ಮೈಸೂರು: ಕೇಂದ್ರದ ಸರ್ವಾಧಿಕಾರದಿಂದ ರಾಜ್ಯಕ್ಕೆ ಧಕ್ಕೆ, ರಾಜ್ಯ ಬಿಜೆಪಿ ನಾಯಕರಿಗೆ ತೀವ್ರ ಮುಜುಗರ

Source: VB | By S O News | Published on 28th March 2021, 5:56 PM | State News | National News |

ಮೈಸೂರು: ಕೇಂದ್ರದ ಸರ್ವಾಧಿಕಾರಿ ನೀತಿಯಿಂದಾಗಿ ರಾಜ್ಯದ ಅಭಿವೃದ್ಧಿಗೆ ಧಕ್ಕೆಯಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಸಚಿವರಿಂದಲೇ ಈ ಆರೋಪ ಹೊರ ಬಂದಿರುವುದು ಚರ್ಚೆಗೆ ಕಾರಣವಾಗಿದೆ.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಿ.ಎಸ್.ಸಿದ್ದಲಿಂಗಶೆಟ್ಟರ ದತ್ತಿ, ಸಿದ್ದಮಣ್ಣಿ ಸಿದ್ದಲಿಂಗಶೆಟ್ಟರ ದತ್ತಿ, ಸಿದ್ದನಂಜಪ್ಪ ದತ್ತಿ, ಶಾಂತಾದೇವಿ ಸಿದ್ದನಂಜಪ್ಪ ದತ್ತಿ ವತಿಯಿಂದ 'ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ' ವಿಷಯದ ಬಗ್ಗೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರದ ಕೆಲವು ನೀತಿಗಳಿಂದಾಗಿ ಪ್ರಾದೇಶಿಕತೆಗೆ ಧಕ್ಕೆ ಬರುತ್ತಿದೆ. ರಾಜ್ಯ

ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯಿಂದ ಒಕ್ಕೂಟ ವ್ಯವಸ್ಥೆಗೆ ಬಹಳ ದೊಡ್ಡ ಆತಂಕ ಎದುರಾಗಿದೆ. ಬೆಳೆದಂತೆ ಉದಾರವಾದಿ ಗಳಾಗಬೇಕಾಗಿದ್ದ ನಾವು ಪ್ರಸಕ್ತ ಕೇಂದ್ರೀಕರಣ' ಆಗುತ್ತಿದ್ದೇವೆ. ಸರ್ವಾಧಿಕಾರಿ ಧೋರಣೆಯಿಂದ ಪ್ರಾದೇಶಿಕ ಸ್ವಾತಂತ್ರ್ಯಕ್ಕೆ ಎಂದಿಗೂ ಒಳಿತಾಗುವುದಿಲ್ಲ.

ತೇಜಸ್ವಿ ಸೂರ್ಯ ಮಾತನಾಡಬೇಕು!

ಕೆಂದ್ರದ ಸರ್ವಾಧಿಕಾರಿ ನೀತಿಯಿಂದಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ದಸಂಸದತೇಜಸ್ವಿ ಸೂರ್ಯ ಮಾತನಾಡಬೇಕು ಎಂದು ತಮ್ಮ ಮಾತುಗಳನ್ನು ಆಲಿಸುತ್ತಿರುವ ಸೂರ್ಯ ಅವರಿಗೆ ಸಲಹೆ ನೀಡಿದಾಗ ಸಂಸದರು ತೀವ್ರ ಮುಜುಗರಕ್ಕೊಳಗಾದರು. ತಮಿಳು ನಾಡಿನ ರಾಜಕಾರಣಿಗಳು ಸದನದಲ್ಲಿ ರಾಜ್ಯದ ಪರವಾಗಿ ಮಾತನಾಡಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ಸಂಸದರಿಂದ ಇದು ನಡೆಯುತ್ತಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.

