‘ಪೋಸ್ಟ್ ಕಾರ್ಡ್ ನ್ಯೂಸ್’ ಪ್ರಕಟಿಸಿದ ಪ್ರಮುಖ ಸುಳ್ಳು ಸುದ್ದಿಗಳಿವು!

Source: sonews | By Staff Correspondent | Published on 30th March 2018, 8:27 PM | State News | National News | Special Report |

ಕೃಪೆ: www.thestate.news

ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದ ಆರೋಪದ ಮೇಲೆ ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’ ಜಾಲತಾಣದ ಸ್ಥಾಪಕ ಮಹೇಶ್‌ ವಿಕ್ರಮ್ ಹೆಗಡೆ ಅವರನ್ನು ಬೆಂಗಳೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಹೇಶ್‌ ಅವರು ಮಾ.೧೮ರಂದು ಜೈನ ಮುನಿಯೊಬ್ಬರ ಮೇಲೆ ಮುಸ್ಲಿಂ ಯುವಕರ ಗುಂಪು ಮಾರಣಾಂತಿಕ ಹಲ್ಲೆ ಮಾಡಿದೆ ಎಂದು ಹೇಳಿ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಸುದ್ದಿ ಪ್ರಕಟಿಸಿದ್ದರು. ಆದರೆ, ಆ ಜೈನ ಮುನಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಈ ಸುದ್ದಿಗೆ ಬೇರೆಯದೇ ಬಣ್ಣ ಬಳಿದ ‘ಪೋಸ್ಟ್‌ ಕಾರ್ಡ್‌’ ಧರ್ಮ-ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವಂತೆ ಸುದ್ದಿ ಮಾಡಿತ್ತು.

ಕಳೆದೊಂದು ವರ್ಷದಿಂದ ಸಕ್ರಿಯವಾಗಿರುವ ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’ ಬಲಪಂಥೀಯ ವಿಚಾರಧಾರೆ ಹೊಂದಿದ್ದು, ಕಾಂಗ್ರೆಸ್‌ ಪಕ್ಷ, ಮುಸ್ಲಿಂ ಸಮುದಾಯದ ವಿರುದ್ಧವಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸುವ ಕಾರ್ಯದಲ್ಲಿ ನಿರತವಾಗಿತ್ತು. ಹಿಂದೂ ವಾದ, ದೇಶಭಕ್ತಿ ವಿಚಾರವನ್ನು ವಿಜೃಂಭಿಸಿ ಬರೆಯುತ್ತಿತ್ತು. ಈ ಮೂಲಕ ಬಹುಸಂಸ್ಕೃತಿ, ಬಹುಧರ್ಮಗಳ ನಾಡಲ್ಲಿ ಕೋಮು ಭಾವನೆಯನ್ನು ಕೆರಳಿಸುವ ಬರೆಹಕ್ಕೆ ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’ ವೇದಿಕೆಯಾಗಿತ್ತು.

ಈ ಹಿಂದೆ ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’ ಪ್ರಕಟಿಸಿದ ಪ್ರಮುಖ ಸುಳ್ಳು ಸುದ್ದಿಗಳ ವಿವರ ಹೀಗಿದೆ.

  1. ೨೦೧೭ರ ಏ.೧೮ರಂದು ಪೋಸ್ಟ್‌ ಕಾರ್ಡ್‌ ನ್ಯೂಸ್‌, “ಜಿಹಾದ್‌ ದಿದಿ, ಇಸ್ಲಾಂಮಿಕ್‌ ಮತಾಂಧರಿಗೆ ಪಶ್ಚಿಮ ಬಂಗಾಳ ಸುರಕ್ಷಿತ ಸ್ವರ್ಗ,” ಎಂಬ ಸುದ್ದಿ ಪ್ರಕಟಿಸಿತ್ತು. ಏ.೧೧ರಂದು ಹನುಮ ಜಯಂತಿ ವೇಳೆ ಇಬ್ಬರು ಮುಸ್ಲಿಂ ಐಪಿಎಸ್‌ ಅಧಿಕಾರಿಗಳು ಹನುಮ ಭಕ್ತರನ್ನು ಥಳಿಸಿದ್ದಾರೆ ಎಂದು ಹೇಳಿ, ಪೊಲೀಸರು ಕೆಲವರಿಗೆ ಹೊಡೆಯುತ್ತಿರುವ ದೃಶ್ಯವನ್ನು ಪ್ರಕಟಿಸಿತ್ತು. ಆದರೆ, ವಿಡಿಯೋ ೨೦೧೪ರಲ್ಲಿಯೇ ಯೂಟ್ಯೂಬ್‌ಗೆ ಅಪ್‌ಲೋಡ್‌ ಆಗಿದೆ. ಇದೇ ವಿಡಿಯೋವನ್ನು ಇಟ್ಟುಕೊಂಡು, ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’ ಕೋಮು ಭಾವನೆ ಕೆರಳಿಸುವಂತಹ ಸುದ್ದಿ ಮಾಡಿತ್ತು.

