ಶಿರಸಿ: ಅರಣ್ಯ ಭೂಮಿ ಹಕ್ಕು ; ಜುಲೈಯಲ್ಲಿ ಸುಫ್ರೀಂ ಕೋರ್ಟ ತೀರ್ಮಾನ- ನಿರ್ಣಾಯಕ. ಸರಕಾರದ ಪ್ರಮಾಣ ಪತ್ರದ ಮೇಲೆ ಅರಣ್ಯವಾಸಿಗಳ ಭವಿಷ್ಯ.

Source: Press release | By I.G. Bhatkali | Published on 22nd May 2022, 7:03 PM | Coastal News |

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಪಲ್ಯದಿಂದ ಭೂಮಿ ಹಕ್ಕಿನಿಂದ ವಂಚಿತರಾಗಿರುವ ಅರಣ್ಯವಾಸಿಗಳ ರಕ್ಷಣೆಗೆ ರಾಜ್ಯ ಸರಕಾರ ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಹಾಗೂ ಹೇಚ್ಚುವರಿ ಪ್ರಮಾಣ ಪತ್ರ ಸಲ್ಲಿಸುವುದರ ಮೇಲೆ ಅರಣ್ಯವಾಸಿಗಳ ಭೂಮಿ ಹಕ್ಕಿನ ಭವಿಷ್ಯ ಅಡಕವಾಗಿದೆ.

ದೇಶದ ಏಂಟು ಪರಿಸರವಾದಿ ಸಂಘಟನೆಗಳು ಸುಫ್ರೀಂ ಕೋರ್ಟನಲ್ಲಿ ಅನರ್ಹ ಅರಣ್ಯವಾಸಿಗಳನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿ, ಅತೀಕ್ರಮಣ ಪ್ರದೇಶವನ್ನ ಅರಣ್ಯೀಕೃತ ಮಾಡಬೇಕೆಂದು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಮೇಲೆ ಸುಫ್ರೀಂ ಕೋರ್ಟ ಮುಂದಿನ ದಿನಗಳಲ್ಲಿ ಈ ಹಿಂದೆ ಹರಿಯಾಣ ರಾಜ್ಯದ ಹತ್ತು ಸಾವಿರ ಅರಣ್ಯವಾಸಿಗಳನ್ನು ಅನಧೀಕೃತ ಒತ್ತುದಾರರೆಂದು ಪರಿಗಣಿಸಿ ಆರು ವಾರದಲ್ಲಿ ಸಂಪೂರ್ಣ ಒಕ್ಕಲೆಬ್ಬಿಸಬೇಕೆಂದು ನೀಡಿದ ಆದೇಶದ ತತ್ವವನ್ನೇ ಇಲ್ಲಿಯೂ ಅನುಸರಿಸಬಹುದೆಂದು ಅರಣ್ಯವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ರಾಜ್ಯ ಸರಕಾರ ಸುಫ್ರೀಂ ಕೋರ್ಟನಲ್ಲಿ ಬುಡಕಟ್ಟು ಜನಾಂಗ ೬೮,೪೩೨ ಅರ್ಜಿಗಳನ್ನು ಸಲ್ಲಿಸಿದ್ದರೇ, ೨,೨೭,೦೧೪ ಅರ್ಜಿಗಳನ್ನ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದು ಇರುತ್ತದೆ. ಅಲ್ಲದೇ, ಬುಡಕಟ್ಟು ಜನಾಂಗಗಳ ೩೫,೫೨೧ ಹಾಗೂ ೧,೪೧,೦೧೯ ಪಾರಂಪರಿಕ ಅರ್ಜಿಗಳು ತೀರಸ್ಕರಿಸಲಾಗಿದ್ದು ಇರುತ್ತದೆ. ತೀರಸ್ಕ್ರತ ಅರ್ಜಿದಾರರನ್ನ ನ್ಯಾಯಾಲಯದ ಮುಂದಿನ ವಿಚಾರಣೆ ಒಳಗೆ ಒಕ್ಕಲೆಬ್ಬಿಸುವ ಬಗ್ಗೆ ಗಂಭೀರವಾಗಿ ಕ್ರಮ ಜರುಗಿಸಲಾಗುವುದೆಂದು ರಾಜ್ಯ ಸರಕಾರ ಇಗಾಗಲೇ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಪ್ರಸ್ತಾಪವಾಗಿರುವುದು ವಿಷಾದಕರ.

ಕೇಂದ್ರ ಸರಕಾರ ಅರ್ಜಿಗಳನ್ನ ಪುನರ್ ಪರಿಶೀಲಿಸಲಾಗುವುದೆಂಬ ಸುಫ್ರೀಂ ಕೋರ್ಟಿಗೆ ನೀಡಿದ ವಾಗ್ದಾನ ನೀಡಿದ್ದು, ಅದರಂತೆ, ರಾಜ್ಯ ಸರಕಾರ ಜುಲೈ ೮, ೨೦೧೯ ರಂದು ಸುಫ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿಗಳನ್ನ ೧೮ ತಿಂಗಳುಗಳಲ್ಲಿ ವಿಲೇಮಾಡುವುದಾಗಿ ಪ್ರಮಾಣಿಕರಿಸಿತ್ತು. ಆದರೇ, ಈ ಕಾಲಮಾನದಂಡ ಕಳೆದ ವರ್ಷ ಜನವರಿಯಲ್ಲಿ ಅಂತ್ಯವಾಗಿದ್ದರೂ ಇಂದಿನವರೆಗೂ ಅರ್ಜಿಗಳ ವಿಲೇವಾರಿ ಶೇ ೫ ರಷ್ಟು ವಾಗದೇ ರಾಜ್ಯ ಸರಕಾರ ಸುಫ್ರೀಂ ಕೋರ್ಟಿನಿಂದ ನ್ಯಾಯಾಂಗ ನಿಂದನೆಗೆ ಒಳಪಡುವ ಪ್ರಸಂಗ ಬಂದೊದಗಿದೆ ಎಂದರೇ ತಪ್ಪಾಗಲಾರದು.

ಜುಲೈ ಸುಫ್ರೀಂ ಕೋರ್ಟ ಅಂತಿಮ ತಿರ್ಮಾನ :
ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದ ಅರ್ಜಿ ಅಂತಿಮ ವಿಚಾರಣೆ ಜುಲೈಯಲ್ಲಿ ಸುಫ್ರೀಂ ಕೋರ್ಟನಲ್ಲಿ ಜರುಗಲಿರುವುದರಿಂದ, ರಾಜ್ಯ ಸರಕಾರ ಅರಣ್ಯವಾಸಿಗಳ ಪರವಾಗಿ ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲದಿದ್ದರೇ, ಜಿಲ್ಲೆಯ ಜನಸಂಖ್ಯೆಯ ಒಂದು ಮೂರಾಂಶ ರಷ್ಟು ಇರುವ ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆಯಿಂದ ಉತ್ತರ ಕನ್ನಡ ಜಿಲ್ಲೆ ನಿರಾಶ್ರಿತ ಜಿಲ್ಲೆಯಾಗುವುದೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಖೇದ ವ್ಯಕ್ತಪಡಿಸಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...