ವಿಶ್ವ ಪರಿಸರ ದಿನ ಅಂಗವಾಗಿ ವಿವಿಧ ಇಲಾಖಾ ಕಚೇರಿಗೆ ಅಲಂಕಾರಿಕಾ ಸಸಿ ಕೊಡುಗೆ ನೀಡಿದ ನ್ಯೂ ಶಮ್ಸ್ ವಿದ್ಯಾರ್ಥಿಗಳು

Source: SOnews | By Staff Correspondent | Published on 5th June 2023, 9:29 PM | Coastal News |

ಭಟ್ಕಳ: ಇಲ್ಲಿನ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನಗರ ಪೊಲೀಸ್ ಠಾಣೆ ಹಾಗೂ ಸಹಾಯಕ ಆಯುಕ್ತರ ಕಚೇರಿಗೆ ಅಲಂಕಾರಿಕ ಸಸಿ ಕೊಡುಗೆಯಾಗಿ ನೀಡಿದರು.

ಸಸಿಯನ್ನು ಸ್ವೀಕರಿಸಿದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾರದಾ ನಾಯ್ಕ ವಿದ್ಯಾರ್ಥಿಗಳ ಪರಿಸರ ಪ್ರೇಮದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ರ ಅನುಪಸ್ಥಿತಿಯಲ್ಲಿ ಕಚೇರಿಯ ಹಿರಿಯ ಸಿಬ್ಬಂಧಿ ರೂಪಾ ಜೋಗಳೇಕರ್ ಸಸಿಯನ್ನು ಸ್ವೀಕರಿಸಿ ಧನ್ಯವಾದ ಅರ್ಪಿಸಿದರು. ನಗರಠಾಣೆಯ ಎಸ್.ಐ ಯಲ್ಲಪ್ಪ ವಿದ್ಯಾರ್ಥಿಗಳಿಂದ ಸಸಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮಾರ್ಗದರ್ಶಿ ಶಿಕ್ಷಕ ಎಂ.ಆರ್.ಮಾನ್ವಿ ನ್ಯೂ ಶಮ್ಸ್ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣ ನೀಡುತ್ತಿದ್ದು ಪ್ರತಿಯೊಂದು ಅವಕಾಶಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಲಾಗುತ್ತಿದೆ. ಅವರನ್ನು ಕೇವಲ ಪಾಟ ಪುಸ್ತಕಗಳಿಗೆ ಸೀಮಿತಗೊಳಿಸದೆ ಸಮಾಜದ ಬಗ್ಗೆ ಕಳಕಳಿ, ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳಾದ ಮುಹಮ್ಮದ್ ಯುಶಾ ಸಿದ್ದೀಖಾ, ಹಂಝಲಾ, ಹಬೀಬ್ ಮೋಟಿಯಾ, ಮುಹಮ್ಮದ್ ಇಫ್ಹಾಮ್ ಮೊಹತೆಶಮ್, ಮುಹಮ್ಮದ್ ಝಯ್ಯಾನ್ ಬಂಗಾಲಿ, ಮುಹಮ್ಮದ್ ಗಿತ್ರೀಫ್ ರಿದಾ, ಸೈಯದ್ ಸಾಬಿಕ್ ಬರ್ಮಾವರ್, ಮುಹಮ್ಮದ್ ಲಬೀದ್ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...