ಹೆಚ್.ಬಿ.ಐಹೊಳೆ, ಎಮ್.ಎಫ್.ವಾಲೀಕಾರ, ಎಮ್.ಎನ್.ತಡಹಾಳ, ದೇವರಾಜ ಎಸ್.ಎಮ್, ಎಸ್.ಆರ್.ಯರಗಟ್ಟಿ, ಎಸ್.ಸಿ.ಲಕ್ಕಮ್ಮನವರ, ಆರ್.ಎನ್.ಮರಡೂರ, ಎಮಹಾಂತೇಶ ನಾನಾಗೌಡ, ಎ.ಎ.ಠಕ್ಕಾಯಿ, ಸಿ.ಬಿ.ಜನಗಣ್ಣವರ, ಆರ್.ಬಿ.ಕುಂದಗೋಳ, ಉದಯಕುಮಾರ, ಮಕ್ಬುಲ್ ಹುಲ್ಲೂರ, ಎಫ್.ಎಚ್.ಯಲಿಗಾರ ವೈ.ಡಿ.ಕುಂಬಾರ, ಡೆವಿಡ್ ಕರಬಣ್ಣವರ, ಸಂತೋಷ ಜವಳಿ ಗರಗ ಪೊಲೀಸ್ ಠಾಣೆ, ಧಾರವಾಡ ಕಂಪ್ಯೂಟರ ವಿಭಾಗದ ಮೊಹಮ್ಮದ ಆರೀಫ್ ಗೋಲಂದಾಜ, ಅಮ್ಜದ.ನವಲೂರ, ಸಿ.ಬಿ.ಮಾಳಗಿ ಇವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿತ್ತು.

ಮೃತ ರಾಕೇಶ ಈತನ ಸಹೋದರಿಯನ್ನು ಪ್ರೀತಿಸುತ್ತಿದ್ದುದಕ್ಕೆ ಮೃತನು ಸಿಟ್ಟಾಗಿದ್ದರಿಂದ ಅವನನ್ನು ನಿಯಾಜ್ ಎಲ್ಲ ಆರೋಪಿತರು ಸೇರಿ ಕೊಲೆ ಮಾಡಿ ಶವವನ್ನು ಕತ್ತರಿಸಿ ಅರ್ಧ ಮರ್ಧ ಸುಟ್ಟು ರುಂಡವನ್ನು ದೇವರಗುಡಿಹಾಳ ಹದ್ದಿಯ ಅರಣ್ಯ ಪ್ರದೇಶದಲ್ಲಿ ಹಾಗೂ ಮುಂಡ, ಕೈ ಕಾಲುಗಳನ್ನು ಕೇಶ್ವಾಪೂರ ಠಾಣಾ ವ್ಯಾಪ್ತಿಯಲ್ಲಿ ಒಗೆದು ಸಾಕ್ಷಿ ಪುರಾವೆ ನಾಶಪಡಿಸಿದ್ದು ಇರುತ್ತದೆ ಅಂತಾ ವಗೈರೆ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಇರುತ್ತದೆ. ಸದರಿ ಆರೋಪಿಗಳ ತನಿಖೆ ಮುಂದುವರಿಸಲಾಗಿದೆ. ಪ್ರಕರಣವನ್ನು ಬೆಳಕಿಗೆ ತಂದ ವಿಶೇಷ ತನಿಖಾ ತಂಡದ ಸದಸ್ಯರಿಗೆ ಬಹುಮಾನ ಘೋಷಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪಿ.ಕೃಷ್ಣಕಾಂತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

 ಸುದ್ದಿಗೋಷ್ಠಿಯಲ್ಲಿ ಡಿ.ವಾಯ್ ಎಸ್.ಪಿ  ಎಂ.ಬಿ.ಸಂಕದ ರವರು ಸೇರಿದಂತೆ ಪ್ರಕರಣದ ತನಿಖಾಧಿಕಾರಿ, ವಿವಿಧ ತಂಡಗಳ ನೇತೃತ್ವ ವಹಿಸಿದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...