ಶ್ರೀನಿವಾಸಪುರ; ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಾರಂಭ

Source: sonews | By Staff Correspondent | Published on 4th May 2020, 10:03 PM | State News |

ಶ್ರೀನಿವಾಸಪುರ: ಪಟ್ಟಣದಲ್ಲಿ  ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಪ್ರಾರಂಭಿಸಲಾಯಿತು. ಮೊದಲ ಬಸ್ಸನ್ನು ಕೋಲಾರಕ್ಕೆ ಕಳುಹಿಸಿಕೊಡಲಾಯಿತು. 

 ಪ್ರಯಾಣಿಕರು ಬಸ್‌ ಹತ್ತುವ ಮುನ್ನ ಅವರ ವಿಳಾಸ ವಿಚಾರಿಸಲಾಯಿತು. ಕೈಗೆ ರೋಗಾಣು ನಿರೋಧಕ ಔಷಧ ಸಿಂಪಡಣೆ ಮಾಡಲಾಯಿತು. ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು.

ಆರಂಭದಲ್ಲಿ ಶ್ರೀನಿವಾಸಪುರದಿಂದ ಕೋಲಾರ ಹಾಗೂ ಮುಳಬಾಗಲಿಗೆ ಬಸ್‌ ಸಂಚಾರ ಪ್ರಾರಂಭಿಸಲಾಗುವುದು. ಪ್ರತಿ ಬಸ್‌ನಲ್ಲಿ 25 ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಇರುತ್ತದೆ. ಆದರೆ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆ ವರೆಗೆ ಮಾತ್ರ ನಿಗದಿತ ಮಾರ್ಗಗಳಲ್ಲಿ ಬಸ್‌ ಸಂಚಾರ ಇರುತ್ತದೆ ಎಂದು ವ್ಯವಸ್ಥಾಪಕ ಎನ್‌.ಜಿ.ಪ್ರಶಾಂತ್‌ ಕುಮಾರ್‌ ಹೇಳಿದರು. ಅಧಿಕಾರಿಗಳಾದ ಮನೋಹರ್‌, ಬಾನು ಇದ್ದರು.

Read These Next