ಗೋವಿಂದ ನಾಯ್ಕ ಹೋರಾಟಕ್ಕೆ ೩೦ವರ್ಷ ಪೂರೈಕೆ ಹಿನ್ನಲೆಯಲ್ಲಿ ಛತ್ರಪತಿ ಶಿವಾಜಿ ಪುತ್ಹಳಿ ನೀಡಿ ಸನ್ಮಾನ

Source: so news | By MV Bhatkal | Published on 28th March 2023, 12:31 AM | Coastal News | Don't Miss |

ಭಟ್ಕಳ: ತಾಲೂಕಿನ ಹಿಂದೂ ಹೋರಾಟಗಾರ ಗೋವಿಂದ ನಾಯ್ಕ ಅವರ ಹೋರಾಟಕ್ಕೆ ೩೦ವರ್ಷ ಸಂದ ಹಿನ್ನಲೆಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಬೃಹತ್ ಬೈಕ್ ರ‍್ಯಾಲಿ ನಡೆಸಿ ಅವರ ಮನೆಗೆ ತೆರಳಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಹಳಿ ನೀಡಿ ಗೌರವಿಸಲಾಯಿತು.
ತಾಲೂಕಿನ ಮುರ್ಡೇಶ್ವರದಿಂದ ಹೋರಟ ಬೃಹತ್ ಬೈಕ ರ‍್ಯಾಲಿ ಸಾರದಹೊಳೆ, ಶಿರಾಲಿ, ವೆಂಕಟಾಪುರದ ಮೂಲಕ ಭಟ್ಕಳದ ಹಮುಮಾನನಗರದ ಅವರ ಮನೆಗೆ ತಲುಪಿತು.ನೂರಾರು ಯುವಕರ ಪಡೆ ಬೈಕ್ ಮುಖಾಂತರ ಅವರ ಮನೆಗೆ ತೆರಳಿ ಅವರನ್ನು ಗೌರವಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಹಿಂದೂ ಹೋರಾಟಗಾರ ಗೋವರ್ದನ ನಾಯ್ಕ, ೧೯೯೨ರಲ್ಲಿ ಭಟ್ಕಳದ ಸ್ಥಿತಿ ಈಗಿನಂತಿರಲಿಲ್ಲ. ಅಂದು ಮನೆಯಿಂದ ಹೋರಹೋದವರು ಮತ್ತೆ ಮನೆಗೆ ಮರಳುತ್ತಾರೆ ಎನ್ನುವ ಯಾವುದೆ ಭರವಸೆ ಇರಲಿಲ್ಲ. ಅಂದು ಭಟ್ಕಳದ ಹಿಂದೂ ಜಾಗರಣ ವೇದಿಕೆ ಹಿಂದೂಗಳ ರಕ್ಷಣೆಗೆ ಪಭತೊಟ್ಟು ನಿಂತಿದ್ದು ಅದರ ಫಲ ಇಂದು ನಾವೆಲ್ಲರೂ ಸುಭಿಕ್ಷೆಯಿಂದ ದಿನ ಕಳೆಯುವಂತಾಗಿದೆ. ಭಟ್ಕಳದಲ್ಲಿ ಎನ್.ಜಿ.ಕೊಲ್ಲೆ, ನರೇಂದ್ರ ನಾಯಕ, ಸುರೇಂದ್ರ ಶ್ಯಾನಭಾಗ, ಎ.ಡಿ ಖಾರ್ವಿ, ಗೋವಿಂದ ಖಾರ್ವಿ, ರಾಮದಾಸ ಖಾರ್ವಿ, ವಿವೇಕ ಭಟ್, ಲಕ್ಷö್ಮಣ ನಾಯ್ಕ, ಜಿ.ಪಿ. ನಾಯ್ಕ, ತಿಮ್ಮಪ್ಪ ನಾಯ್ಕ ಮಂಜಪ್ಪ ನಾಯ್ಕ ಮಾಸ್ತಪ್ಪ ನಾಯ್ಕ, ಪುರುಷೊತ್ತಮ ಶ್ಯಾನಭಾಗ ಕುಟುಂಬ, ಹನುಮಂತ ಶ್ಯಾನಭಾಗ, ಗೊರ್ಟೆ ಬಾಬು ಸೇರಿ ಅನೇಕ ಹಿಂದೂ ಮುಖಂಡರೊAದಿಗೆ ಭಟ್ಕಳದ ಹಿಂದೂ ಫೈರ್ ಬ್ರಾಂಡ್ ಗೋವಿಂದ ನಾಯ್ಕ ನೇತ್ರತ್ವದಲ್ಲಿ ಹೋರಾಟದ ಪರಿಣಾಮ ಗಲಭೆ ಶಾಂತಗೊಳ್ಳುವAತಾಯಿತು. ಅಂದಿನ ದಿನದ ಘಟನೆಗಳನ್ನು ಸವಿಸ್ತಾರವಾಗಿ ತಿಳಿಸಿದರು. ಸನ್ಮಾನ ಸ್ವೀಕರಿಸಿದ ಗೋವಿಂದ ನಾಯ್ಕ ಮಾತನಾಡಿ ಅಂದು ಹೋರಾಟಕ್ಕೆ ಗೋವಿಂದ ನಾಯ್ಕ ಮಾತ್ರವಲ್ಲದೆ ನೂರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಅಂದು ಹೋರಾಟದಲ್ಲಿ ತಮ್ಮನ್ನು ತಾವು ಸಮಿರ್ಪಿಸಿಕೊಂಡಿದ್ದರು. ಹತ್ತಾರು ಕೇಸುಗಳನ್ನು ಮೈಲೇಲೆ ಎಳೆದುಕೊಂಡಿದ್ದರು. ರಾಜ್ಯದ ಹಲವು ಜೈಲುವಾಸಗಳನ್ನು ಅನುಭವಿಸುವಂತಾಯಿತು. ಹಿಂದುತ್ವಕ್ಕೆ ಧಕ್ಕೆಯಾದಗಲೆಲ್ಲಾ ಈ ಹೋರಾಟ ನಿರಂತರವಾಗಿ ಮುಂದುವರೆದಿದೆ. ಹರನ ಮತ್ತು ಜನರ ಆಶೀರ್ವಾದದಿಂದ ಇಂದು ನಿಮ್ಮೆಲ್ಲರನ್ನು ನೋಡುವಂತ ಅವಕಾಶ ಸಿಕ್ಕಿದೆ ಎಂದು ಹೇಳಿದರು. ಮುಂಡಳ್ಳಿ ರಾಜು ನಾಯ್ಕ ಮಾತನಾಡಿ ಹಿಂದುತ್ವದ ಸೋಗು ಹಾಕಿಕೊಂಡವರು, ಕೇಸರಿ ಶಾಲು ಹಾಕಿಕೊಂಡವರಿAದ ಇಂದು ನಾವು ಹಿಂದುತ್ವದ ಪಾಠ ಕಲಿಯಬೇಕಾಗಿರುವದು ನಮ್ಮ ದೌರ್ಬಾಗ್ಯ ಎಂದರು.ಉದಯ ನಾಯಕ ಮುರ್ಡೇಶ್ವರ,ನಾಗೇಂದ್ರ ಶೆಟ್ಟಿ, ರವಿ ಜಾಲಿ, ತಿಮ್ಮಪ್ಪ ಕೊಣಿಮನೆ, ರಾಘು ನಾಯ್ಕ ಮುಟ್ಟಳ್ಳಿ ಸೇರಿ ಇತರರು ಸಭೆಯಲ್ಲಿ ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...