ಕೋಲಾರ: ಜಯ ಕರ್ನಾಟಕ ಸಂಘಟನೆ- ಗೌರವಾಧ್ಯಕ್ಷರಾಗಿ ಕೆ.ನಾಗರಾಜ್ ಆಯ್ಕೆ

Source: shabbir | By Arshad Koppa | Published on 5th August 2017, 2:11 PM | State News | Guest Editorial |


ಕೋಲಾರ,ಆ.4: ಜಯ ಕರ್ನಾಟಕ ಸಂಘಟನೆಯ ಶ್ರೀನಿವಾಸಪುರ ತಾಲೂಕಿನ ನೂತನ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ರವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.
    ಶ್ರೀನಿವಾಸಪುರ ತಾಲೂಕು ಗೌರವಾಧ್ಯಕ್ಷರಾಗಿ ಕೆ.ನಾಗರಾಜ್, ಅಧ್ಯಕ್ಷರಾಗಿ ಎಸ್.ಶಿವರಾಜ್, ಕಾರ್ಯಾಧ್ಯಕ್ಷರಾಗಿ ನದೀಂಪಾಟೀಲ್, ಉಪಾಧ್ಯಕ್ಷರುಗಳಾಗಿ ರಾಮಕೃಷ್ಣಪ್ಪ, ರಾಜಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ನರೇಶ್, ಜಂಟಿ ಕಾರ್ಯದರ್ಶಿಯಾಗಿ ಸರೀನ್, ಸಂಘಟನಾ ಕಾರ್ಯದರ್ಶಿಗಳಾಗಿ ವೆಂಕಟರಮಣ, ರಾಮಾಂಜಿ, ರಮೇಶ್, ಸಂಚಾಲಕರಾಗಿ ರಾಘವೇಂದ್ರ, ಎನ್.ಆರ್.ಉಮೇಶ್‍ಕುಮಾರ್, ಶಿವಕುಮಾರ್ ರವರನು ಆಯ್ಕೆ ಮಾಡಲಾಯಿತು.
    ಯುವ ಘಟಕದ ಗೌರವಾಧ್ಯಕ್ಷರಾಗಿ ನರೇಶ್‍ಬಾಬು, ಅಧ್ಯಕ್ಷರಾಗಿ ನರೇಂದ್ರಬಾಬು, ಕಾರ್ಯಾಧ್ಯಕ್ಷರಾಗಿ ಸುಮನ್‍ರೆಡ್ಡಿ, ಉಪಾಧ್ಯಕ್ಷರುಗಳಾಗಿ ಇಮ್ರಾನ್ ಮತ್ತು ನಾಗೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮುರಳಿ, ಜಂಟಿ ಕಾರ್ಯದರ್ಶಿಯಾಗಿ ವೆಂಕಟೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಮೋಹನ್‍ಬಾಬು, ಚೌಡರೆಡ್ಡಿ, ವಿಜೇತ್, ಸಂಚಾಲಕರಾಗಿ ಜನಾರ್ಧನ್, ಹರೀಶ್ ಮತ್ತು ಚಲಪತಿ ರವರನ್ನು ಆಯ್ಕೆ ಮಾಡಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ಗಡಿನಾಡು ಪ್ರದೇಶವಾದ ಕೊಲಾರ ಜಿಲ್ಲೆಯಲ್ಲಿ ಪ್ರತಿ ತಾಲೂಕಿನ ಹಾಗೂ ಹೋಬಳಿ ಮಟ್ಟದಿಂದ ಸಂಘಟನೆಯನ್ನು ಕಟ್ಟಿ ಬೆಳೆಸುವ ಉದ್ದೇಶ ಹೊಂದಿದ್ದು, ನಾಡು, ನುಡಿ, ಜನ, ಬಾಷೆ, ಸಂಸ್ಕøತಿಯ ಜೊತೆಗೆ ರೈತ ಮತ್ತು ಕಾರ್ಮಿಕರ ಹಿತಕ್ಕಾಗಿ, ಮಹಿಳೆಯರ ಹಾಗೂ ಶೋಷಿತರ ಪರವಾಗಿ ಹಾಗೂ ಸ್ಥಳೀಯ ಮೂಲಭೂತ ಸೌಕರ್ಯಗಳಿಗಾಗಿ ನಿರಂತರವಾಗಿ ಹೋರಾಡುವುದೇ ಜಯ ಕರ್ನಾಟಕ ಸಂಘಟನೆಯ ಉದ್ದೇಶವೆಂದು ತಿಳಿಸಿದರು.
    ಈ ಸಂದರ್ಭದಲ್ಲಿ ತಾಲೂಕು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಶಿವರಾಜ್, ಜಯ ಕರ್ನಾಟಕ ಸಂಘಟನೆಯ ತತ್ಪ ಸಿದ್ಧಾಂತವನ್ನು ಮೆಚ್ಚಿ ತಾಲೂಕಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನೆಲ, ಜಲ, ಭಾಷೆಯ ಏಳಿಗೆಗೆ ಶ್ರಮಿಸುತ್ತಾ ತಾಲೂಕುನ ಪ್ರತಿ ಗ್ರಾಮದಲ್ಲೂ ಸಂಘಟನೆಯನ್ನು ಕಟ್ಟಿ ಬೆಳೆಸುವುದಾಗಿ ತಿಳಿಸಿದರು.
    ಸಭೆಯಲ್ಲಿ ಶ್ರೀನಿವಾಸಪುರ ತಾಲೂಕು ನಿಕಟಪೂರ್ವ ಅಧ್ಯಕ್ಷ ಬೈರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಸಿ.ಆರ್.ಪಿ.ವೆಂಕಟೇಶ್, ಕಾರ್ಯಾಧ್ಯಕ್ಷ ಮಂಜುನಾಥ್, ಕೋಲಾರ ತಾಲೂಕು ಅಧ್ಯಕ್ಷ ರಾಜೂಗೌಡ, ನಾರಾಯಣಸ್ವಾಮಿ, ಸೂರಜ್, ಬಾನ್‍ಸಿಂಗ್ ಇತರರಿದ್ದು, ರಾಜ್ಯ ಯುವ ಘಟಕದ ಸಂಘಟನಾ ಕಾರ್ಯದರ್ಶಿ ಅಂಜನ್‍ಕುಮಾರ್ ನಿರೂಪಿಸಿದರು.
 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...