ಬಿಕಾಂ ಫೈನಲ್ ಪರೀಕ್ಷೆಯಲ್ಲಿ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಸಾಧನೆ.

Source: SO News | By Laxmi Tanaya | Published on 23rd October 2020, 5:31 PM | Coastal News | Don't Miss |

ಭಟ್ಕಳ : ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ಬಿ.ಕಾಂ ಅಂತಿಮ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕಾಲೇಜಿನ ಹೆಸರನ್ನು ಬೆಳಗಿಸಿದ್ದಾರೆ. 

ಈ ಬಾರಿ ಐವತ್ತು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಅದರಲ್ಲಿ ಆರು ವಿದ್ಯಾರ್ಥಿಗಳು ಒಂದು ವಿಷಯದಲ್ಲಿ 100 ರಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ.

 ಈ ಬಾರಿ 90 ವಿದ್ಯಾರ್ಥಿಗಳು ಬಿ.ಕಾಂ ಫೈನಲ್‌ ಪರೀಕ್ಷೆ ಬರೆದಿದ್ದರು, ಇದರಲ್ಲಿ 74 ಮಂದಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ, ಸರಾಸರಿ ಯಶಸ್ಸಿನ ಪ್ರಮಾಣ 83.14% ದಾಖಲಾಗಿದೆ. ಡಿಸ್ಟಿಂಕ್ಷನ್‌ನಲ್ಲಿ ಒಟ್ಟು 50 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 21 ಮತ್ತು ದ್ವಿತೀಯ ದರ್ಜೆಯಲ್ಲಿ ಮೂರು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.

ಮುಹಮ್ಮದ್ ಸಮಿ ಕೊಬ್ಟೆ S/O ಅಲ್ತಾಫ್ ಕೊಬ್ಟೆ 95% ರ ಸರಾಸರಿಯೊಂದಿಗೆ ಇಡೀ ಕಾಲೇಜಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮ್ಯಾನೇಜ್ಮೆಂಟ್ ಅಕೌಂಟಿಂಗ್ನಲ್ಲಿ ಅವರು 100% ಅಂಕಗಳನ್ನು ಪಡೆದಿದ್ದಾರೆ, ಅದೇ ರೀತಿ ಅಬ್ದುಲ್ ಮೋಹಿ ಖಾಜಿ 93.42% ಸರಾಸರಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 

 ಈ ವಿದ್ಯಾರ್ಥಿಯು PRINCIPLE OF FORIEGN EXCHANGE ರಲ್ಲಿ 100% ಅಂಕಗಳನ್ನು ಪಡೆದಿದ್ದು, ಅಂತೆಯೇ, ಅಬ್ದುಲ್ ಮಲಿಕ್, ಮೊಹಮ್ಮದ್ ಸಯಾಫ್, ಅಬ್ದುಲ್ ಬೈಸ್, ಅಬುಲ್ ಹಸನ್ ಅಲಿ ಕೂಡ ಇದೇ ವಿಷಯದಲ್ಲಿ 100% ಅಂಕಗಳನ್ನು ಪಡೆದಿದ್ದಾರೆ. ಮಾಮ್ಡೊ ಅಫ್ನಾನ್ ಹುಸೇನ್ ಇಡೀ ಕಾಲೇಜಿನಲ್ಲಿ ಮೂರನೇ ಸ್ಥಾನದಲ್ಲಿದ್ದು, ಯಶಸ್ಸಿನ ಪ್ರಮಾಣ 91.71% ಆಗಿದೆ.

ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಸದಸ್ಯರು ಸೇರಿದಂತೆ ಇತರ ಉಪನ್ಯಾಸಕರು ಎಲ್ಲ ಯಶಸ್ವಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Read These Next

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...

ಉ.ಕ.ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಹಕ್ಕು ಹೋರಾಟಗಾರ ಆಗ್ರಹ

ಶಿರಸಿ : ರಾಜ್ಯ ಸರ್ಕಾರದ ಅಧಿಸೂಚನೆ ನಿರ್ಲಕ್ಷಿಸಿ ಅರಣ್ಯ ವಾಸಿಗಳು ಸಾಗುವಳಿ ಮಾಡುತ್ತಿರುವ ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿ ಪ್ರದೇಶ ...

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತ ಜಾರಿಗೆ ತರುತ್ತೇವೆ : ಗೃಹ ಸಚಿವ ಬೊಮ್ಮಾಯಿ.

ಕಾರವಾರ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.