  2. ೨೦೧೭ರ ಮೇ ೧೭ರಂದು ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುಳ್ಳು ಸುದ್ದಿ ಪ್ರಕಟಿಸಿತ್ತು. “ಮಮತಾ ಬ್ಯಾನರ್ಜಿ ಅವರು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಯ ವ್ಯವಸ್ಥೆ ಮಾಡಿದ್ದಾರೆ,” ಎಂದು ಸುದ್ದಿ ಮಾಡಿತ್ತು, ಆದರೆ, ಈ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರದಿಂದ ಆ ವರ್ಷದಲ್ಲಿ ಯಾವುದೇ ಅಧಿಸೂಚನೆ ಆಗಲೀ, ಆದೇಶವಾಗಲೀ ಘೋಷಣೆಯಾಗಿರಲಿಲ್ಲ. ಇದು ಮೂರು ವರ್ಷದ ಹಿಂದೆ ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಮಮತಾ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಾಗಿತ್ತು.

  3. ೨೦೧೭ರ ಜ.೨೦ರಂದು ಭಾರತೀಯ ಮಾಧ್ಯಮಗಳನ್ನು ಅವಹೇಳನ ಮಾಡಿ ವರದಿ ಪ್ರಕಟಿಸಿತ್ತು. “ವರ್ಲ್ಡ್‌ ಎಕಾನಮಿ ಫೋರಂ ಪ್ರಕಟಿಸಿದ ವರದಿಯಲ್ಲಿ ಹಣೆಪಟ್ಟಿ ಕಟ್ಟಿಕೊಂಡಿರುವ ಭಾರತದ ಮಾಧ್ಯಮ ಸಂಸ್ಥೆಗಳು ಜಗತ್ತಿನಲ್ಲಿ ಅಪನಂಬುಗೆಯ ಎರಡನೇ ಸಂಸ್ಥೆಯಾಗಿದೆ,” ಎಂದು ವರದಿ ಮಾಡಿತ್ತು. ಅವುಗಳಲ್ಲಿ ಮುಖ್ಯವಾಗಿ ಎನ್‌ಡಿಟಿವಿ, ಬೂಮ್‌ ಲೈವ್‌ ಸುದ್ದಿಸಂಸ್ಥೆಗಳನ್ನು ಉಲ್ಲೇಖಿಸಲಾಗಿತ್ತು. ಭಾರತದ ಜೊತೆಗೆ ಚೀನಾ ಮತ್ತು ಇಂಡೋನೇಷ್ಯಾ ಇರುವುದಾಗಿಯೂ ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’ ಹೇಳಿತ್ತು. ಆದರೆ, ೨೦೧೬-೨೦೧೭ರಲ್ಲಿ ಭಾರತದ ಮಾಧ್ಯಮಗಳ ನಂಬಿಕೆಯ ಪ್ರಮಾಣ ಮೂರು ಅಂಕಿ ಹೆಚ್ಚಿಸಿಕೊಂಡು, ಶೇ.೬೬ ಅಂಕ ಪಡೆದಿತ್ತು.

