ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ - 2025

Source: Press Release | By I.G. Bhatkali | Published on 29th October 2024, 11:56 PM | State News |

ಬೆಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ ಕರ್ನಾಟಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ (ACs) ಅರ್ಹತಾ ದಿನಾಂಕ 01.01.2025 ರಂದು ಮತದಾರ ರಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಗತಿಯಲ್ಲಿದೆ.

83-ಶಿಗ್ಗಾಂವ್ 95-ಸಂಡೂರು (ST) ಮತ್ತು 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳನ್ನು ಅಕ್ಟೋಬರ್ 15 ರಂದು ಆಯೋಗ ಪ್ರಕಟಿಸಿದೆ. ಆಯೋಗದ ನಿರ್ದೇಶನಗಳ ಪ್ರಕಾರ, ಈ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಗಳ ಪ್ರಸ್ತುತ ಸಂಕ್ಷಿಪ್ತ ಪರಿಷ್ಕರಣೆಯನ್ನು ಕೈಬಿಡಲಾಗಿದೆ. ಉಪಚುನಾವಣೆ ಪ್ರಕ್ರಿಯೆ ಮುಗಿದ ನಂತರ ಆಯೋಗ ಪರಿಷ್ಕøತ ವೇಳಾ ಪಟ್ಟಿಯನ್ನು ಪ್ರಕಟಿಸಿದ ನಂತರ ಸದರಿ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಪ್ರಾರಂಭವಾಗುತ್ತದೆ.

ಆದ್ದರಿಂದ, ಉಳಿದ 221 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ಪಟ್ಟಿ ನೋಂದಣಿ ಅಧಿಕಾರಿಗಳು ಮತ್ತು ಉಳಿದ ಎಲ್ಲಾ ಮತಗಟ್ಟೆಗಳ ಕಚೇರಿಗಳಲ್ಲಿ ಸಾರ್ವಜನಿಕರ ಗಮನಕ್ಕಾಗಿ ಅಕ್ಟೋಬರ್ 29 ರಂದು ಪ್ರಕಟಿಸಲಾಗಿದೆ.

ಪರಿಷ್ಕರಣೆ ಚಟುವಟಿಕೆಗಳು:
ಭಾರತ ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ 221 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಚಟುವಟಿಕೆಗಳ ವೇಳಾಪಟ್ಟಿ ಸಮಗ್ರ ಕರಡು ಮತದಾರರ ಪಟ್ಟಿಗಳ ಪ್ರಕಟಣೆ 29.10.2024 (ಮಂಗಳವಾರ) ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ 29.10.2024 (ಮಂಗಳವಾರ) ರಿಂದ 28.11.2024 (ಗುರುವಾರ) ವಿಶೇಷ ದಿನಾಂಕಗಳು (ಶನಿವಾರ) (ಭಾನುವಾರ) 09.11.2024, 10.11.2024, 23.11.2024 & 24.11.2024 ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ 24.12.2024 (ಮಂಗಳವಾರ) ಅಂತಿಮ ಮತದಾರರ ಪಟ್ಟಿಗಳ ಪ್ರಕಟಣೆ 06.01.2025 (ಸೋಮವಾರ), ಈ ವೇಳಾಪಟ್ಟಿಯ ಪ್ರಕಾರ ಮತದಾರರಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಗತಿಯಲ್ಲಿದೆ.  ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ:

ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಮುಖ್ಯ ಚುನಾವಣಾ ಅಧಿಕಾರಿ, ಕರ್ನಾಟಕ ಇವರಅಧಿಕೃತ ವೆಬ್‍ಸೈಟ್‍ನಲ್ಲಿ https://ceo.karnataka.gov.in/en  PDF ಸ್ವರೂಪಗಳಲ್ಲಿ ಮತ್ತು ಆಯಾ ಡಿಇಒನ ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ಸರಿಯಾದ ಮಾಹಿತಿಯೊಂದಿಗೆ ತಮ್ಮ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ತಿಳಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ವಿಧಾನ:
ಪ್ರತಿ ವಿಧಾನಸಭಾ ಕ್ಷೇತ್ರದ ಅಧಿಸೂಚಿತ ಚುನಾವಣಾ ನೋಂದಣಿ ಅಧಿಕಾರಿ/ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗೆ ನಿಗದಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ನಮೂನೆ 6 : ಹೊಸ ಮತದಾರರಸೇರ್ಪಡೆಗೆ ಅರ್ಜಿ ನಮೂನೆ, ನಮೂನೆ 6ಎ: ಸಾಗರೋತ್ತರ ಭಾರತೀಯ ಮತದಾರರಿಂದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅರ್ಜಿ, ನಮೂನೆ 7 : ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು / ಅಳಿಸಲು ಆಕ್ಷೇಪಣೆಗಾಗಿ ಅರ್ಜಿ ನಮೂನೆ, ನಮೂನೆ 8: ವಾಸಸ್ಥಳವನ್ನು ಬದಲಾಯಿಸಲು / ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿ / ಇಪಿಐಸಿಯನ್ನು ಬದಲಿಸಲು / ಪಿಡಬ್ಲ್ಯೂಡಿ ಗುರುತು ಮಾಡಲು ಅರ್ಜಿ ನಮೂನೆ.

ಅರ್ಜಿಗಳನ್ನು ಮತದಾರರ ಸೇವಾ ಪೆÇೀರ್ಟಲ್ https://voters.eci.gov.in/   ಅಥವಾ ಮತದಾರರ ಸಹಾಯ ವಾಣಿ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಆನ್‍ಲೈನ್‍ನಲ್ಲಿ ಸಲ್ಲಿಸಬಹುದು. ರಾಜ್ಯ ಮಟ್ಟದಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪತ್ರಿಕಾ ಪ್ರಕಟಣೆಗಳ ಮೂಲಕ ಮತದಾರರಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯವರು ವ್ಯಾಪಕ ಪ್ರಚಾರ ನೀಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಉಪ ವಿಭಾಗ/ತಾಲ್ಲೂಕು ಮಟ್ಟದಲ್ಲಿ ಚುನಾವಣಾ ನೋಂದಣಿ ಅಧಿಕಾರಿಗಳು/ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ವಿವಿಧ ಮಾಧ್ಯಮಗಳ ಮೂಲಕ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಬಗ್ಗೆ ಪ್ರಚಾರವನ್ನು ನೀಡಿದ್ದಾರೆ.

ಸಾಮಾನ್ಯ ಮತದಾರರು:
ಕರಡು ಮತದಾರರ ಪಟ್ಟಿ-2025 (221 ವಿ.ಸ.ಕ್ಷೇಗಳು) ಪ್ರಕಾರ ಮೇಲಿನ ಕೋಷ್ಟಕದಿಂದ ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,43,96,974.ಅದರಲ್ಲಿ 2,71,79,483 ಪುರುಷ ಮತದಾರರು, 2,72,12,469 ಮಹಿಳಾ ಮತದಾರರು ಮತ್ತು 5,022 ಇತರೆ ಮತದಾರರು ಇದ್ದಾರೆ.

ಕರಡು ಮತದಾರರ ಪಟ್ಟಿ 2025 ರಲ್ಲಿ 03 ವಿಧಾನಸಭಾ ಕ್ಷೇತ್ರಗಳ ಮಾಹಿತಿಯನ್ನು ಸೇರಿಸದ ಕಾರಣ ಪುರುಷ, ಮಹಿಳೆ ಮತ್ತು ಒಟ್ಟು ಸಾಮಾನ್ಯ ಮತದಾರರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. 03 ವಿಧಾನ ಸಭಾ ಕ್ಷೇತ್ರಗಳ ಮಾಹಿತಿಯನ್ನು ಸೇರಿಸಿದರೆ, ಸಾಮಾನ್ಯ ಮತದಾರರಲ್ಲಿ ಒಟ್ಟು ಹೆಚ್ಚಳ ಕಂಡುಬರುತ್ತದೆ.

221 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿಹೆಚ್ಚು 7,64,895 ಮತದಾರರನ್ನು ಹೊಂದಿದೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರವು 1,68,653 ಕಡಿಮೆ ಮತದಾರರನ್ನು ಹೊಂದಿದೆ. ಶೇಕಡಾ ನೂರರಷ್ಟು ಫೆÇೀಟೋ ಒಳಗೊಂಡ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ.

