ಹೊಸದಿಲ್ಲಿ: ಗಗನಕ್ಕೇರಿದ ಅಡುಗೆ ಅನಿಲ ದರ, ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ 25 ರೂ.ಏರಿಕೆ, 25 ದಿನಗಳಲ್ಲಿ 125 ರೂ. ಹೆಚ್ಚಳ

Source: VB | By S O News | Published on 2nd March 2021, 1:13 PM | National News |

ಹೊಸದಿಲ್ಲಿ: ಬೆಲೆ ಏರಿಕೆಯ ಬೆಂಕಿಯಲ್ಲಿ ಬೇಯುತ್ತಿರುವ ಶ್ರೀಸಾಮಾನ್ಯ ಸದ್ಯೋಭವಿಷ್ಯದಲ್ಲಿ ಊಟಕ್ಕೂ ತತ್ವಾರ ಪಡಬೇಕಾಗುತ್ತದೇನೋ? ತೈಲ ಮಾರಾಟ ಕಂಪೆನಿಗಳು ಅಡಿಗೆ ಅನಿಲದ ಸಿಲಿಂಡರ್‌ನ ಬೆಲೆಯನ್ನು ಸೋಮವಾರ ಮತ್ತೆ 25 ರೂ.ಹೆಚ್ಚಿಸಿವೆ. ಇದರೊಂದಿಗೆ ಈ ವರ್ಷ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಒಟ್ಟು 125 ರೂ.ಗಳ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ ಬೆಲೆ ಶೀಘ್ರವೇ 1,000 ರೂ.ತಲುಪಿದರೆ ಅಚ್ಚರಿ ಪಡಬೇಕಿಲ್ಲ.

ಮಂಗಳವಾರದಿಂದ ರಾಜಧಾನಿ ದಿಲ್ಲಿಯಲ್ಲಿ ಗೃಹಬಳಕೆ ಅನಿಲ ಬಳಕೆದಾರರು 14.2 ಕೆ.ಜಿ. ತೂಕದ ಪ್ರತಿ ಸಿಲಿಂಡರ್ ಗೆ 819 ರೂ.ಗಳನ್ನು ಪಾವತಿಸಬೇಕಿದೆ.

“ಅಚ್ಛೇ ದಿನ್' ಇಷ್ಟಕ್ಕೇ ಮುಗಿಯಲಿಲ್ಲ. 19 ಕೆ.ಜಿ.ಯ ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್‌ನ ಬೆಲೆಯನ್ನೂ 95 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇನ್ನು ಮುಂದೆ ದಿಲ್ಲಿಯಲ್ಲಿ
ಬಳಕೆದಾರರು ಪ್ರತಿ ಸಿಲಿಂಡರ್‌ಗೆ 1,614 ರೂ.  ಗಳನ್ನು ಕಕ್ಕಬೇಕಾಗುತ್ತದೆ. ಸಾಗಣೆ ವೆಚ್ಚ ಮತ್ತು ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಇತರ ಸ್ಥಳಗಳಲ್ಲಿ ಈ ಬೆಲೆಗಳು
ಹೆಚ್ಚುಕಡಿಮೆಯಾಗಲಿವೆ.

ಈ ವರ್ಷ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಫೆಬ್ರವರಿ 4ರಂದು 25 ರೂ. ಹೆಚ್ಚಳವಾಗಿತ್ತು. ಆನಂತರ  ಫೆಬ್ರವರಿ 15ರಂದು 50 ರೂ. ಹಾಗೂ ಫೆ.25ರಂದು 25 ರೂ. ಏರಿಕೆಯಾಗಿತ್ತು. ಇಂದು ಮತ್ತೆ 25 ರೂ. ಏರಿಕೆಯಾಗಿರುವುದರಿಂದ ಅಡುಗೆ ಅನಿಲ ಸಿಲಿಂಡರ್ ನ ದರ ಕೇವಲ 25 ದಿನಗಳಲ್ಲಿ ಒಟ್ಟು 125 ರೂ. ಹೆಚ್ಚಳವಾದಂತಾಗಿದೆ.

ತೈಲ ಮಾರಾಟ ಕಂಪೆನಿಗಳು ಕಳೆದ ವರ್ಷದ ಡಿಸೆಂಬರ್ ನಲ್ಲೂ, ಅಂದರೆ ಎರಡು ತಿಂಗಳ ಹಿಂದೆ ಎಲ್‌ಪಿಜಿ ಬೆಲೆಗಳನ್ನು ಎರಡು ಬಾರಿ ಹೆಚ್ಚಿಸಿದ್ದವು.

ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಎರಡು ಮುಖ್ಯ ಘಟಕಗಳಾದ ಪ್ರೊಪೇನ್ ಮತ್ತು ಬುಟೇನ್‌ನ ಜಾಗತಿಕ ಬೆಲೆಗಳೊಂದಿಗೆ ಅಧಿಕೃತವಾಗಿ ತಳುಕು ಹಾಕಲಾಗಿದೆಯಾದರೂ ಭಾರತದಲ್ಲಿ ಇಂಧನಗಳ ಮೂಲ ವೆಚ್ಚಕ್ಕಿಂತ ಕೇಂದ್ರ ಮತ್ತು ರಾಜ್ಯ ತೆರಿಗೆಗಳೇ ಹೆಚ್ಚಾಗಿವೆ. ಸಿಗುತ್ತಿದ್ದ ಅಲ್ಪಸ್ವಲ್ಪ ಸಬ್ಸಿಡಿಯೂ ಎಂದೋ ಮಾಯವಾಗಿದೆ.

ಹೆಚ್ಚುತ್ತಿರುವ ಬೆಲೆಗಳಿಂದಾಗಿ ಈ ಅಗತ್ಯ ಇಂಧನಕ್ಕೆ ಬೇಡಿಕೆಯೂ ಕುಸಿದಿದೆ. ಮಾಸಿಕ ಆಧಾರದಲ್ಲಿ ಜನವರಿಯಲ್ಲಿ ಎಲ್‌ಪಿಜಿ ಬಳಕೆ ಶೇ.2ರಷ್ಟು ಕುಸಿತ ದಾಖಲಿಸಿದ್ದು, ಬೇಡಿಕೆ 2.492 ಮಿಲಿಯನ್ ಟನ್‌ಗಳಷ್ಟಿತ್ತು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...