ಯಶಸ್ವಿಯಾಗಿ ನಡೆದ ಸೂಸಗಡಿ ಹೋಬಳಿ ಮಟ್ಟದ ಪಿಂಚಣಿ ಕಂದಾಯ ಮತ್ತು ಅದಾಲತ್ ಕಾರ್ಯಕ್ರಮ

Source: so news | By MV Bhatkal | Published on 21st June 2019, 12:28 AM | Coastal News | Don't Miss |


ಭಟ್ಕಳ: ಇಲ್ಲಿನ ಸೂಸಗಡಿ ಹೋಬಳಿ ಮಟ್ಟದ ಕಂದಾಯ ಮತ್ತು ಪಿಂಚಣಿ ಅದಾಲತ್ ಗುರುವಾರ ದಂದು ಇಲ್ಲಿನ ತಹಸೀಲ್ದಾರ ಕಛೇರಿಯಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಹಾಯಕ ಆಯುಕ್ತ ಸಾಜಿದ್ ಅಹ್ಮದ ಮುಲ್ಲಾ ‘ಸರಕಾರದಿಂದ ಜನರಿಗೆ ಬರುವ ಪಿಂಚಣಿ ಪಹಣಿ ಪತ್ರ ಸಾಮಾನ್ಯ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಅದಾಲತ ನಡೆಸುತ್ತಿದ್ದು, ಮುಂದಿನ ದಿನದಲ್ಲಿ ಪ್ರತಿ ತಿಂಗಳು ಅದಾಲತ ನಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಹಣಿ ಪತ್ರದಲ್ಲಿ ಏನಾದರೂ ದೋಪಷವಿದ್ದಲ್ಲಿ ಸರಿಪಡಿಸಿ ನೀಡಲಾಗುವುದು. ಜನರು ಕಛೇರಿ ತಿರುಗಾಡುವ ಬದಲು ಅದಾಲತನಲ್ಲಿ ಪಾಲ್ಗೊಂಡು ಅರ್ಹ ದಾಖಲಾತಿ ನೀಡಿದ್ದಲ್ಲಿ ಒಂದು ದಿನದಲ್ಲಿ ಅವರಿಗೆ ಆದೇಶ ಪ್ರತಿ ನೀಡುವ ವ್ಯವಸ್ಥೆ ಇದರಿಂದಾಗಲಿದೆ. ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಒಟ್ಟು 20 ಕೊ ಅಧಿಕ ಮಂದಿ ಪಿಂಚಣಿ ಅರ್ಹ ಫಲಾನುಭವಿಗಳಿಗೆ ಮಂಜುರಾತಿ ಪತ್ರಗಳನ್ನು ಸಹಾಯಕ ಆಯುಕ್ತ ಸಾಜಿದ ಅಹ್ಮದ್ ಮುಲ್ಲಾ ವಿತರಿಸಿದರು. 
ಈ ಸಂಧರ್ಭದಲ್ಲಿ ತಹಸೀಲ್ದಾರ್ ವಿ.ಎನ್.ಬಾಡಕರ್, 
ಜಿಲ್ಲಾ ಪಂಚಾಯತ ಸದಸ್ಯ ಅಲ್ಬರ್ಟ್ ಡಿಕೋಸ್ತ 
ಕಂದಾಯ ನಿರೀಕ್ಷಕ ಗಣಪತಿ ಮೈತ್ರಿ , ತಹಸೀಲ್ದಾರ್ ಕಛೇರಿ ಕ್ಲರ್ಕ ವಿಶ್ವನಾಥ ಕರಡಿ ಮತ್ತು ತಾಲೂಕಿನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

Read These Next

ಭಟ್ಕಳ ಸೆಂಟ್ರಲ್ ಫತ್ರ್ ಕಮಿಟಿ ವತಿಯಿಂದ ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...