ಭಟ್ಕಳ: ಸಹಕಾರಿ ಕ್ಷೇತ್ರ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ : ಶಾಸಕ ಸುನಿಲ್

Source: S.O. News Service | By I.G. Bhatkali | Published on 27th November 2020, 1:37 PM | Coastal News |

ಭಟ್ಕಳ: ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಸಂಘಗಳು ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಸಹಕಾರಿ ಕ್ಷೇತ್ರ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.

ಅವರು ಗುರುವಾರ ತಾಲೂಕಿನ ಹೆಬಳೆಯಲ್ಲಿ ಕಾಮಧೇನು ಕಲ್ಪತರು ಸೌಹಾರ್ದ ಕೋ-ಆಪರೇಟಿವ್ ಲಿ. ಅನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಸಂಘಗಳಲ್ಲಿ 24 ಗಂಟೆಗಗಳ ಒಳಗೆ ವಾಹನ ಸಾಲ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಸರಕಾರ ಸಹಕಾರಿ ಸಂಘಗಳ ಮೂಲಕ ಹಲವಾರು ಯೋಜನೆಗಳನ್ನು ಜನರಿಗೆ ನೀಡುತ್ತಿದ್ದು, ಸಹಕಾರಿಯ ಬೆಳವಣಿಗೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ವಿವರಿಸಿದರು.

ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಪರಮೇಶ್ವರ ದೇವಡಿಗ ಮಾತನಾಡಿ, ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಆಡಳಿತ ಮಂಡಳಿಗಳ ಪಾತ್ರ ಮುಖ್ಯವಾಗಿದೆ. ಸಂಘದ ಸದಸ್ಯರು ಒಗ್ಗಟ್ಟಾಗಿ ದುಡಿದಾಗ ಮಾತ್ರ ಸಂಘದ ಏಳಿಗೆ ಸಾಧ್ಯ ಎಂದರು.

ಅಚ್ಯುತ ಪ್ರಭು ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.

ಕುಮಟಾ ಸಹಾಯಕ ನಿಬಂಧಕಿ ಸುಜಾತ ಭಂಟ, ತಾಪಂ ಸದಸ್ಯ ಮಹಾಬಲೇಶ್ವರ ನಾಯ್ಕ, ಹೆಬಳೆ ಗ್ರಾಪಂ ಮಾಜಿ ಅಧ್ಯಕ್ಷ ಎನ್.ಡಿ.ಮೊಗೇರ ಮಾತನಾಡಿದರು. ಮಹ್ಮದ್ ಗೌಸ್ ಎಮ್. ಬಂಗಾಲಿ, ಕಾಮಧೇನು ಕಲ್ಪತರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿನೋದ ಪ್ರಭು, ಉಪಾಧ್ಯಕ್ಷ ಯುವರಾಜ ದೇವಡಿಗ, ಸುಬ್ರಾಯ ದೇವಡಿಗ, ಭಾಸ್ಕರ ದೈಮನೆ, ಜಯಾ ಲಕ್ಷ್ಮಣ ನಾಯ್ಕ, ಮೋಹನ ನಾಯ್ಕ, ಮಂಜುನಾಥ ನಾಯ್ಕ ಜಾಲಿ, ದಾಸ ನಾಯ್ಕ ತಲಗೋಡು, ಪ್ರಮೋದ ಜೋಶಿ, ಮಾದೇವ ಗೊಂಡ ಉಪಸ್ಥಿತರಿದ್ದರು. ಲಕ್ಷ್ಮಣ ನಾಯ್ಕ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...