ಹೊಸ ವರ್ಷದ ಆಚರಣೆಗಾಗಿ ವಿಶೇಷ ಪಾರ್ಟಿ ನಿಷೇಧ : ಜಿಲ್ಲಾಧಿಕಾರಿ ನಿತೇಶ ಪಾಟೀಲ

Source: SO News | By Laxmi Tanaya | Published on 26th December 2020, 8:36 PM | State News | Don't Miss |

ಧಾರವಾಡ : ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜಿಲ್ಲೆಯ ಬಾರ್, ರೆಸ್ಟೋರೆಂಟ್, ಕ್ಲಬ್, ಜಿಮಾಖಾನಾ, ಹೋಟೆಲ್ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಸೇವಾ ಹಾಗೂ ಮನೋರಂಜನಾ ಕೇಂದ್ರಗಳು ಹೊಸ ವರ್ಷಾಚರಣೆ ಅಂಗವಾಗಿ ವಿಶೇಷ ಪಾರ್ಟಿ, ರಿಯಾಯತಿ ಪ್ಯಾಕೇಜ್, ಡಿ.ಜೆ ಮ್ಯುಜಿಕ್, ಡ್ಯಾನ್ಸ್ ಸೇರಿದಂತೆ ಎಲ್ಲ ತರಹದ ನಿಯೋಜಿತ ಕಾರ್ಯಕ್ರಮಗಳ ಆಯೋಜನೆಯನ್ನು ಡಿಸೆಂಬರ್ 30, 2020 ರಿಂದ ಜನವರಿ 2, 2021 ರವರೆಗೆ ನಿರ್ಭಂಧಿಸಲಾಗಿದೆ. ಮಾರ್ಗಸೂಚಿ ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ, ಪ್ರಕರಣ ದಾಖಲಿಸಲಾಗುವುದು ಮತ್ತು ಅವರ ಲೈಸನ್ಸ್ ತಕ್ಷಣ ರದ್ಧುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

  ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೋಟೆಲ್, ರೆಸ್ಟೋರೆಂಟ್, ಬಾರ್ ಹಾಗೂ ಕ್ಲಬ್‍ಗಳು ಸೇರಿದಂತೆ ವಿವಿಧ ಮನರಂಜನೆ ಹಾಗೂ ವಾಣಿಜ್ಯ ಸೇವೆಯ ಸಂಸ್ಥೆಗಳ ಮಾಲೀಕರ ಹಾಗೂ ವ್ಯವಸ್ಥಾಪಕರ ಸಭೆ ಜರುಗಿಸಿ, ಮಾತನಾಡಿದರು.

  ಕೋವಿಡ್-19ರ ಕೊರೊನಾ ಹೊಸ ಸ್ವರೂಪದ ಹರಡುವಿಕೆ ಹಾಗೂ ಕೊರೊನಾ ನಿಯಂತ್ರಣಕ್ಕಾಗಿ ಹೆಚ್ಚು ಜನಸಂದಣಿ ಸೇರಬಹುದಾದ ಆಚರಣೆ, ಹಬ್ಬ, ವಿವಿಧ ರೀತಿಯ ಕಾರ್ಯಕ್ರಮಗಳನ್ನು  ಆಯೋಜಿಸಲು ಆರೋಗ್ಯ ಸುರಕ್ಷತಾ ಕ್ರಮಗಳೊಂದಿಗೆ ಪಾಲಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ.

