ಶ್ರೀನಿವಾಸಪುರ:ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

Source: shabbir | By Arshad Koppa | Published on 27th July 2017, 7:56 AM | State News | Guest Editorial |

ಶ್ರೀನಿವಾಸಪುರ, - ಜು - 26:ಕಾರ್ಗಿಲ್ ಯುದ್ದದಲ್ಲಿ ಅತ್ಮಾರ್ಪಣೆಗೈದ ವೀರಯೋಧರ ಸ್ಮರಣೆ ಪ್ರತಿಯೊಬ್ಬರ ಮನೆ ಮನೆಯ ಹಬ್ಬವಾಗಿ ಆಚರಿಸಿದಾಗ ಮಾತ್ರ ಈ ವಿಜಯಕ್ಕೆ ಗೌರವ ಸಲ್ಲುವಂತಾಗುತ್ತದೆ ಎಂದು ಬಾಲಕಿಯರ ಸರ್ಕಾರಿ ಪದವೀಪೂರ್ವ ಕಾಲೇಜಿನ ಉಪನ್ಯಾಸಕ ವಾಸು ಅಭಿಪ್ರಾಯಿಸಿದರು.
  ಬುಧವಾರ ಪಟ್ಟಣದ ಬಾಲಕಿಯರ ಸರ್ಕಾರಿ ಪದವೀಪೂರ್ವ ಕಾಲೇಜಿನ ಆವರಣದಲ್ಲಿ ಅಖಿಲಭಾರತ ವಿಧ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ಕಾರ್ಗಿಲ್ ವಿಜಯ ಒಂದು ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಭಾರತದ ಯೋಧರ ಅವಿರತ ಪರಿಶ್ರಮದಿಂದಲೇ ನಾವು ನಮ್ಮ ದೇಶದಲ್ಲಿ ನಿಶ್ಚಿಂತೆಯಿಂದ ಜೀವಿಸುತ್ತಿದ್ದೇವೆ. ನಮ್ಮ ನೆರೆಯ ಶತ್ರು ರಾಷ್ಟ್ರ ಪಾಕಿಸ್ಥಾನದ ಕುತತ್ರದಿಂದಾಗಿ ಕಾರ್ಗಿಲ್ ಯುದ್ದ ನೆಡಸಬೇಕಾಯಿತು. ಈ ಯುದ್ದದಲ್ಲಿ 547ಯೋಧರು ತಮ್ಮನ್ನು ದೇಶಕ್ಕೆ ಸಮರ್ಪಿಸಿಕೊಂಡು ವೀರ ಸ್ವರ್ಗವನ್ನು ಸೇರಿದ್ದಾರೆ, ಅಂತಹ ಅಪ್ರತಿಮ ವೀರಯೋಧರನ್ನು ವರ್ಷಕ್ಕೊಮ್ಮಯಾದರು ಸ್ಮರಣೆ ಮಾಡಿಕೊಳ್ಳುವ ಅವಕಾಶವನ್ನು ಎಬಿವಿಪಿ ಕಲ್ಪಿಸಿಕೊಟ್ಟಿದೆ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
  ಎಬಿವಿಪಿ ನಿಕಟಪೂರ್ವ ಜಿಲ್ಲಾ ಸಂಚಾಲಕ ಜಿ.ಎಸ್.ಚಂದ್ರಶೇಖರ್ ಮಾತನಾಡಿ ಪಾಕಿಸ್ಥಾನವನ್ನು ನಮ್ಮ ಸೈನಿಕರು 4ಬಾರಿ ಸೋಲಿನ ರುಚಿಯನ್ನು ತೋರಿಸಿಕೊಟ್ಟಿದ್ದರು ಪದೇ ಪದೇ ಕಾಲು ಕೆರೆದುಕೊಂಡು ಗಡಿ ಬಾಗಗಳಲ್ಲಿ ನಮ್ಮ ದೇಶದ ಸಾರ್ವಜನಿಕರ ಮೇಲೆ ಅಪ್ರಚೋಧಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಭಯೋತ್ಪಾಧಕರನ್ನು ನಮ್ಮದೇಶಕ್ಕೆ ನುಸುಳಲು ಸಹಕಾರ ನೀಡುತ್ತಿರುವುದಲ್ಲದೆ ಅವರಿಗೆ ಬೇಕಾದ ಮಾರಕಾಸ್ತ್ರಗಳನ್ನು ಮತ್ತು ಹಣವನ್ನು ಸಹ ಪೋರೈಸುತ್ತಿದೆ. ಚೀನಾ ದೇಶದ ಜೊತೆ ಓಳೊಪ್ಪಂದ ಮಾಡಿಕೊಂಡ ಪಾಕಿಸ್ಥಾನ ಬಾರತದ ಮೇಲೆ ಚೀನಾವನ್ನು ದಾಳಿ ಮಾಡಲು ಪ್ರಚೋದಿಸುತ್ತಿದೆ. ನಮ್ಮ ಸೈನಿಕರು ಗಂಡೆದೆಯ ಗಂಡು ಗಲಿಗಳಾಗಿರುವುದರಿಂದ ಯಾವುದೇ ಯುದ್ದಕ್ಕೆ ಸನ್ನದ್ದರಾಗಿ ಶತ್ರು ರಕ್ತ ತರ್ಪಣಕ್ಕಾಗಿ ಕಾಯುತ್ತಿದ್ದಾರೆ ಎಂದರು.
