ಶ್ರೀನಿವಾಸಪುರ: ಕೆಪಿಟಿಸಿಎಲ್ ನೌಕರರ ಪ್ರತಿಭಟನೆ

Source: Shabbir Ahmed | By S O News | Published on 3rd August 2021, 5:37 PM | State News |

ಶ್ರೀನಿವಾಸಪುರ: ಪಟ್ಟಣದ ಕೆಪಿಟಿಸಿಎಲ್ ಕಚೇರಿ ಎದುರು ಸೋಮವಾರ ಕೆಪಿಟಿಸಿಎಲ್ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಸರಬರಾಜು ಖಾಸಗೀಕರನ ಮಾಡಬಾರದು ಎಂದು ಪ್ರತಿಭಟನ ನಿರತ ನೌಕರರು ಆಗ್ರಹಪಡಿಸಿದರು.

ಕೇಂದ್ರ ಸರ್ಕಾರದ ವಿದ್ಯುತ್ ನೀತಿ ಖಂಡಿಸಿ ಆ 10 ರವರೆಗೆ ಎಲ್ಲ ನೌಕರರೂ ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ, ಸಹಾಯಕ ಎಂಜಿನಿಯರ್‍ಗಳಾದ ನಂಜುಂಡೇಶ್ವರ, ದೇವರಾಜ್, ವೇಣುಗೋಪಾಲ್, ಚಂದ್ರು ವಿದ್ಯುತ್ ಗುತ್ತಿಗೇದಾರರ ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ ಇದ್ದರು.

Read These Next

ತಂಬಾಕು ದುಷ್ಪರಿಣಾಮ ಮತ್ತು ಕೋಟ್ಪಾ ಕಾಯ್ದೆ ಕುರಿತು ತರಬೇತಿ ಕಾರ್ಯಕ್ರಮ. ಮಕ್ಕಳನ್ನು ಸರಿದಾರಿಗೆ ತರುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ : ಎಸ್‍ಪಿ

ಶಿವಮೊಗ್ಗ : ಪ್ರಸ್ತುತ ದಿನಮಾನಗಳಲ್ಲಿ ಹದಿ ವಯಸ್ಸಿನ ಮಕ್ಕಳೇ ತಂಬಾಕು ಉತ್ಪನ್ನಗಳ ಚಟಕ್ಕೆ ಒಳಗಾಗುತ್ತಿದ್ದು, ಮಕ್ಕಳನ್ನು ...