 ಪ್ರತಿಸಲದಂತೆ ಹೊಸ ವರ್ಷಾಚರಣೆಗೆ ಯಾವುದೇ ಹೋಟೆಲ್, ಕ್ಲಬ್, ಬಾರ್, ಪಬ್ ರೆಸ್ಟೋರೆಂಟ್‍ಗಳು ರಿಯಾಯಿತಿಯಲ್ಲಿ ಊಟ, ಮದ್ಯ ಸರಬರಾಜುಗಳಿಗೆ ವಿಶೇಷ ಪ್ಯಾಕೇಜ್ ನೀಡುವುದು, ಪ್ಯಾಮಿಲಿ ಪ್ಯಾಕೆಜ್, ಸಂಗೀತ ಕಾರ್ಯಕ್ರಮ, ಡಿಜೆ ನೃತ್ಯ, ಆಯೋಜನೆ ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
 ಆದರೆ ಅಬಕಾರಿ, ಪೊಲೀಸ್, ಮಹಾನಗರ ಪಾಲಿಕೆಯಿಂದ ಲೈಸ್‍ನ್ಸ್ ಪಡೆದಿರುವವರು ಅದರಲ್ಲಿ ಸೂಚಿಸಿರುವ ನಿಯಮಗಳಂತೆ ಮತ್ತು ಪ್ರತಿ ನಿತ್ಯದಂತೆ ತಮ್ಮ ವ್ಯವಹಾರ ನಿರ್ವಹಿಸಬಹುದು, ನಿಗದಿತ ಸಮಯಕ್ಕೆ ಬಂದ್ ಮಾಡಬೇಕು, 65 ವರ್ಷ ಮೆಲ್ಪಟ್ಟವರಿಗೆ, 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು. ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು. ಮತ್ತು ಪ್ರತಿಯೊಬ್ಬರು ತಮ್ಮ ಗ್ರಾಹಕರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಬಳಸಬೇಕು. ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಪ್ರತಿಯೊಬ್ಬರು ಮಾಸ್ಕಧರಿಸಿ ಒಳಬರುವಂತೆ ನಿಗಾವಹಿಸಬೇಕು. ಮಾಸ್ಕ್ ಧರಿಸವರಿಗೆ ಉಚಿತವಾಗಿ ತಾವೇ ಮಾಸ್ಕ್ ನೀಡಿ, ಧರಿಸುವಂತೆ ಎಚ್ಚರಿಕೆ ವಹಿಸಬೇಕೆಂದು ಅವರು ಹೋಟೆಲ್, ರೆಸ್ಟೋರೆಂಟ್ ಮಾಲಿಕರಿಗೆ ಸೂಚಿಸಿದರು.

 ಮಹಾನಗರ, ಪಟ್ಟಣಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ.  ಹೊಸ ವರ್ಷಾಚರಣೆ ಸಲುವಾಗಿ ಗುಂಪು ಗುಡುವುದು, ಬೈಕ್ ರ್ಯಾಲಿ, ಪಾರ್ಟಿ ಮಾಡುವುದು, ಪಟಾಕಿ(ಹಸಿರುಪಟಾಕಿ ಅಲ್ಲದ) ಸಿಡಿಸುವುದು ಮಂತಾದ ಯೋಜಿತ ಕಾರ್ಯಗಳನ್ನು ಜಿಲ್ಲೆಯಾದ್ಯಂತ ನಿರ್ಬಂಧಿಸಲಾಗಿದ್ದು, ಅಬಕಾರಿ, ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕುರಿತು ಡಿಸೆಂಬರ್ 30 ರಿಂದ ಜನೆವರಿ 2 ರವರೆಗೆ ನಿಗಾವಹಿಸಿ, ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದು ಅವರು ಹೇಳಿದರು.

 ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಹಾಗೂ ಸಕಾರದ ನಿರ್ದೇಶನವನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉಲ್ಲಂಘಿಸುವವರ ವಿರುದ್ದ ಮುಲಾಜಿಲ್ಲದೆ ಕ್ರಮ ತೆಗೆದು ಕೊಳ್ಳಲಾಗುವುದು. ಪ್ಯಾಮಿಲಿ, ಪ್ರೆಂಡ್ಸ್ ನೆಪದಲ್ಲಿ ಯಾವುದೇ ರೀತಿಯ ಡಿಜೆ ಮ್ಯುಜಿಕ್ ಕೇಳಿಬಂದರೆ ಮತ್ತು ಸಮಯ ಮೀರಿ ವ್ಯವಹಾರ ನಡೆಸಿದರೆ ಸ್ಥಳದಲ್ಲಿಯೇ ಪೊಲೀಸ್ ಅಧಿಕಾರಿಗಳಿಗೆ ಹೋಟೆಲ್ ಮ್ಯಾನೇಜರ್ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಸೀಜ್ ಮಾಡಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

