ಶ್ರೀನಿವಾಸಪುರ:ಕಂದಾಯ ಅದಾಲತ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಮಂಜುನಾಥ್‌ ರೈತರಿಂದ ಅಹವಾಲು ಸ್ವೀಕರಿಸಿದರು.

Source: so news | By Manju Naik | Published on 18th June 2019, 10:11 PM | State News | Don't Miss |

ಶ್ರೀನಿವಾಸಪುರ: ರೈತರು ಕಂದಾಯ ಅದಾಲತ್‌ ಪ್ರಯೋಜನ ಪಡೆದುಕೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಮಂಜುನಾಥ್‌ ಹೇಳಿದರು.
ತಾಲ್ಲೂಕಿನ ರಾಯಲ್ಪಾಡ್ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಂದಾಯ ಅದಾಲತ್‌ ಕಾರ್ಯಕ್ರಮದಲ್ಲಿ ರೈತರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ರೈತರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸು ದೃಷ್ಟಿಯಿಂದ ಕಂದಾಯ ಅದಾಲತ್‌ ನಡೆಸಲಾಗುತ್ತಿದೆ. ಗಡಿ ಗ್ರಾಮದಲ್ಲಿ ಏರ್ಪಡಿಸಿರುವ ಕಂದಾಯ ಅದಾಲತ್‌ಗೆ ತನ್ನದೇ ಆದ ಮಹ್ವವಿದೆ ಎಂದು ಹೇಳಿದರು.
ದೇಶದ ಮುನ್ನಡೆಯಲ್ಲಿ ರೈತ ಸಮುದಾಯದ ಪಾತ್ರ ಹಿರಿದು. ಅಂಥ ಸಮುದಾಯ ಸಮಸ್ಯೆಗಳ ಹಿಂದೆ ಓಡಾಡಿ ಬಳಲಬಾರದು ಎಂಬ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ಅದಾಲತ್‌ ನಡೆಸಿ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿದುವ ಪ್ರಯತ್ನ ಮಾಡಲಾಗುತ್ತಿದೆ. ಪಿಂಚಣಿ, ಜಮೀನು ವಿವಾದ, ನ್ಯಾಯಾಲಯದ ಆದೇಶ ಪಾಲನೆಯಂಥ ವಿಷಯಗಳಲ್ಲಿ ಏನಾದರೂ ಸಮಸ್ಯೆಗಳು ಇದ್ದಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.
ಸಮಸ್ಯೆ ಪರಿಹಾರ ಕೋರಿ ಅರ್ಜಿ ಸಲ್ಲಿಸುವವರು ಯಾವುದೇ ರೀತಿಯ ಭಯ ಅಥವಾ ಒತ್ತಡಕ್ಕೆ ಒಳಗಾಗಬೇಕಾಗಿಲ್ಲ.  ಪ್ರಧಾನ ಮಂತ್ರಿ ಕಿಸಾನ್‌ ಯೋಜನೆ ಸೌಲಭ್ಯ ಪಡೆಯಲು ಎಲ್ ಅರ್ಹ ರೈತರೂ ನಿಗದಿತ ಸಮಯದೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಡಿ ಕೇಂದ್ರ ಸರ್ಕಾರ ರೈತನ ಬ್ಯಾಂಕ್‌ ಖಾತೆಗೆ ಸಮಾನ ಕಂತುಗಳಲ್ಲಿ ವರ್ಷಕ್ಕೆ ರೂ.6000 ಜಮಾ ಮಾಡುವುದು ಎಂದು ಹೇಳಿದರು.
ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ ಮಾತನಾಡಿ, ತಾಲ್ಲೂಕಿನಲ್ಲಿ ಹಂತ ಹಂತವಾಗಿ ಕಂದಾಯ ಅದಾಲತ್‌ಗಳನ್ನು ನಡೆಸಿ, ರೈತರ ಸಮಸ್ಯೆಗನ್ನು ಪರಿಹರಿಸಲಾಗುವುದು. ಮೊದಲ ಬಾರಿಗೆ ಗಡಿ ಗ್ರಾಮಗಳ ರೈತರ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಕಂದಾಯ ಅದಾಲತ್‌ ನಲ್ಲಿ ರಾಯಲ್ಪಾಡ್‌ ಹೋಬಳಿ ವ್ಯಾಪ್ತಿಯ ರೈತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 600ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು.
ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್‌, ರಾಜಸ್ವ ನಿರೀಕ್ಷಕರಾದ ಬಿ.ವಿ.ಮುನಿರೆಡ್ಡಿ, ಬಲರಾಮಯ್ಯ, ಪಿಡಿಒ ನಾಗೇಂದ್ರ ಬಾಬು, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ದಯಾನಂದ್‌ ಇದ್ದರು.

 

 

Read These Next

ಶಾಹೀನ್ ಬಾಗ್ ಪ್ರತಿಭಟನಾಕಾರರ ಕುರಿತಂತೆ ಬಿಜೆಪಿ ಸಂಸದನಿಂದ ಅವಹೇಳನಕಾರಿ ಹೇಳಿಕೆ

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಶಹೀನ್ ಬಾಗ್ ಪ್ರದೇಶದಲ್ಲಿ ಕಳೆದ ಹಲವಾರು ...