ಕಾರಾಗೃಹ ಬಂಧಿಗಳಿಗೆ ಕೌಶಲ್ಯಾಭಿವೃದ್ದಿ ಮತ್ತು ಧ್ಯಾನ ಕಾರ್ಯಕ್ರಮ

Source: SO News | By Laxmi Tanaya | Published on 1st December 2021, 8:14 PM | State News | Don't Miss |

ಶಿವಮೊಗ್ಗ : ಮಹಿಳಾ ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹದ ಬಂಧಿಗಳಿಗೆ ‘ಕೌಶಲ್ಯಾಭಿವೃದ್ದಿ ತರಬೇತಿ ಹಾಗೂ ಯೋಗಾ, ಪ್ರಾಣಾಯಾಮ ಮತ್ತು ಧ್ಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ ಇವರು ಉದ್ಘಾಟಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿ,  ಮಹಿಳಾ ಬಂಧಿಗಳು ಈ ಕಾರ್ಯಕ್ರಮಗಳ ಸದುಪಯೋಗ ಪಡೆದು ಬಿಡುಗಡೆ ನಂತರ ಸ್ವಾವಲಂಬಿ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

     ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಸರಸ್ವತಿ ಮಾತನಾಡಿ, ಬಂಧಿ ನಿವಾಸಿಗಳ ಕೌಶಲ್ಯಾಭಿವೃದ್ದಿ ಮತ್ತು ಮಾನಸಿಕ, ದೈಹಿಕ ಆರೋಗ್ಯದ ಒಳಿತಿಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆ ಹಾಗೂ ಇಲಾಖೆಯ ಅಧಿಕಾರಿಗಳನ್ನು ಶ್ಲಾಘಿಸಿದರು.

     ಕೇಂದ್ರ ಕಾರಾಗೃಹ ಅಧೀಕ್ಷಕಿ ಅನಿತಾ ಎಸ್ ಹಿರೇಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಕಾರಾಗೃಹದ ಉಪ ಅಧೀಕ್ಷಕ ಶಿವಾನಂದ ಎಸ್.ಶಿವಪುರ, ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್ ಹೆಚ್.ಎಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಜೈಲರ್ ಸವಿತಾ ಬೆಳ್ಳುಂಡಗಿ, ಆರ್ಟ್ ಆಫ್ ಲಿವಿಂಗ್‍ನ ತರಬೇತುದಾರ ನಾಗಭೂಷಣಶಾಸ್ತ್ರಿ, ಭಾಗ್ಯಮೂರ್ತಿ, ಡಾ.ಅನುಷಾ, ಶಬರೀಷ್, ಕಣ್ಣನ್ ಇತರರು ಉಪಸ್ಥಿತರಿದ್ದರು.

Read These Next

ಯರಗುಪ್ಪಿ ಗ್ರಾಮ ಪಂಚಾಯತ ಪಿಡಿಓ ಅಮಾನತ್ತು. ಪಾರದರ್ಶಕ ತನಿಖೆಗೆ ಜಿಲ್ಲಾ ಪಂಚಾಯತ ಸಿಇಓ ಆದೇಶ

ಧಾರವಾಡ : ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿಯು ಕರ್ತವ್ಯಲೋಪ ಮಾಡಿ, ಕರ್ನಾಟಕ ನಾಗರಿಕ ...

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ): ಕಲಿಯುವ, ಕಲಿಸುವ, ವಿಧಾನಗಳು ಕುರಿತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ಧಾರವಾಡ : ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಲ್ಲಿ ಕಲಿಯುವ, ಕಲಿಸುವ, ವಿಧಾನಗಳು ಕುರಿತು ಕಾರ್ಯಾಗಾರ ಗುರುವಾರ ಜರುಗಿತು.

ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸಲು ಸೂಕ್ತ ಜಾಗ ಗುರುತಿಸಲು ಸೂಚನೆ: ಡಿ.ಎಸ್.ವೀರಯ್ಯ

ಶಿವಮೊಗ್ಗ : ಜಿಲ್ಲೆಯಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವುದು ಅವಶ್ಯವಾಗಿದ್ದು ಶಿವಮೊಗ್ಗ ಸುತ್ತಮುತ್ತ ಸೂಕ್ತ ...