ಮುಷ್ಕರ ಕೈಬಿಟ್ಟು ಸೇವೆ ಆರಂಭಿಸಿ: ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ

Source: SO News | By Laxmi Tanaya | Published on 21st April 2021, 7:44 AM | State News | Don't Miss |

ಬೆಂಗಳೂರು: ಕೊರೋನ ಸಂಕಷ್ಟದ ಮಧ್ಯೆ  ಮುಷ್ಕರ ನಡೆಸುವುದು ಸೂಕ್ತವಲ್ಲ. ಸಾರಿಗೆ ಮುಷ್ಕರವನ್ನು ತಕ್ಷಣವೇ ನಿಲ್ಲಿಸಿ, ಸೇವೆ ಆರಂಭಿಸಿ ಎಂದು ಸಾರಿಗೆ ನೌಕರರಿಗೆ ಹೈಕೋರ್ಟ್ ಮಂಗಳವಾರ ಖಡಕ್ ಸೂಚನೆ ನೀಡಿದೆ.

 ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ನಿಮ್ಮ ಬೇಡಿಕೆಗಳನ್ನು ಕಾಯ್ದಿರಿಸಿ, ಸೇವೆ ಆರಂಭಿಸಲು ನೌಕರರಿಗೆ ಸೂಚನೆ ನೀಡಿತು. ಕೆಎಸ್ಸಾರ್ಟಿಸಿ, ಬಿಎಂಟಿಸಿ, ಸಾರಿಗೆ ಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಎಲ್ಲ ಪ್ರತಿವಾದಿಗಳಿಗೆ
ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಎ.22ರ ಬೆಳಗ್ಗೆ 1:40ಕ್ಕೆ ಮುಂದೂಡಿತು.

ಸರಕಾರದ ಪರ ವಾದಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಮುಷ್ಕರ ನಿರತರ ವಿರುದ್ಧ ಎಸ್ಮಾ ಹಾರಿಗೊಳಿಸಲಾಗಿದೆ. ಸರಕಾರ ಕಾರ್ಮಿಕರ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದೆ. ಸಾರಿಗೆ ನೌಕರರ ಮುಷ್ಕರ ಕಾನೂನುಬಾಹಿರವೆಂದು, ಸರಕಾರಿ ನೌಕರರಾಗಿಸುವ ಬೇಡಿಕೆ ಪರಿಗಣಿಸುವುದು ಸಾಧ್ಯವಿಲ್ಲ. ಅಲ್ಲದೆ, ಸಾರಿಗೆ ನೌಕರರಲ್ಲಿ ಕೆಲವರಾದರೂ ಸೇವೆಗೆ ಹಾಜರಾಗುತ್ತಿದ್ದು, ಪರಿಸ್ಥಿತಿ ಹಿಂದಿಗಿಂತ ಉತ್ತಮವಾಗಿದೆ ಎಂದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠ, ಸಾರಿಗೆ ನೌಕರರ ಮುಷ್ಕರದ ಕುರಿತು ಬೇಸರ ವ್ಯಕ್ತಪಡಿಸಿತು. ಸಾರಿಗೆ ನೌಕರರ ಮುಷ್ಕರ ಸರಿಯೋ ತಪ್ಪೋ ಅದು ಎರಡನೇ ವಿಚಾರ. ಆದರೆ, ಮೊದಲಿಗೆ ಸಾರಿಗೆ ಸೇವೆ ಜನರಿಗೆ ಲಭ್ಯವಾಗಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.

ಅಲ್ಲದೇ, ನೌಕರರ ಬೇಡಿಕೆಗಳು ಕಾನೂನುಬದ್ಧವಾಗಿಯೇ ಇರಬಹುದು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಸಾರಿಗೆ ಸೇವೆ ತುರ್ತು ಅಗತ್ಯವಾಗಿದ್ದು, ಕೂಡಲೇ ಕಾರ್ಯಾರಂಭ ಮಾಡುವುದು ಸೂಕ್ತ ಎಂದಿತು. ಜತೆಗೆ, ಸಾರಿಗೆ ನೌಕರರು ತಮ್ಮ ಬೇಡಿಕೆಯನ್ನು ಹಿಂಪಡೆಯದೆಯೂ ಮುಷ್ಕರ ಕೈಬಿಟ್ಟು ಜನಸಾಮಾನ್ಯರಿಗೆ ಸೇವೆ ನೀಡಲು ಮುಂದಾಗುತ್ತಾರೆ ಎಂದು ನ್ಯಾಯಾಲಯಕ್ಕೆ ಈಗಲೂ ಭರವಸೆ ಇದೆ ಎಂದು ಅಭಿಪ್ರಾಯಪಟ್ಟು ವಿಚಾರಣೆ ಮುಂದೂಡಿತು. 

