ಸಾವಿರಾರು ಭಕ್ತರ ಜಯಘೋಷದೊಂದಿಗೆ ನಡೆದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ರಥೋತ್ಸವ

Source: so news | By MV Bhatkal | Published on 29th January 2023, 12:19 AM | Coastal News |

ಭಟ್ಕಳ: ಶಿರಾಲಿಯ ವೆಂಕಟಾಪುರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ರಥೋತ್ಸವ ಶನಿವಾರ ರಥ ಸಪ್ತಮಿಯಂದು ಸಂಜೆ ಸಾವಿರಾರು ಭಕ್ತರ ಜಯಘೋಷದೊಂದಿಗೆ ದೇವಸ್ಥಾನದ ಸುತ್ತಲೂ ಎಳೆಯುವ ಮೂಲಕ ಸಂಪನ್ನಗೊಡಿತು. ಪ್ರತಿ ವರ್ಷದಂತಗೆ ಕಳೆದ ಐದು ದಿನಗಳಿಂದ ರಥೋತ್ಸವದ ಅಂಗವಾಗಿ ಧಾರ್ಮಿಕ ವಿಧಿ ವಿದಾನಗಳನ್ನು ವೆಂಕಟಾಪುರದ ಅರ್ಚಕ ಕುಟುಂಬದವರಾದ ಆಚಾರ್ಯ ಕುಟುಂಬಿಕರು ನೆರವೇರಿಸಿಕೊಂಡು ಬಂದಿದ್ದು ರಥ ಸಪ್ತಮಿಯಂದು ಮಹಾ ರಥೋತ್ಸವ ಜರುಗಿತು. 
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶಾಖಾ ಮಠಗಳಲ್ಲಿ ಒಂದಾಗಿರುವ ಇದು ಶಿರಾಲಿಯ ಜಿಎಸ್‌ಬಿ ಸಮಾಜ ಬಾಂಧವರು ಆರಾಧಿಸಿಕೊಂಡು ಬಂದಿರುವ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ.  ಶ್ರೀ ವೆಂಕಾಟಾಪುರ ಲಕ್ಷಿö್ಮÃ ವೆಂಕಟೇಶ ದೇವರನ್ನು ತಿರುಪತಿ ವೇಂಕಟೇಶ್ವರನ ಪ್ರತಿಸಾಕ್ಷಿ ಎಂದು ನಂಬಿದ್ದ ಜನರು ಈ ಹಿಂದೆ ತಿರುಪತಿಗೆ ಹೊತ್ತ ಹರಿಕೆಯನ್ನು ಕಾರಣಾಂತರದಿAದ ತೀರಿಸಲು ಸಾಧ್ಯವಾಗದೇ ಇದ್ದಾಗ ಇಲ್ಲಿಗೆ ಬಂದು ತಮ್ಮ ಕಾಣಿಕೆಯನ್ನು ಸಲ್ಲಿಸುತ್ತಿದ್ದು ಅದು ಪ್ರತ್ಯಕ್ಷವಾಗಿ ತಿರುಪಿಗೆ ತಲುಪಿಸಿದಂತೆ ಎಂದು ಭಾವುಕ ಭಕ್ತರು ಭಾವಿಸುತ್ತಿದ್ದರು. ರಥೋತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಅಶೋಕ ಪೈ ಸೇರಿದಂತೆ ಪದಾಧಿಕಾರಿಗಳು, ಭಕ್ತರು ಬಹು ಸಂಖ್ಯೆಯಲ್ಲಿ ನೆರೆದಿದ್ದರು.

Read These Next