4. ೨೦೧೭ರ ಮಾ.೨೦ರಂದು ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’ ಮತ್ತೊಂದು ಸುಳ್ಳು ಸುದ್ದಿಯನ್ನು ಪ್ರಕಟಿಸಿತು. “೨೦೧೭ರ ಜಗತ್ತಿನ ಅತಿ ಹೆಚ್ಚು ಭ್ರಷ್ಟ ೧೦ ಪಕ್ಷಗಳ ಹೆಸರನ್ನು ಬಿಬಿಸಿ ನ್ಯೂಸ್‌ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ ಪಕ್ಷ ನಾಲ್ಕನೇ ಸ್ಥಾನದಲ್ಲಿದೆ,” ಎಂಬುದು ಆ ಸುದ್ದಿ. ಈ ಸುದ್ದಿ ಬಿಬಿಸಿಯ ನಕಲಿ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಆಗಿತ್ತು. ಅದನ್ನೇ ‘ಪೋಸ್ಟ್‌ ಕಾರ್ಡ್‌ ನ್ಯೂಸ್’ ದೊಡ್ಡದಾಗಿ ಸುದ್ದಿ ಮಾಡಿತ್ತು.

ಇದನ್ನೂ ಓದಿ : ಸುಳ್ಳು ಸುದ್ದಿ ಪ್ರಸಾರ ಆರೋಪ; ‘ಪೋಸ್ಟ್‌ಕಾರ್ಡ್‌’ ಸ್ಥಾಪಕ ವಿಕ್ರಮ್‌ ಬಂಧನ

5. ೨೦೧೭ರ ನ.೨೭ರಂದು ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’, ರಾಣಿ ಚೆನ್ನಮ್ಮ, ಒನಕೆ ಓಬವ್ವ ಕುರಿತಾಗಿ ಅಸಂಬದ್ಧ ಸುಳ್ಳು ಸುದ್ದಿಯನ್ನು ಪ್ರಕಟಿಸಿತ್ತು. ಈ ಸಂಬಂಧ ಸಂಸ್ಥಾಪಕರ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್‌’ ಚಿತ್ರ ಬಿಡುಗಡೆಗೆ ವಿರೋಧಿಸಿ, ಬಲಪಂಥೀಯವಾದಿಗಳು ದೇಶವ್ಯಾಪಿ ಗಲಭೆಯನ್ನೇ ಹಬ್ಬಿಸಿದರು. ಈ ಸಂದರ್ಭದಲ್ಲಿ ‘ಪೋಸ್ಟ್‌ ಕಾರ್ಡ್‌ ನ್ಯೂಸ್‌’, “ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಒನಕೆ ಓಬವ್ವ ಹೈದರಾಲಿಯ ಜೊತೆ ಮಂಚ ಹಂಚಿಕೊಂಡಿದ್ದಳು. ಕೋಪ ಬಂತಲ್ವಾ? ಹಾಗಾದ್ರೆ ಕನ್ನಡ ಚಿತ್ರರಂಗಕ್ಕೆ ಇಂಥ ಕತೆಗಳ ವಿರುದ್ದ ಕೋಪ ಬರ್ತಿಲ್ವಾ?” ಎಂದು ಪ್ರಚೋದನಾಕಾರಿ ಸುದ್ದಿ ಪ್ರಕಟ ಮಾಡಿತ್ತು.

6. “ದೆಹಲಿಯಲ್ಲಿ ತಾಂಡವವಾಡುತ್ತಿರುವ ವಾಯುಮಾಲಿನ್ಯಕ್ಕೆ ಸನಾತನ ಧರ್ಮದಲ್ಲಿ ಶಾಶ್ವತ ಪರಿಹಾರವಿದೆ; ವಾಯುಮಾಲಿನ್ಯ ಸಂಭವಿಸಿರುವ ಪ್ರದೇಶದಲ್ಲಿ ಅಲ್ಲಲ್ಲಿ ಅಗ್ನಿಹೋತ್ರ ಹೋಮ ನಡೆಸಿದರೆ ಅದರಲ್ಲಿ ಆಮ್ಲಜನಕ ಉತ್ಪತ್ತಿಯಾಗಿ, ವಾಯುಮಾಲಿನ್ಯವನ್ನು ನಿಯಂತ್ರಿಸುತ್ತದೆ,” ಎಂಬ ಅವೈಜ್ಞಾನಿಕ ವಾದವನ್ನು ಮುಂದು ಮಾಡಿತ್ತು. ಈ ಸುದ್ದಿಗೆ ಫೇಸ್‌ಬುಕ್‌ ಬಳಕೆದಾರರು, “ಇವರೆಲ್ಲ ಒಂದೇ ಗೋತ್ರಕ್ಕೆ ಸೇರಿದವರು,” ಎಂದು ಚಾಟಿ ಬೀಸಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...