ಭಟ್ಕಳದಲ್ಲಿ ಕೆಸರು ಗದ್ದೆಯಾದ ಸಂತೆ ಮಾರುಕಟ್ಟೆ

Source: S.O. News Service | By MV Bhatkal | Published on 24th June 2019, 7:35 PM | Coastal News | Don't Miss |

ಭಟ್ಕಳ: ಪಟ್ಟಣದಲ್ಲಿ ಸುರಿದ ಮಳೆಗೆ ತಾಲೂಕಿನ ಸಂತೆ ಮಾರುಕಟ್ಟೆ ಕೆಸರು ಗದ್ದೆಯಂತಾಗಿದೆ. ಇದರಿಂದ ವ್ಯಾಪಾರಸ್ಥರು ಮತ್ತು ಗ್ರಾಹಕರು ತೊಂದರೆ ಅನುಭವಿಸುವಂತಾಯಿತು.
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ. ತಾಲೂಕಿನ 16 ಗ್ರಾಮ ಪಂಚಾಯಿತಿಗಳ ಸಾವಿರಾರು ಸಂಖ್ಯೆಯ ಜನರು ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಆಗಮಿಸುತ್ತಾರೆ. ಪಟ್ಟಣದಲ್ಲಿ 2 ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ, ಮಾರುಕಟ್ಟೆ ಆವರಣ ಕೆಸರು ಗದ್ದೆಯಂತಾಗಿದೆ. ಗ್ರಾಹಕರು ಇಲ್ಲಿ ನಡೆದಾಡಲು ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ. ಅರ್ಧ ಅಡಿಗಿಂತಲೂ ಹೆಚ್ಚು ಮಣ್ಣು ನಿಂತಿದೆ.ತೆಂಗಿನಕಾಯಿ, ಬಾಳೆಕಾಯಿ ಎಲೆ, ಅಡಿಕೆ, ತರಕಾರಿ ವ್ಯಾಪಾರಸ್ಥರಿಗೆ ಇದರಿಂದ ಹೆಚ್ಚು ತೊಂದರೆಯಾಗಿದೆ. ಗ್ರಾಹಕರು ನಡೆದಾಡುವಾಗ ಕೆಸರು ಮಣ್ಣು ಮಾರಾಟಕ್ಕಿಟ್ಟ ವಸ್ತುವಿನ ಮೇಲೆ ಸಿಡಿಯುತ್ತಿದೆ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗಿರುವುದು ಮಾತ್ರವಲ್ಲದೆ, ಗ್ರಾಹಕರು ಅಂಥ ಮಾರಾಟಗಾರರ ಬಳಿ ಸುಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರಕ್ಕೊಂದು ಬಾರಿ ಬಂದು ಇಲ್ಲಿ ವ್ಯಾಪಾರ ಮಾಡುಲು ತೊಂದರೆಯಾದರೆ ಬೆಳೆದ ವಸ್ತುಗಳನ್ನು ಎಲ್ಲಿಗೆ ಕಳುಹಿಸುವುದು. ಪುರಸಭೆಯವರು ಕೂಡಲೇ ಕ್ರಮ ಕೈಗೊಳ್ಳಬೇಕು. ಕೆಂಪು ಮಣ್ಣು ಇದ್ದು ಕೆಸರು ಆದ ಸ್ಥಳದಲ್ಲಿ ಕನಿಷ್ಠ ಕಲ್ಲಿನ ಪುಟಿಯನ್ನಾದರೂ ಹಾಕಿದರೆ ಕೆಸರು ಮೆತ್ತಿಕೊಳ್ಳುವುದಿಲ್ಲ. ಅಲ್ಲದೆ, ಇಲ್ಲಿನ ಶೌಚಗೃಹಗಳು ಕೂಡ ಶುಚಿತ್ವ ಹೊಂದಿಲ್ಲ. ಆದರೂ ಪುರಸಭೆ ಅಧಿಕಾರಿಗಳು ಶುಲ್ಕ ಮಾತ್ರ ವಸೂಲಿ ಮಾಡುತ್ತಾರೆ ಎಂದು ಕೊಪ್ಪದ ರಾಮ ಮರಾಠಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...