ಸ್ವ ಉದ್ಯೋಗಕ್ಕೆ ಕೌಶಲ್ಯ ಅತ್ಯಗತ್ಯ-ಡಾ.ಚಂದ್ರಪ್ಪ.

Source: SO News | By Laxmi Tanaya | Published on 6th December 2021, 9:00 PM | State News | Don't Miss |

ಧಾರವಾಡ : ಕೌಶಲ್ಯವು ಪ್ರತಿಯೊಬ್ಬರಿಗೆ ತುಂಬಾ ಅವಶ್ಯಕ. ಸ್ವ-ಉದ್ಯೋಗವನ್ನು ಪ್ರಾರಂಭಿಸಿ, ಇತರರಿಗೂ ಉದ್ಯೋಗಾವಕಾಶ ಒದಗಿಸಿಕೊಡಲು ಕೌಶಲ್ಯ ಅತ್ಯಗತ್ಯ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಡಾ.ಚಂದ್ರಪ್ಪ ಹೇಳಿದರು.

ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ಹಾಗೂ ಅಭಿಯಾನ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಿರುವ ಮೂರು ದಿನಗಳ ಉದ್ಯಮಶೀಲತಾ ಪ್ರೇರಣಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   

ಸಿಡಾಕ್‍ನ ಜಂಟಿ ನಿರ್ದೇಶಕ  ಚಂದ್ರಶೇಖರ ಎಚ್.ಅಂಗಡಿ ಮಾತನಾಡಿ, ಶಿಬಿರಾರ್ಥಿಗಳು 3 ದಿನಗಳ ತರಬೇತಿಯ ಲಾಭವನ್ನು ಪಡೆಯಬೇಕು. ತರಬೇತಿಯಲ್ಲಿ ಉದ್ಯಮಶೀಲತೆಯ ಮಹತ್ವ, ದಕ್ಷತೆಗಳು, ಉದ್ಯಮ ಸ್ಥಾಪನೆಗೆ ಅನುಸರಿಸುವ ಹಂತಗಳು, ಉದ್ಯಮಗಳ ಆಯ್ಕೆಯ ವಿಧಾನ, ಉದ್ಯೋಗಾವಕಾಶಗಳ ವಿವರಣೆ, ಸರಕಾರಿ ಯೋಜನೆಗಳು, ಬ್ಯಾಂಕ ಸಾಲ ಯೋಜನೆಗಳನ್ನು ತಿಳಿಸಲಾಗುವುದು. ಪರಿಣಿತ ಅನುಭವಿಗಳು ಅನುಭವ ಹಂಚಿಕೊಳ್ಳುವರು ಎಂದರು. 

ರೇಣುಕಾ ಎಜ್ಯುಕೇಷನ್ ಸಂಸ್ಥೆಯ ಸುನಿತಾ ದಿವಟೆ ಮಾತಾನಾಡಿ, ಸ್ವ-ಉದ್ಯೋಗ ಸ್ಥಾಪನೆಯ ಅಡಚಣೆಗಳು ಹಾಗೂ ಅವುಗಳನ್ನು ನಿಭಾಯಿಸುವ ತಂತ್ರಗಳ ಬಗ್ಗೆ ತಿಳಿಸಿದರು. ತರಬೇತಿಯನ್ನು ಒಟ್ಟು 2 ತಂಡಗಳಲ್ಲಿ ಪ್ರಾರಂಭಿಸಲಾಯಿತು, ಮೊದಲನೆಯ ತಂಡದಲ್ಲಿ ಸಾಮಾನ್ಯ ವರ್ಗದ 30 ಅಭ್ಯರ್ಥಿಗಳು ಮತ್ತು ಎರಡನೆಯ ತಂಡದಲ್ಲಿ ಪರಿಶಿಷ್ಠ ಪಂಗಡದವರಿಗೆ ಅವಕಾಶ ನೀಡಲಾಗುತ್ತಿದೆ.

ರುಡ್‍ಸೆಟ್ ಸಂಸ್ಥೆಯ ಜಗದೀಶ ಪೂಜಾರ, ಅಭಿಯಾನ ಫೌಂಡೇಶನ್ನಿನ ಕಾಡೇಶ ಚನ್ನವರ, ಮೆರಿಟ್ಯುಡ್ ಸಂಸ್ಥೆಯ ನಿರ್ದೇಶಕ ರವೀಂದ್ರ ಪಡೇಸೂರ, ಭುವನೇಶ್ವರಿ ಸಂಸ್ಥೆಯ ಸುಜಾತಾ ಮತ್ತು ರಾಜೇಶ್ ಶಿಂಧೆ ಉಪಸ್ಥಿತರಿದ್ದರು. ಮೌನೇಶ ಆರ್.ಬಡಿಗೇರ ನಿರೂಪಿಸಿದರು. ರೋಹಿಣಿ ವಂದಿಸಿದರು.  

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...