ಬೆಂಗ್ರೆಯಲ್ಲಿ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮಾದಾನ

Source: S.O. News Service | By MV Bhatkal | Published on 15th January 2021, 9:07 PM | Coastal News | Don't Miss |

 ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಂಗ್ರೆ ಘಟಕದ ವಿಪತ್ತು ನಿರ್ವಹಣಾ ತಂಡ, ಸ್ಥಳೀಯ ಸವಸಹಾಯ ಸಂಘಗಳ ಸದಸ್ಯರಿಂದ ಮಾವಿನಕಟ್ಟೆ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
 ದೇವಸ್ಥಾನದ ಎದುರು 3 ಗಂಟೆಗಳ ಕಾಲ ಶ್ರಮಾದಾನದ ಮೂಲಕ ನೆಲವನ್ನು ಶುಚಿಗೊಳಿಸಿ, ರಂಗೋಲಿ ಹಾಕಿ ಸದಸ್ಯರು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಕಾರ್ಯದರ್ಶಿ ಮಂಜುನಾಥ ದೇವಡಿಗ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಶೈಲಾ, ಒಕ್ಕೂಟದ ಕಾರ್ಯದರ್ಶಿ ಶಿಲ್ಪಾ ಆಚಾರಿ, ವಿಪತ್ತು ನಿರ್ವಹಣಾ ಸಂಯೋಜಕಿ ಜ್ಯೋತಿ ಆಚಾರಿ, ಸ್ವಯಂ ಸೇವಕರಾದ ಹರಿಶ್ಚಂದ್ರ, ರವೀಂದ್ರ, ಶ್ರೀಧರ, ರಮೇಶ, ಮಂಜುನಾಥ, ಮೋಹನ, ಸಂತೋಷ ಇತರರು ಉಪಸ್ಥಿತರಿದ್ದರು. 
           

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...