ಕಾರವಾರ : ಜೂನ 21 ರಿಂದ 28 ರವರೆಗೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ

Source: S O News Service | By I.G. Bhatkali | Published on 19th June 2019, 10:13 PM | Coastal News | Don't Miss |

ಕಾರವಾರ :  ಜಿಲ್ಲೆಯಲ್ಲಿ ಜೂನ 21 ರಿಂದ 28 ರವರೆಗೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳು ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  ಕಾರವಾರ ಶೈಕ್ಷಣಿಕ ಜಿಲ್ಲೆಯ 5 ತಾಲೂಕಿನ 6 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟೂ 1344 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಂಕೋಲಾದ ಪಿ. ಎಮ್ ಪ್ರೌಢ ಶಾಲೆ. ಭಟ್ಕಳದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢ ಶಾಲೆ, ಹೊನ್ನಾವರದ ನ್ಯೂ ಇಂಗ್ಲೀಷ ಸ್ಕೂಲ್, ಕಾರವಾರದ ಹಿಂದು ಪ್ರೌಢ ಶಾಲೆ ಹಾಗೂ ಸೆಂಟ್ ಮೈಕಲ್ ಪ್ರೌಢ ಶಾಲೆ,  ಕುಮಟಾದ  ಗಿಬ್ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. 

 ಪರೀಕ್ಷೆಗಳು ಬೆಳಗ್ಗೆ 9.30 ರಿಂದ 12.45 ರವರೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನೀಷೇಧಿತ ಪ್ರದೇಶ ಎಂದು ಜಿಲ್ಲಾಧಿಕಾರಿ ಘೋಷಿಸಿರುತ್ತಾರೆ. 

ಪರೀಕ್ಷಾ ವೇಳಾ ಪಟ್ಟಿ. : ಜೂನ 21 ರಂದು ಗಣಿತ, 24 ರಂದು ವಿಜ್ಞಾನ, 25 ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲೀಷ್, ಸಂಸ್ಕøತ, ಮರಾಠಿ, ತೆಲಗು, ಹಿಂದಿ, ತಮಿಳು, ಉರ್ದು, 26 ರಂದು ಸಮಾಜ ವಿಜ್ಞಾನ, 27 ರಂದು ದ್ವಿತಿಯ ಭಾಷೆ ಕನ್ನಡ ಇಂಗ್ಲೀಷ್ ವಿಷಯಗಳ ಪರೀಕ್ಷೆಗಳು ನಡೆಯಲಿವೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...