ಶಾಲಾ ಪರಿಚಾರಕೀಯರನ್ನು ಸನ್ಮಾಸಿ ಗಾಂಧಿ ಕನಸು ನನಸಾಗಿಸಿದ ವಿದ್ಯಾರ್ಥಿಗಳು

Source: sonews | By Staff Correspondent | Published on 2nd October 2019, 4:24 PM | Coastal News | Don't Miss |

•    ವಿನೋತನವಾಗಿ ಗಾಂಧೀ ಜಯಂತಿ ಆಚರಿಸಿದ ನ್ಯೂಶಮ್ಸ್ ಸ್ಕೂಲ್ ಶಾಲಾ ವಿದ್ಯಾರ್ಥಿಗಳು


ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯೂ ಶಮ್ಸ್ ಸ್ಕೂಲ್ ಶಾಲೆಯಲ್ಲಿ ಬುಧವಾರ ಶಾಲೆಯ 13 ಪರಿಚಾರಕೀಯರನ್ನು ಶಾಲು ಹೊದೆಸಿ ಪುಷ್ಪಾಹಾರ ಹಾಕಿ ಸನ್ಮಾನಿಸಿ ಗೌರವಿಸುವುದರ ಮೂಲಕ ವಿನೋತನವಾಗಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲೆ ಫಹಮಿದಾ ಡಾಟಾ, ಗಾಂಧೀಜಿ ಸ್ವಚ್ಚಭಾರತದ ಕನಸನ್ನು ಕಂಡಿದ್ದರು ಪ್ರತಿದಿನ ಶಾಲೆಯನ್ನು ಸ್ವಚ್ಚ ಹಾಗೂ ಸುಂದರವಾಗಿಟ್ಟುಕೊಳ್ಳುವಲ್ಲಿ ಇಲ್ಲಿನ ಪರಿಚಾರಕೀಯರು(ಆಯಾ) ದಿನಾಲು ಶ್ರಮವಹಿಸುತ್ತಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದ್ದು ಗಾಂಧಿ ಜಯಂತಿಯಂದು ಅವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಗಾಂಧಿ ಕನಸನ್ನು ಸಕಾರಗೊಳಿಸಿದಂತಾಗಿದೆ ಎಂದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಆಯಾ(ಪರಿಚಾರಕಿ) ಗೀತಾ ನಾಯ್ಕ, ದಿನಾಲು ಶಾಲಾ ವಾತವರಣವನ್ನು ಸುಂದರವಾಗಿಡಲು ನಾವು ಆದಷ್ಟು ಪ್ರಯತ್ನ ಮಾಡುತ್ತೇವೆ. ಈ ವಿದ್ಯಾರ್ಥಿಗಳಿಂದ ಇಂತಹ ಬಹುಮಾನವನ್ನು ನಾವು ನಿರೀಕ್ಷಿಸಿರಲಿಲ್ಲ. ವಿದ್ಯಾರ್ಥಿಗಳು ನಮಗೆ ಸನ್ಮಾನಿಸಿ ಗೌರವಿಸಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು. 

ಮತ್ತೋರ್ವ ಹಿರಿಯಾ ಪರಿಚಾರಕಿ ಹಾಝಿರಾ ಬಿ ಮಾತನಾಡಿ ನಾನು ಕಳೆದ ಹತ್ತಾರು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಆಡಳಿತ ಮಂಡಳಿ, ಸಿಬಂಧಿ ವರ್ಗ, ಹಾಗೂ ವಿದ್ಯಾರ್ಥಿಗಳು ನಮ್ಮೊಂದಿಗೆ ಸದ್ವರ್ತನೆಯನ್ನು ತೋರುತ್ತಾರೆ. ಈ ವರ್ಷ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಆಯಾಗಳಾದ ಜಯಂತಿ ಮೊಗೇರ್, ಶಬೀನಾ ಸಾರಾ, ಬಿಬಿ ಆಸ್ಮಾ, ಶಮ್ಶಾದ್ ಬೇಗಂ, ಮುಮ್ತಾಝ್ ಶೇಖ್, ಝೀನತ್, ದೀಪಾ ಮೊಗೇರ್, ಕೋಮಲಾ ಮೊಗೇರ್, ಮೂಕಾಂಬಿಕಾ, ಯಾಸ್ಮೀನ್, ನಾಗಮ್ಮರನ್ನು ಶಾಲು ಹೊದೆಸಿ ಪುಷ್ಪಾಹಾರ ಹಾಕಿ ಸನ್ಮಾನಿಸಿ ಗೌರಸಿಲಾಯಿತು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...