ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕ್ರೀಡಾಕೂಟ. ಧಾರವಾಡ ಜಿಲ್ಲಾ ನೌಕರರ ಉತ್ತಮ ಸಾಧನೆ.

Source: SO News | By Laxmi Tanaya | Published on 26th October 2021, 8:16 PM | State News | Don't Miss |

ಧಾರವಾಡ : 2021ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೂರು ದಿನಗಳ ಕಾಲ ದಾವಣಗೆರೆಯಲ್ಲಿ ಜರುಗಿತು. 

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಧಾರವಾಡ ಜಿಲ್ಲೆಯ ನೌಕರರು 7 ವಿಭಾಗಗಳಲ್ಲಿ ಪ್ರಥಮ ಸ್ಥಾನ, 5 ದ್ವಿತೀಯ ಮತ್ತು 5 ತೃತೀಯ ಸ್ಥಾನಗಳಿಸಿ, ಪದಕ ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹರ್ಷ ವ್ಯಕ್ತಪಡಿಸಿ, ವಿಜೇತರನ್ನು ಅಭಿನಂದಿಸಿದ್ದಾರೆ. 

 ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಾವಣಗೆರೆ ಕ್ರೀಡಾಕೂಟದಲ್ಲಿ ಧಾರವಾಡ ಜಿಲ್ಲೆಯ ಸರ್ಕಾರಿ ನೌಕರರು ಪಾಲ್ಗೊಂಡು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಸ್ಪರ್ಧೆ ವಿಜೇತರ ವಿವರ: ಶಶಿಧರ ವಿ. ದಮ್ಮಳ್ಳಿ, ಶಿಕ್ಷಣ ಇಲಾಖೆ, ಕುಂದಗೋಳ ಟೇಬಲ್ ಟೆನಿಸ್ಸ್ ಸಿಂಗಲ್ ದಲ್ಲಿ ಪ್ರಥಮ ಸ್ಥಾನ.  ನಾಗರಾಜ ಈಚಗೇರಿ, ಶಿಕ್ಷಣ ಇಲಾಖೆ, ಎಮ್.ಪಿ.ಎಸ್. ತಾರಿಹಾಳ, 100 ಮೀಟರ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.  ಪಿ.ಎಸ್. ಅರಳಿಕಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಧಾರವಾಡ, ಟೇಬಲ್ ಟೆನಿಸ್ಸ್ ಡಬಲ್ಸ್ ದಲ್ಲಿ ಪ್ರಥಮ ಸ್ಥಾನ. ಶಶಿಧರ ವಿ. ದಮ್ಮಳ್ಳಿ, ಶಿಕ್ಷಣ ಇಲಾಖೆ, ಕುಂದಗೋಳ, ಟೇಬಲ್ ಟೆನಿಸ್ಸ್ ಡಬಲ್ಸ್ ದಲ್ಲಿ ಪ್ರಥಮ ಸ್ಥಾನ, ರಾಮಪ್ಪ ಸೂರಗೊಂಡ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ - 50 ಮೀಟರ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ರವೀಂದ ರಾಮಪ್ಪ ಅಲ್ಲಾಪೂರ, ಆರ್.ಡಿ.ಪಿ.ಆರ್. ಕಲಘಟಗಿ 67 ಕೆಜಿ ರೋಮನ್ ಕುಸ್ತಿಯಲ್ಲಿ ಪ್ರಥಮ ಸ್ಥಾನ.  ಸರಸ್ವತಿ ಸುಣಗಾರ, ಶಿಕ್ಷಣ ಇಲಾಖೆ, ನವಲಗುಂದ, 50 ಕೆಜಿ ಕುಸ್ತಿಯಲ್ಲಿ ಪ್ರಥಮ ಸ್ಥಾನ.  ವೆಂಕಟೇಶ ಎಚ್.ವಿ., ಪೊಲೀಸ್ ತರಬೇತಿ ಕೇಂದ್ರ ಧಾರವಾಡ - 400 ಮೀ. ಓಟ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ. ಜಗದೀಶಚಂದ್ರ ವಿ.ಆಲದಕಟ್ಟಿ, ಅಬಕಾರಿ ಇಲಾಖೆ, ಧಾರವಾಡ 100 ಕೆಜಿ ಬಾರ ಎತ್ತುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಶಂಕರ ಸಿ. ಪುರೋಹಿತ, ಭೂಮಾಪನ ಇಲಾಖೆ, ಧಾರವಾಡ, ಹಿಂದೂಸ್ಥಾನಿ ಲಘು ಸಂಗೀತ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ. ನಾಗರಾಜ ಬಾಗುನವರ, ಶಿಕ್ಷಣ ಇಲಾಖೆ, ಧಾರವಾಡ 60 ಕೆಜಿ. ಗ್ರೀಕೊ ರೋಮನ್ ಕುಸ್ತಿಯಲ್ಲಿ ದ್ವಿತೀಯ ಸ್ಥಾನ. ಗಿರೀಜಾ ಎಸ್. ಮುಗಳಿ, ಶಿಕ್ಷಣ ಇಲಾಖೆ, ಕುಂದಗೋಳ, ಟೆನಿಕ್ವಾಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಎ.ಎ. ಪೆÇಲೀಸ್ ಪಾಟೀಲ್, ಕೃಷಿ ಇಲಾಖೆ, ಧಾರವಾಡ. 81 ಕೆ.ಜಿ ಬಾರ ಎತ್ತುವ ಸ್ಪರ್ಧೆಯಲ್ಲಿ ತೃತೀಯ ಸ್ಥಾನ. ಯಂಕನಗೌಡ ಬಿ. ಗೌಡರ,ಶಿಕ್ಷಣ ಇಲಾಖೆ, ಕಲಘಟಗಿ, 97 ಕೆಜಿ, ಗ್ರೀಕೊ ರೋಮನ್ ಕುಸ್ತಿಯಲ್ಲಿ ತೃತೀಯ ಸ್ಥಾನ.  ಡಾ. ಕುಮಾರ ನಾಯ್ಕ, ಜಂಟಿ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ, ಧಾರವಾಡ ಮತ್ತು ನಾಗರಾಜ ಉಳ್ಳಾಗಡ್ಡಿ ಅರಣ್ಯ ಇಲಾಖೆ, ಧಾರವಾಡ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ದಲ್ಲಿ ತೃತೀಯ ಸ್ಥಾನ.  ರೇಖಾ ಜಿ. ಬಾಡಗಿ ಆರೋಗ್ಯ ಇಲಾಖೆ, ಧಾರವಾಡ ಮತ್ತು ಸುಮನ ಜಯಂತ್ ಅರಣ್ಯ ಇಲಾಖೆ, ಧಾರವಾಡ ಕೆರಂ ಡಬಲ್ಸ್ ದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮತ್ತು ಗುಂಪು ಆಟದ ಸ್ಪರ್ಧೆಯಲ್ಲಿ- ಹಾಕಿ ಪುರಷರ ಆಟದಲ್ಲಿ ಸಂಬಾಜಿ ಶಿಂಧೆ (ನಾಯಕ), ವಾಯ್ ಎಲ್. ಕಟ್ಟನಳ್ಳಿ (ಉಪನಾಯಕ) ಮತ್ತು ಸಂಗಡಿಗರು ತೃತೀಯ ಸ್ಥಾನವನ್ನು ಪಡೆದು ವಿಜೇತರಾಗಿದ್ದಾರೆ.
 ರಾಜ್ಯ ಮಟ್ಟದ ಈ ಕ್ರೀಡಾಕೂಟದಲ್ಲಿ ಧಾರವಾಡ ಜಿಲ್ಲೆಯಿಂದ ಭಾಗವಹಿಸಿ ಅಮೋಘ ಸಾಧನೆಯನ್ನು ಮಾಡಿ, ಪದಕಗಳನ್ನು ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ಸಾಂಸ್ಕೃತಿಕ ಸ್ಪರ್ಧಾಳುಗಳಿಗೆ ಧಾರವಾಡ ಜಿಲ್ಲೆಯ ನೌಕರರ ಪರವಾಗಿ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಪ್ರಧಾನ ಕಾರ್ಯದರ್ಶಿ ಎಸ್.ಜಿ. ಸುಬ್ಬಾಪೂರಮಠ, ಗೌರವಾಧ್ಯಕ್ಷ ಆರ್.ಬಿ. ಲಿಂಗದಾಳ, ಖಜಾಂಚಿ ರಾಜಶೇಖರ ಬಾಣದ, ನೌಕರರ ಭವನದ ಕಾರ್ಯದರ್ಶಿ ಗಿರೀಶ ಚೌಡಕಿ ಹಾಗೂ ನೌಕರ ಸಂಘದ ಪದಾಧಿಕಾರಿಗಳು ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read These Next

ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಜವಾಬ್ದಾರಿಯರಿತು ಕಾರ್ಯನಿರ್ವಹಿಸಿ - ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ

ಶಿವಮೊಗ್ಗ : ಡಿಸೆಂಬರ್ 10ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣಾ ಕಾರ್ಯಕ್ಕೆ ...

ವಿಶ್ವ ವಿಕಲಚೇತನರ ದಿನಾಚರಣೆ ಕಾನೂನು ಸೇವಾ ಪ್ರಾಧಿಕಾರದಿಂದ ಸಹಕಾರ, ನ್ಯಾಯಾಧೀಶೆ ಪುಪ್ಷಲತಾ.

ಧಾರವಾಡ : ವಿಕಲಚೇತನರಿಗೆ ಅನುಕಂಪದ ಕಾರಣದಿಂದ ಅವಕಾಶ ವಂಚಿತರಾಗಬಾರದು, ಇಂತಹ ಮಕ್ಕಳಿಗೆ ಅಸಡ್ಯೆ ತೋರದೆ ಕಾಳಜಿ ಪೂರ್ವಕವಾಗಿ ...

ಸಂತ ಫ್ರಾನ್ಸಿಸ್ ಸ್ಮರಣಾರ್ಥ ಮುಂಡಳ್ಳಿ ಚರ್ಚನಿಂದ ಭಟ್ಕಳ ಬಂದರ್ ದೀಪಸ್ತಂಭದವರೆಗೆ ಕ್ರೈಸ್ತರ ಮೆರವಣಿಗೆ

.ಶ.1552ರಲ್ಲಿ ಇಹಲೋಕ ತ್ಯಜಿಸಿದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಮೃತ ದೇಹವನ್ನು ಭಟ್ಕಳ ಬಂದರಿನಲ್ಲಿ ಕೆಲ ಕಾಲ ಇರಿಸಿ ನಂತರ ಗೋವಾಗೆ ...

ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕರ್ತವ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ : ಡಿಸೆಂಬರ್ 10 ರಂದು ನಡೆಯುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನಪರಿಷತ್ ಚುನಾವಣೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ...

ಮನೆ ಮನೆಗೆ ಲಸಿಕಾ ಮಿತ್ರ : ಜಿಲ್ಲೆಯಲ್ಲಿ ಹೆಚ್ಚಳವಾಯಿತು ಲಸಿಕೆ ಪಡೆಯುವವರ ಸಂಖ್ಯೆ

ಉಡುಪಿ : ಕೋವಿಡ್ ನಿಂದ ಗರಿಷ್ಠ ಸುರಕ್ಷತೆ ಪಡೆಯಲು 2 ಡೋಸ್ ಲಸಿಕೆಯನ್ನು ಪಡೆಯುವುದು ಅಗತ್ಯವಾಗಿದ್ದು, ಈಗಾಗಲೇ ಮೊದಲನೇ ಡೋಸ್ ಪಡೆದವರು ...