ಸೇವಾ ಮತದಾರರು:
ಮತದಾರರ ಕರಡು ಪಟ್ಟಿ 2025 (221 ವಿ.ಸ.ಕ್ಷೇಗಳು) ಪ್ರಕಾರ, 45,975ಸೇವಾ ಮತದಾರರಿದ್ದಾರೆ. ಇವರಲ್ಲಿ 44,325 ಪುರುಷ ಮತ್ತು 1,650 ಮಹಿಳಾ ಮತದಾರರಿದ್ದಾರೆ.
ಮತದಾರರ ಕರಡು ಪಟ್ಟಿ 2025 (221 ವಿ.ಸ.ಕ್ಷೇಗಳು) ಪ್ರಕಾರ, ಸೇವಾಮತ ದಾರರು ಸೇರಿದಂತೆ ಒಟ್ಟು ಮತದಾರರು 5,44,42,949. ಇವರಲ್ಲಿ 2,72,23,808 ಪುರುಷರು, 2,72,14,119 ಮಹಿಳೆಯರು ಮತ್ತು 5,022 ತೃತೀಯ ಲಿಂಗಿ ಮತದಾರರಿದ್ದಾರೆ.

ಇತರೆ ವಿವರಗಳು:
ಮತದಾರರ ಕರಡು ಪಟ್ಟಿ 2025 ರ ಪ್ರಕಾರ ಯುವ ಮತದಾರರು (18-19 ವರ್ಷಗಳು) 15,14,584 (ವಯಸಿನ ಹೆಚ್ಚಳದ ನಂತರ 6,66,903) ತೃತೀಯ ಲಿಂಗಿ 5,022, ಸಾಗರೋತ್ತರ ಮತದಾರರು 3,446, ದಿವ್ಯಾಂಗ ಮತದಾರರು (ಮತದಾರರ ಪಟ್ಟಿ ಡೇಟಾಬೇಸ್‍ನಲ್ಲಿ ಗುರುತಿಸಲಾಗಿದೆ) 6,15,355 ಮತ್ತು 85+ ಹಿರಿಯ ವಯಸ್ಸಿನ ಮತದಾರರು 5,40,114 ಇದ್ದಾರೆ.

ಮತದಾನ ಕೇಂದ್ರಗಳು:
ಅಂತಿಮ ಮತದಾರರ ಪಟ್ಟಿಗಳು -2024 ರ ಪ್ರಕಾರ ಮತದಾನ ಕೇಂದ್ರಗಳ ಸಂಖ್ಯೆ 58,069 (221ವಿ.ಸ.ಕ್ಷೇ ಗಳು) ಮತ್ತು ಕರಡು ಮತದಾರರ ಪಟ್ಟಿಗಳು -2025 ರ ಪ್ರಕಾರ ಮತದಾನ ಕೇಂದ್ರಗಳ ಸಂಖ್ಯೆ 58,156 (221ವಿ.ಸ.ಕ್ಷೇ. ಗಳು). 99 ಮತಗಟ್ಟೆಗಳನ್ನು ಸೇರಿಸಲಾಗಿದೆ, 12 ವಿಲೀನಗೊಳಿಸಲಾಗಿದೆ ಮ

ತ್ತು 87 ಮತಗಟ್ಟೆಗಳ ನಿವ್ವಳ ಹೆಚ್ಚಳವಾಗಿದೆ. ಒಟ್ಟು ಮತಗಟ್ಟೆ ಸ್ಥಳ ಬದಲಾವಣೆ 283 ಮತ್ತು 352 ಮತಗಟ್ಟೆ ಹೆಸರುಗಳನ್ನು ಬದಲಾಯಿಸಲಾಗಿದೆ.

