ಕಾರವಾರ : ಜಿಲ್ಲೆಯಲ್ಲಿ ಸುಸೂತ್ರವಾಗಿ ಸಂಪನ್ನಗೊಂಡ ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕಾರ್ಯ

Source: S O News Service | By I.G. Bhatkali | Published on 19th April 2019, 11:44 PM | Coastal News |

ಕಾರವಾರ : ರಾಜ್ಯದಾದ್ಯಂತ ಮಾರ್ಚ್-ಎಪ್ರಿಲ್ 2019ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆದು ಏಪ್ರಿಲ್: 17 ರಂದು ಸಂಪನ್ನಗೊಂಡಿದೆ. 

ಏಪ್ರಿಲ್  10 ರಿಂದ ಪ್ರಾರಂಭಗೊಂಡ ಈ ಮೌಲ್ಯಮಾಪನ ಕಾರ್ಯವನ್ನು ಜಿಲ್ಲೆಯ ಕುಮಟಾದ ಆರು ವಿವಿಧ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೌಲ್ಯಮಾಪನಗೊಂಡ ಪ್ರತಿ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಅಂಕಗಳನ್ನು “ONSITE ENTRY”  ಮೂಲಕ ನೇರವಾಗಿ ಮಂಡಳಿಯ ಸರ್ವರ್‍ಗೆ ಸಂಪರ್ಕಿಸುವ ವಿನೂತನ ಮಾದರಿಯ ಮೌಲ್ಯಮಾಪನ ವಿಧಾನವನ್ನು ಅಳವಡಿಸಿದ್ದು, ನಮ್ಮ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಗ್ಗೆ ಸಾಕಷ್ಟು ಮುಂಜಾಗೃತಾ ಕ್ರಮಗಳ ಅನುಷ್ಠಾನದಿಂದಾಗಿ ಯಾವುದೇ ಅಡ್ಡಿ ಆತಂಕವಿಲ್ಲದೇ ಮೌಲ್ಯಮಾಪನ ಕಾರ್ಯ ಸುಗಮವಾಗಿ ನಿಗದಿತ ಸಮಯದಲ್ಲಿ ಮುಕ್ತಾಯಗೊಂಡಿದೆ.

ಪ್ರತಿ ಮೌಲ್ಯಮಾಪನ ಕೇಂದ್ರದಲ್ಲಿ ಒಬ್ಬ ಜಂಟಿ ಮುಖ್ಯ ಮೌಲ್ಯಮಾಪಕರ ನೇತೃತ್ವದಲ್ಲಿ ಒಟ್ಟು ಆರು ಕೇಂದ್ರಗಳಿಂದ ಆಂಗ್ಲ ಮಾಧ್ಯಮದ 11,363 ಉತ್ತರ ಪತ್ರಿಕೆಗಳನ್ನೊಳಗೊಂಡು ವಿವಿಧ ವಿಷಯಗಳ  ಒಟ್ಟು 66,714 ಉತ್ತರ ಪತ್ರಿಕೆಗಳನ್ನು 620 ಸಹಾಯಕ ಮೌಲ್ಯಮಾಪಕರು ಮತ್ತು 123 ಉಪ ಮುಖ್ಯ ಮೌಲ್ಯಮಾಪಕರ ಸಹಾಯದಿಂದ ಸುಸೂತ್ರವಾಗಿ ಮೌಲ್ಯಮಾಪನ ಗೈಯ್ಯಲಾಯಿತು.

ಕಾರವಾರ ಶೈಕ್ಷಣಿಕ ಜಿಲ್ಲೆಯ ಸಾ.ಶಿ.ಇಲಾಖೆಯ ಉಪನಿರ್ದೇಶಕರಾದ ಕೆ.ಮಂಜುನಾಥರವರ ಅನುಭವದ ಮಾರ್ಗದರ್ಶನ ಮತ್ತು ಮುಂದಾಳತ್ವದಲ್ಲಿ, ಉಪನಿರ್ದೇಶಕರ ಕಾರ್ಯಾಲಯ, ಸಾ.ಶಿ.ಇಲಾಖೆ ಕಾರವಾರದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು, ಸರ್ವಶಿಕ್ಷಣ ಅಭಿಯಾನ ಹಾಗೂ ಎಸ್.ಎಸ್.ಎಲ್‍ಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯದ ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀಕಾಂತ ಹೆಗಡೆ ಹಾಗೂ ಉಪನಿರ್ದೇಶಕರ ಕಾರ್ಯಾಲಯ, ಸಾ.ಶಿ.ಇಲಾಖೆ ಕಾರವಾರದ ಶಿಕ್ಷಣಾಧಿಕಾರಿಗಳಾದ ಎನ್.ಜಿ ನಾಯಕರವರ ನಿರಂತರ ಮೇಲುಸ್ತುವಾರಿಯಲ್ಲಿ ಈ ಸಾಲಿನ ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕಾರ್ಯವು ಯಶಸ್ವಿಯಾಗಿ ಸಂಪನ್ನಗೊಂಡಿತ್ತದೆ. 

Read These Next