ಕೋಲಾರ: ಸೆ: 07, 08 ರಂದು ಶ್ರೀನಿವಾಸಪುರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ

Source: shabbir | By Arshad Koppa | Published on 7th September 2017, 8:18 AM | Sports News |

ಕೋಲಾರ, ಸೆಪ್ಟಂಬರ್ 06 :2017-18 ನೇ ಸಾಲಿನ ಶ್ರೀನಿವಾಸಪುರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು  ದಿನಾಂಕ: 07-09-2017 ಹಾಗೂ 08-09-2017 ರಂದು ಶ್ರೀನಿವಾಸಪುರ ತಾಲ್ಲೂಕಿನ ಅಮಾನಿಕರೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳು ಅಥವಾ ತಂಡಗಳು 
ದಿನಾಂಕ:07-09-2017 ರಂದು ಬೆಳಗ್ಗೆ 09 ಗಂಟೆಗೆ ಅಮಾನಿಕೆರೆ ಕ್ರೀಡಾಂಗಣದಲ್ಲಿ ನೋಂದಣ  ಮಾಡಿಕೊಳ್ಳಬಹುದಾಗಿದೆ. 
ಪುರುಷರು ಮತ್ತು ಮಹಿಳೆಯರಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಕಬ್ಬಡ್ಡಿ, ಖೋ-ಖೋ, ಫುಟ್‍ಬಾಲ್, ಬಾಲ್ ಬ್ಯಾಡ್ಮಿಂಟನ್, ನೆಟ್‍ಬಾಲ್, ಥ್ರೋಬಾಲ್ ಪಂದ್ಯಗಳನ್ನು ಅಥ್ಲೆಟಿಕ್ಸ್‍ನಲ್ಲಿ 100, 200, 400, 800,1500 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, 4*100 ಮೀಟರ್ ರಿಲೇ ಹಾಗೂ 4*400 ಮೀಟರ್ ರಿಲೇಯನ್ನು ಆಯೋಜಿಸಲಾಗಿದೆ. ಅಷ್ಟೇ ಅಲ್ಲದೆ ಪುರುಷರಿಗೆ 5000 ಮೀಟರ್ ಹಾಗೂ ಮಹಿಳೆಯರಿಗೆ 3000 ಮೀಟರ್ ಓಟವನ್ನು ಹಾಗೂ ಪುರುಷರಿಗೆ 110 ಮೀಟರ್, ಮಹಿಳೆಯರಿಗೆ 100 ಮೀಟರ್ ಹರ್ಡಲ್ಸ್ ಪಂದ್ಯಗಳು ನಡೆಯಲಿದೆ. 
    ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಯೋಮಿತಿ ಇರುವುದಿಲ್ಲ. ಕ್ರೀಡಾಪಟುಗಳು ತಪ್ಪದೆ ಆಧಾರ್ ಕಾರ್ಡ್ ಹಾಜರುಪಡಿಸಬೇಕು. ಯಾವುದೇ ಒಬ್ಬ ಕ್ರೀಡಾಪುಟು ಅಥವಾ ತಂಡ ಯಾವುದೇ ಜಿಲ್ಲೆಯಲ್ಲಿ ಒಂದು ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಂತರ ಬೇರೆ ಯಾವುದೇ ತಾಲ್ಲೂಕು ಅಥವಾ ಜಿಲ್ಲೆಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಜೊತೆಗೆ ರಕ್ಷಣಾಪಡೆ, ಅರೆ ರಕ್ಷಣಾಪಡೆದ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಾಗಿರುವುದಿಲ್ಲ. 
    ಹಾಕಿ, ಬಾಸ್ಕಟ್‍ಬಾಲ್, ಟೇಬಲ್ ಟೆನ್ನಿಸ್ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗೆ ಆಯೋಜಿಸಲಾಗಿದ್ದು ಇದನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಲಾಗುವುದು. ಈಜು, ಹ್ಯಾಂಡ್‍ಬಾಲ್, ಜಿಮ್ನಾಸ್ಟಿಕ್, ಟೆನ್ನಿಸ್ ಹಾಗೂ ಷಟಲ್ ಬ್ಯಾಡ್ಮಿಂಟನ್ ಈ ಕ್ರೀಡೆಗಳಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಿ ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಕಳುಹಿಸಿಕೊಡಲಾಗುವುದು. ಈ ಕುರಿತು ಹೆಚ್ಚಿನ ವಿವರಗಳನ್ನು ಮುನಿರೆಡ್ಡಿ, ದೈಹಿಕ ಶಿಕ್ಷಣ ಪರಿವೀಕ್ಷಕರು ಇವರನ್ನು ಮೊಬೈಲ್ ಸಂಖ್ಯೆ 9141514683 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Read These Next

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...