ಸಾರಿಗೆ ನೌಕರರ ಮುಷ್ಕರ ತಡೆಹಿಡಿಯಲು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯನ್ನು(ಎಸ್ಲಾ) ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಮತ್ತು ಸರಕಾರದ ನಡುವೆ ಮಧ್ಯಸ್ಥಿಕೆ ವಹಿಸಿ, ಶಾಶ್ವತ ಪರಿಹಾರ ಸೂಚಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋಟ್ ೯ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿತ್ತು. ಹೀಗೆ, ನಾಲ್ಕು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ.

Read These Next

ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ...

ಕುಂದಾಪುರ: ಕುಂದಾಪುರ, ಉಳ್ಳಾಲ, ಕಾಪುವಿನಲ್ಲಿ ಕಡಲ್ಕೊರೆತ, ಮರವಂತೆಯಲ್ಲಿ ತೆಂಗಿನಮರ, ಮೀನುಗಾರಿಕಾ ಶೆಡ್‌ಗಳು ಸಮುದ್ರಪಾಲು, ಸೋಮೇಶ್ವರದಲ್ಲಿ ಆವರಣ ಗೋಡೆ ಕುಸಿತ

ವಾಯುಭಾರ ಕುಸಿತದಿಂದ ಪಶ್ಚಿಮದ ಅರಬಿ ಸಮುದ್ರದಲ್ಲಿ ಉಂಟಾದ ತೌಕ್ತೆ ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧಗೊಳ್ಳಲಾರಂಭಿಸಿದ್ದು

*ಕಲ್ಲಡ್ಕದಲ್ಲಿ ಬಿಜೆಪಿ ಕರ‍್ಯರ‍್ತರಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಅರೋಪಿಗಳ ಮೇಲೆ ಇಲಾಖೆ ಯಾಕಾಗಿ ಕ್ರಮ ಕೈಗೊಳ್ಳತ್ತಿಲ್ಲ : ಎಸ್ ಡಿ ಪಿ ಐ*

ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಇಂದು ಲಾಕ್ಡೌನ್ ಅವದಿ ಮುಗಿದ ನಂತರ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸುತ್ತಿದ್ದ ಬಂಟ್ವಾಳ ನಗರ ...

ಉಡುಪಿ: ಕರಾವಳಿಯಲ್ಲಿ ಇಂದು, ನಾಳೆ ರೆಡ್ ಅಲರ್ಟ್, ಅರಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತ ಭೀತಿ

ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ 'ತೌಕ್ತೆ' ಹೆಸರಿನ ಚಂಡಮಾರುತ ಉಂಟಾಗಿದ್ದು, ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ...

ಕೋಲಾರ: ವೇಮಗಲ್ ವೃತ್ತನಿರೀಕ್ಷಕ ಹಂತದ ಠಾಣೆಯಾಗಿ ಮೇಲ್ದರ್ಜೆಗೆ ಸಚಿವ ಬಸವರಾಜ್ ಬೊಮ್ಮಾಯಿಗೆ ಸುದರ್ಶನ್ ಧನ್ಯವಾದ

ವೇಮಗಲ್ ಪೊಲೀಸ್ ಠಾಣೆಯನ್ನು ವೃತ್ತ ನಿರೀಕ್ಷಕ ಹಂತದ ಠಾಣೆಯಾಗಿ ಹಾಗೂ ನರಸಾಪುರ ಹೊರ ಠಾಣೆಯನ್ನು ಉಪ ಆರಕ್ಷಕ ನಿರೀಕ್ಷಕರ ...

ತೌಕ್ತೆ ಚಂಡಮಾರುತ ದ ಎಫೆಕ್ಟ್ ಗೆ ತತ್ತರಿಸಿದ ಉತ್ತರಕನ್ನಡ ಕರಾವಳಿ. ಮನೆಗಳಿಗೆ ನುಗ್ಗಿದ ನೀರು, ಆಸ್ತಿಪಾಸ್ತಿಗೆ ಹಾನಿ.

ಕಾರವಾರ : ತೌಕ್ತೆ ಚಂಡಮಾರುತದ ಎಫೆಕ್ಟ್ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ತಟ್ಟಿದೆ. ಪರಿಣಾಮವಾಗಿ ಜಿಲ್ಲೆಯ ಕಡಲಂಚಿನಲ್ಲಿ ...

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಬಳಕೆಯ ಬಗ್ಗೆ ನೌಕಾದಳದ ಅಧಿಕಾರಿಗಳಿಂದ ಮಾಹಿತಿ

ಪ್ರಸಕ್ತವಾಗಿ ಕೋವಿಡ್ ಕೇಂದ್ರಗಳಿಗೆ ಆಮ್ಲಜನಕ ಬೇಡಿಕೆ ಹೆಚ್ಚುತ್ತಿದ್ದು, ಆಮ್ಲಜನಕ ಬಳಕೆಯ ಸಂದರ್ಭದಲ್ಲಿ ಯಾವುದೇ ಅನಾಹುತ ...