ಬೆಳಗಾವಿಯಲ್ಲಿ ಶಿವಸೇನೆ ಪುಂಡಾಟಕ್ಕೆ ಕನ್ನಡಿಗರಿಂದ ತಕ್ಕ ಶಾಸ್ತಿ: ಮೂರ್ತಿ ವಿಚಾರವಾಗಿ ಗಲಾಟೆ

Source: so news | Published on 10th August 2020, 12:04 AM | State News | Don't Miss |

 

ಬೆಳಗಾವಿ; ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮ ಅಕ್ಷರಶಃ ನಿಗಿನಿಗಿ ಕೆಂಡವಾಗಿತ್ತು. ಅದಕ್ಕೆ ಕಾರಣವಾಗಿದ್ದು ಶಿವಾಜಿ ಮಹಾರಾಜರ ಮೂರ್ತಿ. ಹೌದು ಮಣಗುತ್ತಿ ಗ್ರಾಮದಲ್ಲಿ ಮರಾಠಾ ಸಮುದಾಯದ ಕೆಲ ಯುವಕರ ಗುಂಪು ಯಾವುದೇ ಪರವಾನಗಿ ಪಡೆಯದೆ ಗ್ರಾಮದ ಲಕ್ಷ್ಮೀ ದೇವಸ್ಥಾನದ ಪಕ್ಕ ಶಿವಾಜಿ ಮೂರ್ತಿಯನ್ನ ಸ್ಥಾಪನೆ ಮಾಡಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ಮರಾಠಾ ಸಮುದಾಯದ ಮುಖಂಡರು ಪರವಾನಗಿ ಇಲ್ಲದೆ ಮೂರ್ತಿ ಕೂಡಿಸುವುದು ಬೇಡ. ಪರವಾನಗಿ ಪಡೆದು ಮೂರ್ತಿ ಪ್ರತಿಷ್ಟಾಪನೆ ಮಾಡಿ ಎಂದು ಇದ್ದ ಮೂರ್ತಿಯನ್ನು ತೆರುವುಗೊಳಿಸಿದ್ದಾರೆ. ಆದರೆ, ಕೆಲ ಶಿವಸೇನೆ ಕಿಡಿಗೇಡಿಗಳು ಇದನ್ನೆ ಬಂಡವಾಳವಾಗಿ ಮಾಡಿಕೊಂಡು ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಲು ಯತ್ನಿಸಿದ್ದಾರೆ.
ಮೂರ್ತಿ ಸ್ಥಾಪನೆ ಮಾಡಿದ ಪೋಟೊ ಹಾಗೂ ತೆರುವುಗೊಳಿಸಿದ ಪೋಟೊ ಬಳಸಿಕೊಂಡು  ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಅನ್ಯಾಯ ವಾಗುತ್ತಿದೆ ಕನ್ನಡಿಗರು ಹಾಗೂ ಜಿಲ್ಲಾಡಳಿತ ಶಿವಾಜಿ ಮೂರ್ತಿ ತೆರುವುಗೊಳಿಸಿ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಸೋಷಿಯಲ್ ಮೀಡಿಯಾ ಮೂಲಕ ವಿಷದ ಬೀಜ ಬಿತ್ತಿದೆ.
ಅಲ್ಲದೆ ಬೆಳಗಾವಿ ನಗರದಿಂದ ನೂರಾರು ಶಿವಸೇನೆ ಕಾರ್ಯಕರ್ತರು ಗ್ರಾಮದಲ್ಲಿ ಬಂದು ಗ್ರಾಮಸ್ಥರಿಗೆ ಕುಮ್ಮಕ್ಕು ನೀಡಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಶಿವಸೇನೆಯ ಈ ಪುಂಡಾಟಕ್ಕೆ ಇಲ್ಲಿನ ಮರಾಠಿಗರು ವಿರೋಧ ವ್ಯಕ್ತ ಪಡಿಸಿದ್ದಾರೆ. ಶಿವಸೇನೆ ನಾಯಕರು ಇಲ್ಲಿ ರಾಜಕೀಯ ಮಾಡುತ್ತಿದ್ದು. ನಮ್ಮ ಗ್ರಾಮಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಗ್ರಾಮದ ಮುಖಂಡರು ಒಂದೆಡೆ ಶಾಂತಿ ಸಭೆ ನಡೆಸಲು ಮುಂದಾದರು ಶಿವಾಜಿ ಮೂರ್ತಿಯನ್ನ ಪರವಾನಗಿ ಪಡೆದು ಪ್ರತಿ ಸ್ಥಾಪನೆ ಮಾಡಲು ನಿರ್ಧಾರ ಮಾಡುತ್ತಿದ್ದಂತೆ ಇತ್ತ ಕೆಲ ಶಿವಸೇನೆ ಪುಂಡರು ಗ್ರಾಮದಿಂದ ಹೊರ ಬಂದು ಪಕ್ಕದಲ್ಲೆ ಇದ್ದ ರಾಷ್ಟ್ರೀಯ ಹೆದ್ದಾರಿ 4 ತಡೆದು ಪುಂಡಾಟಿಕೆ ನಡೆಸಿದ್ದಾರೆ. ಅಲ್ಲದೆ ಪಕ್ಕದ ಬೆನ್ನಳಿ ಗ್ರಾಮದ ಕನ್ನಡಿಗರ ಮೇಲೆ ಹಲ್ಲೆ ನಡೆಸಲು ಮುಂದಾದ್ರು ಇದಕ್ಕೆ ಕೆರಳಿದ ಕನ್ನಡಿಗರು ಶಿವಸೇನೆ ಪುಂಡರಿಗೆ ಸರಿಯಾದ ಶಾಸ್ತಿಯನ್ನೆ ಮಾಡಿದ್ದಾರೆ

Read These Next

ಸಪ್ಟೆಂಬರ್ 28 ರಂದು ಕರ್ನಾಟಕ ಬಂದ್ ಹಿನ್ನೆಲೆ. ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 29 ಕ್ಕೆ.

ಬೆಂಗಳೂರು : ಸಪ್ಟೆಂಬರ್ 28 ರಂದು ನಡೆಯುವ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದೂಡಿದೆ.

ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಂದ ಭಾರತವನ್ನು ಎಷ್ಟು ಸಮಯ ಹೊರಗಿಡುತ್ತೀರಿ: ಪ್ರಧಾನಿ ಮೋದಿ

ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಂದ ಭಾರತವನ್ನು ಎಷ್ಟು ಸಮಯ ಹೊರಗಿಡುತ್ತೀರಿ: ಪ್ರಧಾನಿ ಮೋದಿ