  ಹುಬ್ಬಳ್ಳಿ ಹಾಗೂ ಧಾರವಾಡ ನಗರ ಮತ್ತು ಹೊರ ವಲಯದ ಕೆಲವು ರೆಸ್ಟೋರೆಂಟ್, ಬಾರ್, ಕ್ಲಬ್‍ಗಳು ಹೊಸ ವರ್ಷಾಚರಣೆ ಅಂಗವಾಗಿ ವಿಶೇಷ ಪ್ಯಾಕೇಜ್, ಕಾರ್ಯಕ್ರಮ ಆಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರಿಗೆ, ಸಾರ್ವಜನಿಕರಿಗೆ ಆಹ್ವಾನ ನೀಡುತ್ತಿರುವ ಮಾಹಿತಿ ಬಂದಿದೆ. ದಯವಿಟ್ಟು ಅಂತ ಯೋಜನೆ, ಯೋಚನೆ, ಕಾರ್ಯಕ್ರಮಗಳ ತಯ್ಯಾರಿ ಇದ್ದರೆ ಈಗಲೇ ಕೈಬಿಡಿ, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶ, ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲ ರೀತಿಯ ಸನದ್ದು(ಲೈಸನ್ಸ್)ದಾರರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸಲಾಗಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಸನದ್ದುದಾರರಿಗೆ  ಹೊಸ ವಷಾಚರಣೆ  ನೆಪದಲ್ಲಿ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆವಹಿಸಲು ಸೂಚಿಸಿದ್ದಾರೆ. 

ಡಿ. 30 ರಿಂದ ಜನೆವರಿ 2ರವರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಹಂತದ ಪೊಲೀಸ್ ಸಿಬ್ಬಂದಿ ಗ್ರಾಮೀಣ ಪ್ರದೇಶದ ನಗರ, ಪಟ್ಟಣ, ಹೆಚ್ಚು ಜನ ಸಂಖ್ಯೆ ಇರುವ ಗ್ರಾಮಗಳು ಸೇರಿದಂತೆ ಎಲ್ಲ ಕಡೆಗೆ ಸಂಚರಿಸಿ, ನಿಗಾವಹಿಸಲಿದ್ದಾರೆ. ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಕ್ರಮಕೈಗೊಳ್ಳಲಿದ್ದಾರೆ. ಸಾರ್ವಜನಿಕರು, ಸನದ್ದುದಾರರು ಸರಕಾರದ ಮಾರ್ಗಸೂಚಿಗಳ ಪಾಲನೆಗೆ ಸಹಕರಿಸಬೇಕೆಂದು ಹೇಳಿದರು.

  ಮಹಾನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ ಆಯುಕ್ತ ರಾಮರಾಜನ.ಕೆ ವೇದಿಕೆಯಲ್ಲಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸಭೆ ನಿರ್ವಹಿಸಿ, ಸರಕಾರದ ಮಾರ್ಗಸೂಚಿಗಳನ್ನು ಸಭೆಯಲ್ಲಿ ವಿವರಿಸಿದರು.

 ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ.ಬಿ, ಮಹಾನಗರದ ಅಪರಾಧ ಮತ್ತು ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತ ಆರ್.ಬಿ.ಬಸರಗಿ, ಅಬಕಾರಿ ಇಲಾಖೆ ಜಿಲ್ಲಾ ಆಯುಕ್ತ ಶಿವನಗೌಡ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ತಹಸಿಲ್ದಾರರಾದ ಡಾ. ಸಂತೋಷ ಬಿರಾದಾರ, ಶಶಿಧರ ಮಾಡ್ಯಾಳ ಸೇರಿಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆ, ಲೊಕೋಪಯೋಗಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪುರಸಭೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು, ಜಿಲ್ಲೆಯ ಹೋಟೆಲ್, ಬಾರ್, ರೇಸ್ಟೋರೆಂಟ್, ಕ್ಲಬ್, ಜಿಮಾಖಾನಾ ಸೇರಿಂತೆ ವಿವಿಧ ಸನದ್ದುಗಳ ಮಾಲೀಕರು, ವ್ಯವಸ್ಥಾಪಕರು ಸಭೆಯಲ್ಲಿ ಭಾಗವಹಿಸಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...