ಶ್ರೀನಿವಾಸಪುರ:ಈಚಲು ಕುಂಟೆ ಕೆರೆ ವಸತಿ ಪ್ರದೇಶ ಸೀಲ್‌ ಡೌನ್

Source: sonews | By Staff Correspondent | Published on 26th May 2020, 12:17 AM | State News | Don't Miss |

ಶ್ರೀನಿವಾಸಪುರ:  ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಸೋಮವಾರ ಬೆಳಿಗ್ಗೆ ಈಚಲು ಕುಂಟೆ ಕೆರೆ ವಸತಿ ಪ್ರದೇಶವನ್ನು ಸೀಲ್‌ ಡೌನ್ ಮಾಡಲಾಯಿತು.

ಪುರಸಭೆ ಸಿಬ್ಬಂದಿ ಸೋಂಕು ಕಂಡುಬಂದ ಪ್ರದೇಶ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಲ್ಲಿ  ರೋಗಾಣು ನಿರೋಧಕ ಔಷಧ ಸಿಂಪರಣೆ ಮಾಡಿದರು. ಜನರು ಆ ಪ್ರದೇಶಕ್ಕೆ ಹೋಗದಂತೆ ತಡೆಯಲು ಕುವೆಂಪು ವೃತ್ತ, ನಂಬಿಹಳ್ಳಿ ರಸ್ತೆ, ಹಾಗೂ ಸಂತೆ ಮೈದಾನದ ರಸ್ತೆಯನ್ನು ಬಂದ್‌ ಮಾಡಲಾಯಿತು. ಸೋಂಕಿನ ಸುದ್ದಿಯಿಂದ ವಿಚಲಿತರಾದ ನಾಗರಿಕರು ಮನೆಗಳಿಂದ ಹೊರಗೆ ಬರಲಿಲ್ಲ. ಹೊರಗಿನ ಜನರು ಆ ಪ್ರದೇಶಕ್ಕೆ ಹೆಜ್ಜೆ ಇಡಲಿಲ್ಲ.

ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮಾವಿನ ಪಟ್ಟಣದ ಜನರಲ್ಲಿ ಆತಂಕ ಮನೆ ಮಾಡಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಸೋಮವಾರ ಜನ ಸಂದಣಿ ಕಡಿಮೆ ಇದ್ದಿತು. ಸುತ್ತಮುತ್ತಲಿನ ಗ್ರಾಮಗಳ ಓಡಾಟವೂ ಕಡಿಮೆ ಇತ್ತು.

ಕ್ವಾರನ್‌ಟೈನ್‌: ಪಟ್ಟಣದ ಕಾರ್‌ ಚಾಲಕರೊಬ್ಬರು ಚೆನ್ನೈಗೆ ಹೋಗಿ ಬಂದಿದ್ದಾರೆ ಎಂದು ಸಾರ್ವಜನಿಕರು ನೀಡಿದ ದೂರಿನನ್ವಯ, ಅವರನ್ನು ಕ್ವಾರನ್‌ಟೈನ್ ಮಾಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್‌ ತಿಳಿಸಿದ್ದಾರೆ.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next