ಅಡುಗೆ ಅನಿಲ  ತೊಂದರೆ ದೂರಮಾಡಿ

Source: sonews | By Staff Correspondent | Published on 10th September 2019, 9:57 PM | Coastal News | Don't Miss |

ಮುಂಡಗೋಡ : ತಾಲೂಕಿನಲ್ಲಿ ಅಡುಗೆ ಅನಿಲ ಅಭಾವದಿಂದ ಸಾರ್ವಜನಿಕರು ಪರದಾಡುತ್ತಾ ತೊಂದರೆ ಅನುಭವಿಸುತ್ತಿದ್ದಾರೆ ಧಾರಕಾರ ಮಳೆಯ ಸುರಿಯುತ್ತಿದ್ದ ಅವಧಿಯಲ್ಲಿ ಪ್ರಾರಂಭವಾದ ಈ ಅಡುಗೆ ಅನಿಲ ತಾಪತ್ರೆಯ ಮಳೆ ಕಡಿಮೆಯಾದರೂ ಅಡುಗೆ ಅನಿಲ ತೊಂದರೆ ಸಾರ್ವಜನಿಕರನ್ನು ಕಾಡುತ್ತಿದೆ. ಗ್ಯಾಸ್ ಪಡೆದುಕೊಳ್ಳಲು ಸಾರ್ವಜನಿಕರು ಅಡುಗೆ ಅನಿಲ ಸಂಗ್ರಹಗಾರದ ಬಳಿ ಸರತಿಸಾಲಿನಲ್ಲಿ ನಿಂತಿರುತ್ತಾರೆ ಲೋಡ ಬಂದಿದೆ ಎಂದರೆ ಗೊತ್ತಾದರೆ ಸಾಕು ರಾತ್ರಿ ಎನ್ನದೆ ಪಾಳೆ ಹಚ್ಚುವುದು ಕಂಡು ಬರುತ್ತಿದೆ.  ಅಡುಗೆ ಅನಿಲ ಸಂಗ್ರಹಗಾರದ ಬಳಿ ವಿತರಕರ ಮನೆಯೂ ಅಲ್ಲೇ ಇರುವುದರಿಂದ ಸಾರ್ವಜನಿಕರು ಇವರ ನಿದ್ದೆಗೂ ಭಂಗ ತರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಗೂಡೌನ ಹತ್ತಿರ ಗ್ಯಾಸ್ ತುಂಬಿದ ಲಾರಿಯಿಂದ ಅಲ್ಲೇ ಸರತಿಸಾಲಿನಲ್ಲಿ ನಿಂತವರಿಗೆ ವಿತರಣೆ ಮಾಡಲಾಗುತ್ತಿದೆ ಸಿಗದೇ ಇರುವವರು ಗೊಣಗುತ್ತಾ ಹೋಗುತ್ತಿರುವುದು ಕಂಡು ಬರುತ್ತಿದೆ

ಮೊದಲು ಫೋನಿನ ಮುಖಾಂತರ ಗ್ಯಾಸ್ ಬುಕ್ ಮಾಡಲಾಗುತ್ತಿತ್ತು. ಗ್ಯಾಸ್ ಬುಕ್ ಮಾಡಿದ ನಂತರ ಗ್ರಾಹಕರು ಒಂದು ಗ್ಯಾಸ್ ಪಡೆದು 30 ದಿನಗಳಾಗಿವೇ ಎಂದು ಪರಿಶೀಲಿಸಿ ಬುಕ್ ಮಾಡಿದ 4-5 ದಿನಗಳಲ್ಲಿ ಮನೆ ಮನೆಗೆ ಗ್ಯಾಸ್ ವಿತರಣೆ ಮಾಡುತ್ತಿದ್ದರು. ಈ ಸೌಲಭ್ಯದಿಂದ ಗ್ರಾಹಕರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. 

ಆದರೆ ಕಳೆದ ತಿಂಗಳು ರಾಜ್ಯಾಧ್ಯಂತ ಸುರಿದ ಮಳೆಯಿಂದ ರಸ್ತೆಗಳಲ್ಲಿ ತಗ್ಗುಬಿದ್ದಿವೆ, ಸೇತುವೆಗಳು ಕಡಿದುಕೊಂಡು ಹೋಗಿವೆ, ರಸ್ತೆಯ ಅಲ್ಲಲ್ಲಿ ಬಿರುಕುಬಿಟ್ಟ ಪರಿಣಾಮ  ರಸ್ತೆಯಲ್ಲಾಕೆಟ್ಟುಹೋಗಿವೆ ಇದರಿಂದ ಗ್ಯಾಸ್ ತುಂಬಿಕೊಂಡು ಬರಲು ಜೀವ ಭಯದಿಂದ ಚಾಲಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು ಇದರಿಂದ ಗ್ಯಾಸ್ ಗೆ ಬರ ಸೃಷ್ಟಿಯಾಗುತ್ತಿದೆ ಎಂದು ಹೇಳಲಾಗುತ್ತಿತ್ತು ಆದರೆ ಈಗ ಮಳೆಕಡಿಮೆ ಯಾಗಿದೆ ಅಲ್ಲಲ್ಲಿ ರಸ್ತೆ ರಿಪೇರಿ ಕಾರ್ಯನಡೆದಿದೆ ಆದರೂ ಸಹಿತ ಗ್ಯಾಸ್ ಗಳ ತೊಂದರೆ ಏಕೆ ಎಂದು ಸಾರ್ವಜನಿಕರು ಪ್ರಶ್ನೆಸುತ್ತಿದ್ದಾರೆ

