ಬೆಂಗಳೂರು ಚಲೋ ಪೂರ್ವಭಾವಿ ಸಭೆ: ಅರಣ್ಯವಾಸಿಗಳ ಮೇಲೆ ದೌರ್ಜನ್ಯ ನಿಲ್ಲಿಸಿ. ರವೀಂದ್ರ ನಾಯ್ಕ

Source: Press Release | By I.G. Bhatkali | Published on 5th February 2023, 9:11 PM | Coastal News |

 

ಜೊಯಿಡಾ: ಅರಣ್ಯವಾಸಿಗಳ ಮೇಲೆ ಕಾನೂನುಬಾಹೀರ ದೌರ್ಜನ್ಯ ಮತ್ತು ಕಿರುಕುಳ ನೀಡುವುದನ್ನು ನಿಯಂತ್ರಿಸಿ ಇಲ್ಲದಿದ್ದರೆ ಜಿಲ್ಲಾದ್ಯಂತ ಅರಣ್ಯ ಕಛೇರಿಯ ಮುಂದೆ ಪ್ರತಿಭಟನೆ ಜರುಗಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ಅವರು ಇಂದು ಜೊಯಿಡಾ ತಾಲೂಕಿನ ಕುಣಬಿ ಭವನದಲ್ಲಿ ಫೆಬ್ರುವರಿ ೧೦ ರಂದು ಅರಣ್ಯ ವಾಸಿಗಳ ‘ಬೆಂಗಳೂರು ಚಲೋ’ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಮೇಲೆ ಕಾನೂನು ಬಾಹಿರವಾಗಿ ಅರಣ್ಯ ಸಿಬ್ಬಂದಿಗಳು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅರಣ್ಯವಾಸಿಗಳ ಮೇಲೆ ಹಾಕಿರುವ ಕ್ರೀಮಿನಲ್ ಮೊಕದ್ದಮೆಯನ್ನು ಸರಕಾರ ಹಿಂದಕ್ಕೆ ಪಡೆಯಬೇಕೆಂದು ಅವರು ಅಗ್ರಹಿಸಿದ್ದಾರೆ.

 ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ಹಂತದಲ್ಲಿರುವಾಗ ಅರಣ್ಯವಾಸಿಯ ಅಧಿಭೋಗದಲ್ಲಿರುವ ಸಾಗುವಳಿ ಕ್ಷೇತ್ರಕ್ಕೆ ಆತಂಕ ಉಂಟುಮಾಡಬಾರದೆAಬ ಕಾನೂನಿನ ಉಲ್ಲೇಖವಿದ್ದಾಗಲೂ, ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅರಣ್ಯವಾಸಿಗಳೊಂದಿಗೆ ದೈಹಿಕ ಬಲಪ್ರಯೋಗ ಮೂಲಕ ಸಾಗುವಳಿಗೆಗೆ ಆತಂಕ ಉಂಟುಮಾಡಿದ್ದಲ್ಲದೇ, ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳು ಕ್ರೀಮಿನಲ್ ಮೊಕದ್ದಮೆ ದಾಖಲಿಸಿರುವುದು ಖೇದಕರ ಎಂದು ಅವರು ಹೇಳಿದರು.



ಬೆಂಗಳೂರು ಚಲೋ ಯಶಸ್ವಿಗೊಳಿಸಿ:
ಫೇಬ್ರವರಿ ೧೦ ರಂದು ಬೆಂಗಳೂರಿನಲ್ಲಿ ಜರುಗುವ ಅರಣ್ಯವಾಸಿಗಳ ಕಾರ್ಯಕ್ರಮಕ್ಕೆ ಹೇಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಆಗಮಿಸುವುದೊಂದಿಗೆ ಬೆಂಗಳೂರು ಚಲೋ ಯಶಸ್ವಿಗೊಳಿಸಬೇಕು ಹಾಗೂ ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸುವಲ್ಲಿ ಸರಕಾರದ ಮೇಲೆ ಒತ್ತಡ ಹೇರಲು ಸಹಕರಿಸಬೇಕೆಂದು ರವೀಂದ್ರ ನಾಯ್ಕ ಹೆಳಿದರು.

ಕಾರ್ಯಕ್ರಮದಲ್ಲಿ ದಿಲೀಪ ಮಿರಾಶಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಸ ವೆಳ್ಳಿಪ್, ರತ್ನಾಕರ ನಾಯ್ಕ, ಮಹಾದೇವ ಭಾಗ್ವತ್, ದತ್ತಾ ದೇಸಾಯಿ, ಮುನಿಯಮ್ಮ ರಾಮ ಶೇಟ, ಪ್ರಶಾಂತ ಚೌಕಿಕರ, ಸಂದೀಪ ಕ್ಯಾತೊಳಿಕರ, ಅಣ್ಣಪ್ಪ ಗಾಂವಕರ, ರಾಮಚಂದ್ರ ಮೋರೆ, ಕೃಷ್ಣ ರಾಮ ಕುಶಲಕರ ಮುಂತಾದವರು ಭಾಗವಸಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...