ನಮೂನೆಗಳ ಪರಿಸ್ಕರಣೆ:
ಒಟ್ಟಾರೆಯಾಗಿ, 2024 ರ ಚುನಾವಣಾ ಮತದಾರರ ಪಟ್ಟಿಯಿಂದ 2025 (221ವಿ.ಸ.ಕ್ಷೇ.ಗಳು) ಕರಡು ಪಟ್ಟಿ ವರೆಗೆ 13,80,421 ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಅದರಲ್ಲಿ 12,13,242 ಅನುಮೋದಿಸಲಾಗಿದೆ ಮತ್ತು 1,64,844 ತಿರಸ್ಕರಿಸಲಾಗಿದೆ.

ಮತಗಟ್ಟೆ ಮಟ್ಟದ ಕಾರ್ಯಕರ್ತರು (ಬಿಎಲ್‍ಎ):
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಮಟ್ಟದ ಕಾರ್ಯಕರ್ತರನ್ನು ನಿಯೋಜಿಸಲು ಮತ್ತು ಹಕ್ಕುಗಳು ಮತ್ತು ಆಕ್ಷೇಪಣೆಯ ಅವಧಿಯಲ್ಲಿ ಎಲ್ಲಾ ಅರ್ಹ ಮತದಾರರನ್ನು ನೋಂದಾಯಿಸಲು ಮತಗಟ್ಟೆ ಮಟ್ಟದ ಕಾರ್ಯಕರ್ತರುಗಳಿಗೆ ಎಲ್ಲಾ ಸಹಕಾರವನ್ನು ನೀಡಲು ತಿಳಿಸಲಾಗಿದೆ.

ಮನವಿ:
ಎಲ್ಲಾ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮತ್ತು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ದೋಷ ಮುಕ್ತ ಮತದಾರರ ಪಟ್ಟಿಯನ್ನು ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಮೇಲಿನ ವೇಳಾ ಪಟ್ಟಿಯ ಪ್ರಕಾರ ಹಕ್ಕುಗಳು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಸಂಬಂಧಿತ ನಮೂನೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರವನ್ನು ನೀಡಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹ ಮತದಾರರು ತಮ್ಮ ಮೊಬೈಲ್ ಫೆÇೀನ್‍ನಲ್ಲಿ ಮತದಾರರ ಸಹಾಯವಾಣಿ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಅವರು ಅರ್ಜಿಗಳನ್ನು https://voterportal.eci.gov.in/ ಪೋರ್ಟಲ್ ನಲ್ಲಿಯೂ ಸಲ್ಲಿಸಬಹುದು.

ಮತದಾರರ ಪಟ್ಟಿ, ಮತದಾರರ ಭಾವಚಿತ್ರ ಗುರುತಿನ ಚೀಟಿ ಮತ್ತು ಅರ್ಜಿಗಳ ಸಲ್ಲಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಮತಗಟ್ಟೆಗಳ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಕೈಗೊಳ್ಳಲು ಯಾವುದೇ ಅವಕಾಶವಿರುವುದಿಲ್ಲ, ಆದ್ದರಿಂದ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಕ್ಷಣವೇ ಪರಿಶೀಲಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Read These Next

ಫೆಂಗಲ್ ಪ್ರಭಾವ: ರಾಜ್ಯದ ವಿವಿಧೆಡೆ ವ್ಯಾಪಕ ಮಳೆ; ಇನ್ನೆರಡು ದಿನ ಮಳೆ ಮುಂದುವರಿಯುವ ಸಾಧ್ಯತೆ

ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಮುಂದಿನ ಎರಡು ದಿನ ಕಾಲ ನಿರಂತರ ಮಳೆ ...

ಸಿಎಂ ಸಿದ್ದರಾಮಯ್ಯರಿಂದ ಪ್ರಧಾನಿ ಮೋದಿ ಭೇಟಿ; ನೀರಾವರಿ ಯೋಜನೆಗಳಿಗೆ ನೆರವು ಕೋರಿ ಮನವಿ; ನಬಾರ್ಡ್ ಸಾಲದ ಪ್ರಮಾಣ ಕಡಿತಕ್ಕೆ ಆಕ್ಷೇಪ

ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಭದ್ರಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ನೀರಾವರಿ ...

ರಾಜ್ಯದ ಮೂರೂ ಕ್ಷೇತ್ರಗಳು ಕೈವಶ; ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಎನ್‌ಡಿಎ

ರಾಜ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ...

ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ

ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...