ಅನ್ನ ಬೆಯುತ್ತಿರುತ್ತದೆ ಗ್ಯಾಸ್ ಖಾಲಿಯಾಗಿ ಬಿಡುತ್ತದೆ  ಎರಡನೇ ಸಿಲಿಂಡರ ಹಚ್ಚಬೇಕೆಂದರು ಅದು ಖಾಲಿ ಇರುತ್ತದೆ ಏನು ಮಾಡುವುದರು ಹೇಳಿ ಗ್ಯಾಸ್ ಗೆ ಎಲ್ಲಿ ಹೋಗುವುದು ಅಡುಗೆ ಹೇಗೆ ಮಾಡುವುದು ಎಂಬ ಚಿಂತೆ ನಮ್ಮ ಕಾಡುತ್ತಿದೆ ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿಬರುತ್ತಿದೆ

ನಾವು 4-5 ಲೋಡ್ ಎಂದು ಆರ್ಡರ ಮಾಡುತ್ತೇವೆ  ಆದರೆ ಬರುವುದು 1-2 ಲೋಡ ಮಾತ್ರ. ಬಿಸಿಊಟಕ್ಕೆ ಹಾಗೂ ಅಂಗನವಾಡಿಗಳಿಗೆ ಯಾವುದೇ ಪರಿಸ್ಥಿತಿಯಲ್ಲಿ ಸರಬರಾಜ ಮಾಡಲೇ ಬೇಕು ಇದರಿಂದ ನಮಗೆ ಯಾರಿಗೆ ಸರಬರಾಜು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ನಮಗೆ ಒತ್ತಡ ಬಹಳವಿದೆ ಮುಂದಿನ ವಾರ ಸರಿಯಾಗಬಹುದು ಎಂದು ಹೇಳುತ್ತಿದ್ದಾರೆ-ಎಚ್.ಪಿ ಗ್ಯಾಸ್ ವಿತರಕರು ಬಸವರಾಜ ಒಶೀಮಠ

ಕೆಲಸದ ಒತ್ತಡದಲ್ಲಿಯೇ ಇರುವ ಬಹುತೇಕ ಜನರು ಗ್ಯಾಸ್‍ಗೆ ಪಾಳೆಹಚ್ಚಲು ಸಮಯವಿರುವುದಿಲ್ಲ  5-10 ರೂ ಜಾಸ್ತಿಯಾದರೂ ಚಿಂತೆಯಿಲ್ಲಾ ಮೊದಲಿನ ರೀತಿಯಲ್ಲಿಯೇ ಅಡುಗೆ ಅನಿಲ ಮನೆ ಮನೆಗೆ ವಿತರಸಿ ಜನ ಸಮಸ್ಯ ವನ್ನು ದೂರ ಮಾಡಲಿ- ಅಲೇ ಮುಸ್ತಾಫಾ ಬೆಂಡಿಗೇರಿ

ಗೂಡೌನಗೆ ಹೋಗಿ ಗ್ಯಾಸ್ ತಂದಾಗ ಅದರ ಮೂಲ ಬೆಲೆಯನ್ನು ಪಡೆಯಲಿ ಹೆಚ್ಚಿಗೆ ಹಣ ಏಕೆ ಪಡೆಯುವುದು? ಇದಕ್ಕೆ ನಮ್ಮ ವಿರೋಧವಿದೆ.ಗೂಡೌನದಿಂದ ಗ್ರಾಹಕರ ಮನೆ 5ಕಿ.ಮಿ ಜಾಸ್ತಿಯಾಗಿದ್ದರೆ ಅಲ್ಲಿಂದ 1 ಕಿಮಿಗೆ 69 ಪೈಸೆ ಹೆಚ್ಚಿಗೆ ತೆಗೆದುಕೊಳ್ಳಲು ಅವಕಾಶವಿದೆ.-
ಪೀಗ್ಮಿ ಸಂಗ್ರಹಗಾರ ಸಲೀಂಜಾವೇದ ಶೇಖ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...