ಮುಂದುವರೆದ ಪಡೀಲು‌ ರೈಲ್ವೆ ಮಾರ್ಗದ ಮಣ್ಣು ತೆರವು ಕಾರ್ಯಾಚರಣೆ.

Source: SO News | By Laxmi Tanaya | Published on 29th September 2020, 8:17 PM | Coastal News | Don't Miss |

ಮಂಗಳೂರು :  ಧಾರಾಕಾರ ಮಳೆಯಿಂದಾಗಿ ಇತ್ತೀಚಿಗೆ  ಕುಸಿದಿದ್ದ ಪಡೀಲ್ ಬೈಪಾಸ್ ರೈಲು ಮಾರ್ಗದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದೆ .

ಏಳು ದಿನಗಳ ಬಳಿಕ ಈ ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರವನ್ನು ನಡೆಸಲಾಗಿದೆ .ದ್ವೀಪದ ಮಾರ್ಗವಿರುವ ಈ ಸ್ಥಳದಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದರಿಂದ ಪ್ರಯಾಣಿಕ ರೈಲು ಹಾಗೂ ಗುಡ್ ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು . ದಕ್ಷಿಣ ರೈಲ್ವೆ ಪಾಲ್ಗಾಟ್ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ  , ಹಿಟಾಚಿ  , ಜೆಸಿಬಿ ಬಳಸಿ ಎರಡು ಮೂರು ದಿನಗಳಿಂದ ಮಣ್ಣು ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ .

 ಸದ್ಯಕ್ಕೆ ಈ ಬೈಪಾಸ್ ಒಂದು ಬದಿಯ ಮಾರ್ಗದ ಮೇಲಿನ ಮಣ್ಣನ್ನು ಸಂಪೂರ್ಣ ತೆರವುಗೊಳಿಸಲಾಗಿದೆ ಈ ಮಾರ್ಗದಲ್ಲಿ ಮಾತ್ರ ಗೂಡ್ಸ್ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ .ಈ ಪ್ರದೇಶದಲ್ಲಿ ಹದಿನೈದು ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ . ಶನಿವಾರ ಮಧ್ಯಾಹ್ನ ಸರಕು ಹೊತ್ತ ಗೂಡ್ಸ್ ರೈಲು ಈ ಮಾರ್ಗದ ಮೂಲಕ ಸಂಚರಿಸಿದೆ. ಆದರೆ ಪ್ರಯಾಣಿಕ ರೈಲುಗಳ ಸಂಚಾರವನ್ನು ಇನ್ನೂ ಆರಂಭಿಸಿಲ್ಲ ಎಂದು ಪಾಲ್ಗಾಟ್ ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ .

ಸಂಪೂರ್ಣ ಮಣ್ಣು ತೆರವು ಮಾಡಲು ಇನ್ನೂ ಎರಡು ದಿನ ಕಾಲಾಕಾಶ ಅಗತ್ಯವಿದೆ ಅಲ್ಲಿಯವರೆಗೆ ಕಾರವಾರ ಕೆಎಸ್ಆರ್ ಮಂಗಳೂರು ರೈಲು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಮೂಲಕ ಸಂಚರಿಸಲಿದೆ  ಎಂದು ಅವರು ಹೇಳಿದ್ದಾರೆ.

Read These Next

ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೆ.ಡಿ.ಎಸ್.ನ ನಾಲ್ಕು ಮತ್ತು ...

ಎನ್ ಡಿಆರ್ ಎಫ್ ತಂಡದಿಂದ ಅಣಕು ಪ್ರದರ್ಶನ. ಸಾರ್ವಜನಿಕರಲ್ಲಿ ರಕ್ಷಣಾ ಕಾರ್ಯದ ರೀತಿ ಮತ್ತು ಮಹತ್ವದ ಅರಿವು ಮೂಡಬೇಕು: ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ : ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಲ್ಲಿ ನೆರೆಹೊರೆಯವರು ಸೇರಿದಂತೆ ಸಾರ್ವಜನಿಕರು ತತಕ್ಷಣ ಸ್ಪಂಧಿಸುವುದರಿಂದ ಮತ್ತು ...

ಮತ ಚಲಾಯಿಸಿದ ಕೋವಿಡ್ ಸೋಂಕಿತರು

ಧಾರವಾಡ : ಬುಧವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ...