ಶಿರಾಲಿ ವೃತ್ತದಿಂದ ಚಿತ್ರಾಪುರ ವೃತ್ತದವರೆಗೆ ಶ್ರೀಮತ್ ಸ್ವಾಮಿ ಪಾಂಡುರಂಗಾಶ್ರಮ ಮಾರ್ಗ ನಾಮಕರಣ

Source: so news | By MV Bhatkal | Published on 22nd November 2022, 11:43 PM | Coastal News | Don't Miss |

ಭಟ್ಕಳ:ತಾಲೂಕಿನ ಶಿರಾಲಿ ವೃತ್ತದಿಂದ ಚಿತ್ರಾಪುರ ಶ್ರೀ ಮಠದ ಸಮೀಪ ವೃತ್ತದವರೆಗೆ ಇರುವ ರಸ್ತೆಗೆ ಶ್ರೀ ಮತ್‌ ಸ್ವಾಮಿ ಪಾಂಡುರಂಗಾಶ್ರಮ ಮಾರ್ಗ ಎಂದು ಮರುನಾಮಕರಣ ಮಾಡಲಾಗಿದ್ದು, ಶ್ರೀ ಮಠದ ಸದ್ಯೋಜ್ಞಾತ ಶಂಕ ರಾಶ್ರಮ ಸ್ವಾಮೀಜಿ ಅವರು ನಾಮ ಫಲಕ ಅನಾವರಣಗೊಳಿಸಿದರು.
ಶ್ರೀ ಚಿತ್ರಾಪುರ ಮಠದ ಗುರುಪರಂಪರೆಯ 8ನೇ ಗುರುಗಳಾದ ಶ್ರೀಮದ್ ಪಾಂಡುರಂಗ ಸ್ವಾಮೀಜಿಯವರು ಶಿರಾಲಿ ಗ್ರಾಮದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳಲ್ಲಿ ಶಿರಾಲಿ ಅಂಚೆ ಕಚೇರಿ, ವಾರದ ಸಂತೆ, ಶಾಲೆ, ಚಿತ್ರಾಪುರ ಶ್ರೀ ಮಠದಿಂದ ಕಟಗಾರಕೊಪ್ಪದವರೆಗೆ ರಸ್ತೆ ನಿರ್ಮಾಣ ಪ್ರಮುಖವಾಗಿವೆ. ಊರಿನ ಅಭಿವೃದ್ಧಿಗಾಗಿ ಶ್ರೀಗಳು ಕೈಗೆತ್ತಿಕೊಂಡ ಯೋಜನೆಗಳು, ಸಾಧನೆಯ ಸ್ಮರಣಾರ್ಥವಾಗಿ ಇದೀಗ ಶಿರಾಲಿ ಗ್ರಾಮ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಅನುಮತಿ ಪಡೆದು ಶಿರಾಲಿಯಿಂದ ಚಿತ್ರಾಪುರದವರೆಗಿನ ರಸ್ತೆಗೆ ಸ್ವಾಮೀಜಿಯವರ ಹೆಸರನ್ನಿಟ್ಟು ನಾಮಫಲಕ ಅನಾವರಣಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ, ಚಿತ್ರಾಪುರ ಶ್ರೀ ಮಠದ ಪ್ರಧಾನ ವ್ಯವಸ್ಥಾಪಕ ನಾರಾಯಣ ಮಲ್ಲಾಪುರ, ಶಿರಾಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಭಾಸ್ಕರ ದೈಮನೆ, ವೆಂಕಟೇಶ ನಾಯ್ಕ, ಮಾರುತಿ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪೈ, ಎ.ಬಿ. ಚಿತ್ರಾಪುರ ಮತ್ತಿತರರು ಉಪಸ್ಥಿತರಿದ್ದರು.

Read These Next

ಪಾತಾಳಕ್ಕೆ ಕುಸಿದ ವ್ಯಕ್ತಿಯನ್ನು ಮೇಲೆತ್ತುವ ಸಾಮರ್ಥ್ಯ ಗುರುವಿಗೆ:ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಪಾತಾಳಕ್ಕೆ ಕುಸಿದ ವ್ಯಕ್ತಿಯನ್ನು ಮೇಲೆತ್ತುವ ಸಾಮರ್ಥ್ಯ ಗುರುವಿಗೆ:ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