    ನಮ್ಮ ಸೈನಿಕರು ಸಿಯಾಚಿನ್‍ನಂತಹ ದುರ್ಗಮ ಕಠಿಣ ಪ್ರದೇಶಗಳಲ್ಲಿಯೂ ಹಗಲಿರುಳು ರಕ್ಷಣಾ ಕಾರ್ಯವನ್ನು ಮಾಡುತ್ತಿದ್ದಾರೆ. ಹಿಮಚ್ಚಾದಿತ -25ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದಲ್ಲಿಯೂ ಕಾರ್ಯ ನಿರ್ವಹಿಸಲು ಅಮಿತೋತ್ಸಾಹದಿಂದ ಮುಂದೆ ಬರುತ್ತಾರೆ. ದೇಶ ರಕ್ಷಣೆಗಾಗಿ ಪ್ರಾಣತೆತ್ತ ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು.  ಕಾರ್ಗಿಲ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂಸಿಂಗ್‍ಬಾತ್ರಾ ರವರ ಸಾಹಸವನ್ನು ವಿವಿರಿಸಿ ಅವರ ಸ್ಮರಣೆಯನ್ನು ಮಾಡಿದರು.
     ಬಾಲಕಿಯರ ಪದವೀಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣಪ್ಪ ತಮ್ಮ ಅಧ್ಯಕ್ಷೀಯ ಬಾಷಣವನ್ನು ಮಾಡಿ ಯೋಧರಾಗಿ ಸೇವೆ ಸಲ್ಲಿಸುವುದು ಭಾರತಮಾತೆಯ ಸೇವೆಯಾಗಿದೆ. ಉತ್ತರ ಭಾರತದಲ್ಲಿ ಪ್ರತಿ ಮನೆಗೆ ಒಬ್ಬರಂತೆ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಿಕೊಡುತ್ತಾರೆ. ಈ ಭಾಗದಲ್ಲಿ ಗ್ರಾಮಕ್ಕೆ ಒಬ್ಬರಂತೆ ಹುಡುಕಲು ಕಷ್ಟಕರವಾಗುತ್ತದೆ. ಕಾರಣ ಗಡಿಯಲ್ಲಿ ವಾಸಿಸುವ ಕುಟುಂಗಳಿಗೆ ದೇಶದ ರಕ್ಷಣೆಯ ಮಹತ್ವ ತಿಳಿದಿರುತ್ತದೆ ಏಕೆಂದರೆ ಪ್ರತಿ ನಿತ್ಯ ಶತ್ರುಗಳ ಅಪ್ರಚೋಧಿತ ದಾಳಿಗಳಿಂದ ಭಯಭೀತರಾಗಿದ್ದಾರೆ ಮತ್ತು ಶತ್ರುಗಳ ಅಟ್ಟಹಾಸವನ್ನು ಮುರಿಯಲು ಮನೆಗೊಬ್ಬರಂತೆ ತಮ್ಮ ಮಕ್ಕಳನ್ನು ಸ್ವಯಂಪ್ರೇರಿತರಾಗಿ ಸೈನ್ಯಕ್ಕೆ ಕಳುಹಿಸುತ್ತಾರೆ ಎಂದರು.
ಸನ್ಮಾನ: ಕಾರ್ಗಿಲ್ ಯುದ್ದದಲ್ಲಿ ಬಾಗವಹಿಸಿದ್ದ ನಿವೃತ್ತ ಯೋಧ ಶಿವಾರೆಡ್ಡಿ ಮತ್ತು ಸಿ.ಆರ್.ಪಿ.ಎಫ್.ನ ನಿವೃತ್ತ ಯೋಧ ಶ್ರೀನಿವಾಸಮೂರ್ತಿ ರವರನ್ನು ಸನ್ಮಾನಿಸಿದರು.
    ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಾಂ್ರಶುಪಾಲ ನರಸಿಂಹಮೂರ್ತಿ, ಬಾಲಕಿಯರ ಪದವೀಪೂರ್ವ ಕಾಲೇಜಿನ ಉಪನ್ಯಾಸಕರಾದ ಮಂಜುನಾಥರೆಡ್ಡಿ, ಶ್ರೀನಿವಾಸರೆಡ್ಡಿ, ಮಂಜುಳಾ, ಕಮಲಾಹೆಗ್ಗಡೆ, ಮಾದವಿ, ನಾರಾಯಣಸ್ವಾಮಿ, ಅಜ್ಗರ್‍ಪಾಷಾ, ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾಳ್ವೇಶ್‍ಕಟಾಂಬ್ಲಿ, ಜಿಲ್ಲಾ ಸಹ ಸಂಚಾಲಕ ಪ್ರಕಾಶ್, ಜಿಲ್ಲಾ ವಿಧ್ಯಾರ್ಥಿನಿ ಪ್ರಮುಖ್ ಚೈತ್ರಾ, ನಂದಿನಿ ತಾ.ವಿ.ಪ್ರ. ಕಲ್ಯಾಣ್, ಅರ್ಜುನ್ ತಾ.ಸ.ಸಂಚಾಲಕರು, ಶಿವಮ್ಮ, ಚಂದು, ಸೌಮ್ಯ ಇತರರು ಭಾಗವಹಿಸಿದ್ದರು.  

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...