ಪಟ್ಟಿಯಲ್ಲಿರುವ ಇಲಾಖೆಗಳು ನಿಧಾನವಾಗಿ ಕೇಂದ್ರದ ಕೈಸೇರುತ್ತಿದ್ದು, ಎಲ್ಲವೂ ವಿಕೇಂದ್ರೀಕರಣ ಆಗುವ ಬದಲು ಕೇಂದ್ರೀಕರಣ  ಆಗುತ್ತಿದೆ ಎಂದು ಹೇಳಿದರು.

ಸರ್ವಾಧಿಕಾರಿ ಧೋರಣೆಯಿಂದ ಎಂದಿಗೂ ಪ್ರಾದೇಶಿಕ ಸ್ವಾತಂತ್ರ್ಯಕ್ಕೆ ಒಳಿತಾಗುವುದಿಲ್ಲ. ಸ್ವಾತಂತ್ರ್ಯ ಬಂದಾಗ 16 ರಾಜ್ಯಗಳಿದ್ದವು. ಆದರೆ ಈಗ 29 ರಾಜ್ಯಗಳಿವೆ. ಎಲ್ಲ ರಾಜ್ಯಗಳಲ್ಲಿಯೂ ಅಭಿವೃದ್ಧಿ ಒಂದೆರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುವ ಕಾರಣ ಮಿಕ್ತ ಜಿಲ್ಲೆಗಳು ಬೇರೆ ರಾಜ್ಯ ಕೇಳುತ್ತಿವೆ. ಉತ್ತರ ಕರ್ನಾಟಕ ವಿಚಾರದಲ್ಲಿಯೂ ಇದೇ ಆಗಿದೆ. ತೆಲಂಗಾಣ ರಾಜ್ಯ ಸೃಷ್ಟಿಯಾಗಲೂ ಇದೇ ಕಾರಣ ಎಂದು ಹೇಳಿದರು.

ಕರ್ನಾಟಕದಲ್ಲಿ ಇರುವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಅವಕಾಶ ಇಲ್ಲ. ತುಮಕೂರಿನಲ್ಲಿ ಪ್ರಧಾನಿ ಉದ್ಘಾಟನೆ ಮಾಡಿದ ಫುಡ್‌ಪಾರ್ಕ್, ಬೆಂಗಳೂರಿನಲ್ಲಿರುವ ಕಂಪೆನಿಗಳು... ಹೀಗೆ ಎಲ್ಲಿ ಕನ್ನಡಿಗರಿಗೆ ಆದ್ಯತೆ ಇದೆ?. ಜಾಗ, ಸೌಲಭ್ಯ ಎಲ್ಲವೂ  ನಮ್ಮದಾದರೂಉದ್ಯೋಗಮಾತ್ರ ಬೇರೆಯವರಿಗೆ ಸೇರಿದೆ. ಇದರ ವಿರುದ್ದ  ತಮಿಳುನಾಡಿನಂತಹ ರಾಜ್ಯಗಳು ಹೋರಾಟ ಮಾಡಿ ತಮ್ಮ ರಾಜ್ಯದವರಿಗೆ ಅನುಕೂಲವಾಗುವಂತೆ ಮಾಡಿದವು. ಆದರೆ ಕರ್ನಾಟಕದ ಜನರು ಹೋರಾಟ
ಮಾಡುವುದಿಲ್ಲ. ಏಕೆಂದರೆ ನಾವು ರಾಷ್ಟ್ರೀಯವಾದಿಗಳು ಎಂದು ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಎಸ್‌ವಿಎಂ ಸಂಸ್ಥಾಪಕ ನಿರ್ದೇಶಕ ಡಾ.ಆರ್.ಬಾಲಸುಬ್ರಹ್ಮಣ್ಯಂ, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಡಾ.ಕಮಲಾ ಕುಮಾರಿ ಮತ್ತಿತರರು ಹಾಜರಿದ್ದರು.
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...